Encounter: ಗಡಿಯಲ್ಲಿ ನುಸುಳುತ್ತಿದ್ದ ಇಬ್ಬರು ಪಾಕ್ ಉಗ್ರರನ್ನು ಹೊಡೆದುರುಳಿಸಿದ ಸೇನೆ!

Encounter: ಆಪರೇಷನ್ ಸಿಂಧೂರ ಹೆಸರಿನಲ್ಲಿ ದಿಟ್ಟ ಕಾರ್ಯಾಚರಣೆಯ ಬಳಿಕವು ಪಾಕ್ ನ ಭಯೋತ್ಪಾದಕರು (Terrorist) ಜಮ್ಮು ಮತ್ತು ಕಾಶ್ಮೀರ (Jammu and Kashmir) ಪೂಂಚ್ ಜಿಲ್ಲೆಯ ಎಲ್‌ಸಿ (LOC) ಗಡಿ ದಾಟುತ್ತಿದ್ದ ಇಬ್ಬರನ್ನು ಭದ್ರತಾ ಪಡೆ (Encounter) ಹೊಡೆದುರುಳಿಸಿದ್ದಾರೆ.

ಭಾರತ ಹಾಗೂ ಪಾಕಿಸ್ತಾನದ ನಡುವಿನ ಗಡಿ ನಿಯಂತ್ರಣ ರೇಖೆಯ ಬಳಿ ಅನುಮಾನಾಸ್ಪದ ವ್ಯಕ್ತಿಗಳು ಚಲನವಲನ ಪತ್ತೆಯಾಗಿತ್ತು. ಈ ಬಗ್ಗೆ ಶೋಧ ಕಾರ್ಯ ನಡೆಸುತ್ತಿದ್ದಾಗ ಇಬ್ಬರು ಭಯೋತ್ಪಾದಕರು ಗಡಿ ರೇಖೆ ದಾಖಲು ಪ್ರಯತ್ನಿಸುತ್ತಿದ್ದರು.
ಇದನ್ನು ಗಮನಿಸಿದ ಭದ್ರತಾ ಪಡೆ ಸಿಬ್ಬಂದಿಗಳು ಗುಂಡು ಹಾರಿಸಿ ಇಬ್ಬರನ್ನೂ ಹೊಡೆದುರುಳಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯ ಇನ್ನಷ್ಟು ಭಯೋತ್ಪಾದಕರು ಬಂದಿರುವ ಅನುಮಾನ ವ್ಯಕ್ತವಾಗಿದ್ದು, ಶೋಧ ಕಾರ್ಯ ಮುಂದುವರಿಸಿದ್ದಾರೆ.
Comments are closed.