Prashaanth Kini: ನಟ ದರ್ಶನ್‌ ನನ್ನು ಜೈಲಿಗೆ ಕಳಿಸಿದ್ದೇ ರಾಜ್‌ ಕುಟುಂಬ – ಜ್ಯೋತಿಷಿ ಹೇಳಿಕೆ

Share the Article

Prashaanth Kini: ರೇಣುಕಾ ಸ್ವಾಮಿ ಕೊಲೆ ಪ್ರಕರಣದಡಿ ಸದ್ಯ ನಟ ದರ್ಶನ್ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ದರ್ಶನ್ ಜಾಮೀನಿನ ವಿಚಾರವನ್ನು ಕರ್ನಾಟಕ ಪೊಲೀಸರು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದು, ಸುಪ್ರೀಂ ಇದೀಗ ಈ ಜಾಮೀನ ವಿಚಾರವನ್ನು ಕಾಯ್ದಿರಿಸಿದೆ. ಮತ್ತೊಂದೆಡೆ ದರ್ಶನ ಅಭಿಮಾನಿಗಳು ಹಾಗೂ ನಟಿ ರಮ್ಯಾ ಮತ್ತು ನಟ ಪ್ರಥಮ್ ವಿರುದ್ಧ ಗುದ್ದಾಟಗಳು ಶುರುವಾಗಿದೆ. ಈ ಬೆನ್ನಲ್ಲೇ ಸ್ವಾಮೀಜಿ ಒಬ್ಬರು ದರ್ಶನ್ ಜೈಲಿಗೆ ಹೋಗಲು ರಾಜ್ ಕುಟುಂಬ ಕಾರಣ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

ಹೌದು, ತಾನು ಜ್ಯೋತಿಷಿ ಎಂದು ಹೇಳಿಕೊಂಡು ಕ್ರಿಕೆಟ್‌ನಲ್ಲಿ ಆ ತಂಡ ಗೆಲ್ಲುತ್ತೆ, ಈ ತಂಡ ಗೆಲ್ಲುತ್ತೆ, ಈ ರಾಜಕಾರಣಿಗೆ ಸಂಕಷ್ಟ ಎಂದು ಸಾಲು ಸಾಲು ಬುರುಡೆ ಬಿಡುತ್ತಾ ಬಂದಿರುವ ಪ್ರಶಾಂತ್‌ ಕಿಣಿ ಇದೀಗ ದರ್ಶನ್‌ ಜೈಲಿಗೆ ಹೋಗಲು ಕನ್ನಡ ಚಿತ್ರರಂಗದ ಗಾಡ್‌ಫಾದರ್‌ ಕಾರಣ ಎಂದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಗಾಡ್‌ಫಾದರ್‌ ಫ್ಯಾಮಿಲಿ ಎಂದು ಕರೆಸಿಕೊಳ್ಳುವ ಏಕೈಕ ಕುಟುಂಬವೆಂದರೆ ಅದು ದೊಡ್ಮನೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ.

ಅಂದಹಾಗೆ ಅನೇಕ ನಟ ಹಾಗೂ ನಟಿಯರನ್ನು ಪರಿಚಯಿಸಿರುವ ದೊಡ್ಮನೆ ಗಾಡ್‌ಫಾದರ್‌ ಕುಟುಂಬವೇ. ನಟಿ ರಮ್ಯಾ ಸಹ ಇದೇ ರಾಜ್‌ ಫ್ಯಾಮಿಲಿ ಮೂಲಕ ಚಿತ್ರರಂಗಕ್ಕೆ ಬಂದವರು. ಸದ್ಯ ರಮ್ಯಾ ದರ್ಶನ್‌ ಅಭಿಮಾನಿಗಳ ವಿರುದ್ಧ ಮಾತನಾಡಿರುವುದನ್ನು ಪ್ರಶಾಂತ್‌ ಕಿಣಿ ಗಾಡ್‌ಫಾದರ್‌ ಫ್ಯಾಮಿಲಿ ತನ್ನ ಸೈನಿಕರನ್ನು ಛೂ ಬಿಟ್ಟಿದೆ ಎಂದಿದ್ದಾನೆ. ನಿಧಾನಕ್ಕೆ ನೋಡಿ ಆ ಕುಟುಂಬ ದರ್ಶನ್‌ ಜೈಲಿಗೆ ಹೋಗಲಿ ಎಂದು ಆಶಿಸುತ್ತಿದೆ ಎಂದು ಬರೆದುಕೊಂಡಿದ್ದಾನೆ. ಇಷ್ಟು ದಿನಗಳ ಕಾಲ ಬಾಯಿಗೆ ಬಂದ ಸಾಲನ್ನು ಬರೆದು ತಾನು ಭವಿಷ್ಯ ಹೇಳುತ್ತೇನೆ ಎಂದು ಹೇಳುತ್ತಿದ್ದ ಪ್ರಶಾಂತ್‌ ಕಿಣಿ ದರ್ಶನ್‌ ಜೈಲಿಗೆ ಹೋಗಲು ಗಾಡ್‌ಫಾದರ್‌ ಫ್ಯಾಮಿಲಿ ಕಾರಣ ಎಂದು ಬರೆದುಕೊಂಡು ನಾಲಿಗೆಹರಿಬಿಟ್ಟಿದ್ದಾನೆ.

ki

Comments are closed.