Dharmasthala : ಧರ್ಮಸ್ಥಳ ಪ್ರಕರಣ- ಮೊದಲ ಸಮಾಧಿ ಕಾರ್ಯಾಚರಣೆ ಮುಕ್ತಾಯ, 8 ಅಡಿ ಆಳ, 15 ಅಡಿ ಅಗಲ ಅಗೆದರೂ ಸಿಗದ ಕಳೇಬರ

Share the Article

 

Dharmasthala : ಭಾರಿ ಕುತೂಹಲ ಕೆರಳಿಸಿದ್ದ ಧರ್ಮಸ್ಥಳದಲ್ಲಿನ ಮೊದಲ ದಿನದ ಉತ್ಖನನ ಕಾರ್ಯ ಸ್ಥಗಿತಗೊಂಡಿದೆ. ಹೌದು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ದಿನ ಎಸ್ ಐ ಟಿ ತಂಡ ಅನಾಮಿಕ ದೂರುದಾರನನ್ನು ಸ್ಥಳಕ್ಕೆ ಕರೆದು ಸ್ಥಳ ಮಹಜರು ನಡೆಸಿತ್ತು.  ಈ ಸಂದರ್ಭದಲ್ಲಿ ದೂರು ದಾದರ ಸುಮಾರು 13 ಸಮಾಧಿಗಳನ್ನು ಗುರುತಿಸಿದ್ದ. ಇಂದು ಎಸ್‌ಐಟಿ ಅಧಿಕಾರಿಗಳು ಎಲ್ಲಾ ಕಾನೂನು ಪ್ರಕ್ರಿಯೆ ಮೂಲಕ ಸಮಾಧಿ ಅಗೆದಿದ್ದಾರೆ.

ಅನಾಮಿಕ ಗುರುತಿಸಿದ ಮೊದಲ ಸಮಾಧಿಯನ್ನು ಕಾರ್ಮಿಕರ ಮೂಲಕ 4 ಅಡಿ ಅಗೆಸಲಾಯಿತು. ಕಳೆಬರ ಪತ್ತೆಯಾಗದ ಸಂದರ್ಭದಲ್ಲಿ ಬಳಿಕ ಜೆಸಿಬಿ ಮೂಲಕ 8 ಅಡಿ ಆಳ 15 ಅಡಿ ಅಗಲ ಅಗೆದರೂ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. ಹೀಗಾಗಿ ಮೊದಲ ಸಮಾಧಿ ಸ್ಥಳದ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ.

6 ಅಡಿಯಲ್ಲಿ ಶವ ಹೂತಿಟ್ಟಿರುವುದಾಗಿ ದೂರುದಾರ ಹೇಳಿದ್ದ. ಆದರೆ 6 ಅಡಿಯಲ್ಲೂ ಸಿಗದ ಕಾರಣ 8 ಅಡಿ ಅಗೆಯಲಾಗಿದೆ. ಕಳೇಬರ ಸಿಗದ ಕಾರಣ ಮೊದಲ ಸಮಾಧಿ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ. ಇನ್ನು ದೂರುದಾರ ಗುರುತಿಸಿದ 2ನೇ ಸಮಾಧಿ ಸ್ಥಳ ಅಗೆಯುವ ಕಾರ್ಯ ನಾಳೆ ಆರಂಭಗೊಳ್ಳಲಿದೆ.

Comments are closed.