Pratam: ದರ್ಶನ್ ಹಾಕಿರುವುದೇ ವಿಗ್, ಅವರತ್ರ ಇನ್ನೇನು ಕಿತ್ತುಕೊಳ್ಳಲಿ.. ಬೇರೆ ಕಡೆಗೆಲ್ಲಾ ನಾನು ಕೈ ಹಾಕೊಲ್ಲ… – ‘ಒಳ್ಳೆ ಹುಡುಗ’ ಪ್ರಥಮ್ ಹೇಳಿಕೆ !!

Pratam: ದರ್ಶನ್ ಅಭಿಮಾನಿಗಳು ಮತ್ತು ನಟ ಪ್ರತಾಪ್ ಅವರ ನಡುವಿನ ಗುದ್ದಾಟ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಪ್ರತಾಪ್ ಅವರನ್ನು ದರ್ಶನ ಅಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡಿ ಹಿಂಡುತ್ತಿದ್ದಾರೆ. ಆದರೂ ಇದ್ಯಾವುದಕ್ಕೂ ಕ್ಯಾರೆ ಎನ್ನದ ಪ್ರಥಮ್ ಧೈರ್ಯವಾಗಿ ಬಂದು ಮಾಧ್ಯಮಗಳ ಎದುರು ದರ್ಶನ್ ಫ್ಯಾನ್ಸ್ ಗೆ ಮುಟ್ಟಿಕೊಳ್ಳುವಂತೆ ಟಾಂಗ್ ನೀಡುತ್ತಿದ್ದಾರೆ.

ಮೊನ್ನೆ ತಾನೆ ಪ್ರಥಮ್ ಅವಾರು ದರ್ಶನ್ ಸರ್, ಒಳ್ಳೆಯವ್ರ ಸಹವಾಸ ಇಟ್ಕೊಳ್ಳಿ. ನಿಮ್ಗೆ ಪ್ರೀತಿಯಿಂದ ಹೇಳ್ತಿದಿನಿ ದರ್ಶನ್ ಸರ್. ನಿಮ್ ಹುಡುಗರಿಗೆ ಹೇಳಿ. ನಿಮ್ಗೆ ಫ್ಯಾನ್ಸ್ ಇರುವಂತೆ ನಮಗೂ ಇದ್ದಾರೆ ಸರ್, ನಾವು ಪ್ರೀತಿ ಗಳಿಸಿದ್ದೀವಿ ಸರ್. ದರ್ಶನ್ ಜೊತೆ ಇದ್ದವ್ರು ಯೋಗ್ಯರು ಇರಬೇಕು. ನಮ್ಗೆ ಸಮಸ್ಯೆ ಆದ್ರೆ ಸುಮ್ಮನೆ ಇರಲ್ಲ ಅಂತ ವಾರ್ನಿಂಗ್ ಕೊಟ್ಟಿದ್ದರು.
ಇದೀಗ ಮತ್ತೆ ಪ್ರಥಮ ಹಾಗೂ ದರ್ಶನ್ ಫ್ಯಾನ್ಸ್ಗಳ ವಾರ ಮುಂದುವರೆದಿದ್ದು ಪ್ರಥಮ್ ಅವರಿಗೆ ದರ್ಶನ್ ಅಭಿಮಾನಿಗಳು ನಮ್ಮ ಡಿ ಬಾಸ್ ನದ್ದು ಏನನ್ನು ಕಿತ್ತಿಕೊಳ್ಳಲು ಆಗಲ್ಲ ಎಂದು ಸವಾಲು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಥಮ ಅವರು ದರ್ಶನ್ ಹಾಕೋದೇ ವಿಗ್, ನಾನು ಏನು ಕಿತ್ತುಕೊಳ್ಳಲಿ ಸರ್. ಗಡ್ಡ, ಮೀಸೆ ಅಂತೂ ಬಿಡಲ್ಲ ಅದನ್ನು ಬೋಳಿಸ್ತಾರೆ. ನೀನು ಕಿತ್ತಿಕೊಳ್ಳಲಿ ಸರ್. ಇನ್ನು ಏನನ್ನೋ ಕಿತ್ತುಕೊಳ್ಳಲಿ ಅಂದರೆ ನಾನ್ಯಾಕೆ ಅಲ್ಲಿಗೆಲ್ಲ ಕೈ ಹಾಕಿ ಕಿತ್ತುಕೊಳ್ಳಲಿ ಎಂದು ಪ್ರಶ್ನೆ ಮಾಡಿದ್ದಾರೆ.
ಅಲ್ಲದೆ ನನ್ನ ದೊಡ್ಡತನವನ್ನು ಅರ್ಥ ಮಾಡಿಕೊಳ್ಳಿ, ಸುಮಾರು 2000 ಪೇಜ್ ಗಳಲ್ಲಿ ನನ್ನನ್ನು ಟ್ರೋಲ್ ಮಾಡಿಸಿದ್ದೀರಿ. ನನಗೂ ಸಂಸಾರ ಅನ್ನೋದು ಇದೆ ನನ್ನ ಸಂಸಾರದ ಮ್ಯಾಟರ್ ಗೆ ನೀವು ಬಂದಿದ್ದೀರಿ. ಇನ್ನು ಮುಂದೆ ಸುಮ್ಮನಿರುವುದಿಲ್ಲ. ನಿಮ್ಮ ಬ್ಯಾರಿಕ್ ನಲ್ಲಿ ಇರುವವರು ವೆಪನ್ ತೋರಿಸಿರುವುದಕ್ಕೆ ನೀವು ಬಂದು ಆನ್ಸರ್ ಮಾಡಬೇಕು ಖಡಕ್ಕಾಗಿ ವಾರ್ನಿಂಗ್ ಮಾಡಿದ್ದಾರೆ.
https://www.instagram.com/reel/DMsKl9sIFaA/?igsh=MTAxODVnaWVpMWpoeQ==
Comments are closed.