RAMYA: ಅಭಿಮಾನಿಗಳಿಂದ ಅಶ್ಲೀಲ ಮೆಸೇಜ್: ರಮ್ಯಾಗೆ ಸಾಥ್ ನೀಡಿದ ಶಿವಣ್ಣ!

Ramya: ನಟಿ ರಮ್ಯಾ (Ramya) ಬಗ್ಗೆ ದರ್ಶನ್ (Darshan) ಅಭಿಮಾನಿಗಳು ಅಶ್ಲೀಲ ಮೆಸೇಜ್‌ಗಳನ್ನ ಮಾಡಿರುವ ವಿಚಾರವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shiva rajkumar) (Geetha) ಅವರು ನಟಿಗೆ ಸಾಥ್ ನೀಡಿದ್ದು, ರಮ್ಯಾ ಜೊತೆ ಸದಾ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

ಶಿವಣ್ಣ ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ. ಅದನ್ನ ನಾವು ಸಹಿಸಬಾರದು. ಮಹಿಳೆಯರನ್ನ ತಾಯಿಯಾಗಿ, ಅಕ್ಕನಾಗಿ, ಮಗಳಾಗಿ. ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ ಎಂದು ಹೇಳಿದ್ದಾರೆ.
ನಿಮ್ಮ ನಿಲುವು ಸರಿಯಿದೆ @divyaspandana ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ. pic.twitter.com/89K1rpnlHj
— DrShivaRajkumar (@NimmaShivanna) July 29, 2025
Comments are closed.