Lok Kalyan: ಲೋಕ ಕಲ್ಯಾಣಕ್ಕಾಗಿ ಸತತ ಐದು ದಿನಗಳಿಂದ ಮರವನ್ನೇರಿ‌ ಕುಳಿತ ಸ್ವಾಮೀಜಿ – ಅವಧೂತ ಸ್ವಾಮೀಜಿಯ ಕಠಿಣ ಅನುಷ್ಠಾನ

Share the Article

ಇದನ್ನೂ ಓದಿ: Dharmasthala Case: ಮೊದಲ ಪಾಯಿಂಟ್‌ ಉತ್ಖನನದಲ್ಲಿ ಏನೂ ಸಿಗದ ಹಿನ್ನೆಲೆ, 2ನೇ ಗುರುತಿನಲ್ಲಿ ಉತ್ಖನನ

Lok Kalyan: ಲೋಕ ಕಲ್ಯಾಣಕ್ಕಾಗಿ ಸತತ ಐದು ದಿನಗಳಿಂದ ಸ್ವಾಮೀಜಿಯೊಬ್ಬರು ಕೊಪ್ಪಳ ಜಿಲ್ಲೆಯಲ್ಲಿ ಮರವನ್ನೇರಿ‌ ಕುಳಿತಿದ್ದಾರೆ. ಸ್ವಾಮೀಜಿಯ ಕಠಿಣ ಅನುಷ್ಠಾನ ಕಂಡು ಜನರು ಅಚ್ಚರಿಗೊಂಡಿದ್ದಾರೆ. ಜಿಲ್ಲೆಯ ಕಾರಟಗಿ ತಾಲೂಕಿನಲ್ಲಿ ಆಹಾರ ಇಲ್ಲದೆ ಮರದ ಮೇಲೆ ವಾಸವಾಗಿರುವ ಅವಧೂತ ಸ್ವಾಮೀಜಿಯ ಕಠಿಣ ಅನುಷ್ಠಾನ ಬೆರಗುಗೊಳಿಸುತ್ತಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಾದ್ಯಪುರದಿಂದ ಬಂದಿರುವ ಅವಧೂತ ಸ್ವಾಮೀಜಿ,ಮರದ ಮೇಲೆ ಗೂಡು ಕಟ್ಟಿಕೊಂಡು ದಿನವಿಡಿ ಅನುಷ್ಠಾನ ಮಾಡುತ್ತಿದ್ದಾರೆ‌. ದಿನಕ್ಕೆ ಒಂದು ಬಾರಿ ಒಂದು ಲೋಟ ಹಾಲು ಸೇವೆನೆ ಮಾಡುವ ಅವದೂತ ಸಚ್ಚಿದಾನಂದ ಶ್ರೀಗಳು 101 ದಿನಗಳು ಮರದಲ್ಲಿಯೇ ಕುಳಿತು ಧ್ಯಾನ ಮಾಡುವ ವಾಗ್ದಾನ ಮಾಡಿದ್ದಾರೆ.

ಈ ಹಿಂದೆ 2012 ರಲ್ಲಿ ಆಲದ ಮರದಲ್ಲಿ ಅನುಷ್ಠಾನ ಕುಳಿತು ಈ ಸ್ವಾಮೀಜಿ ದೇಶದ್ಯಾಂತ ಸದ್ದು ಮಾಡಿದ್ದರು. ಇದೀಗ ಕಾರಟಗಿ ತಾಲೂಕಿನ ಮುಷ್ಟೂರು ಬಳಿ ಇರುವ ಬರಗಾಲ ಸಿದ್ದಪ್ಪ ಮಠದ ಆವರಣದ ಮಾವಿನ ತೋಟದಲ್ಲಿರುವ ಮಾವಿನ ಮರ ಏರಿ ಅನುಷ್ಠಾನ ಮಾಡುತ್ತಿದ್ದಾರೆ. ಮೌನಿಯಾಗಿ ಮರದ ಮೇಲೆ ಕುಳಿತು ಸಚ್ಚಿದಾನಂದ ಶ್ರೀಗಳು ಅನುಷ್ಠಾನ ಮಾಡುತ್ತಿದ್ದಾರೆ.

ಇದನ್ನೂ ಓದಿ: Dharmasthala Case: ಮೊದಲ ಪಾಯಿಂಟ್‌ ಉತ್ಖನನದಲ್ಲಿ ಏನೂ ಸಿಗದ ಹಿನ್ನೆಲೆ, 2ನೇ ಗುರುತಿನಲ್ಲಿ ಉತ್ಖನನ

Comments are closed.