Ramya-Darshan: ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ದೂರು ನೀಡಿರುವ ವಿಚಾರ – ಗಂಭೀರವಾಗಿ ಪರಿಗಣಿಸಬೇಕು – ಗೃಹ ಸಚಿವ

Ramya-Darshan: ನಟಿ ರಮ್ಯ ಅವರಿಗೆ ದರ್ಶನ್ ಅಭಿಮಾನಿಗಳು ಮಾಡಿರುವ ಅಶ್ಲೀಲ ಕಮೆಂಟ್ಗಳ ಕುರಿತಾಗಿ ಪೊಲಿಸ್ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್, ಪೊಲೀಸ್ ಅವ್ರು ಕ್ರಮ ತೆಗೆದುಕೊಳ್ತಾರೆ. ಈ ವಿಚಾರ ಬಹಳ ಗಂಭೀರವಾಗಿ ಪರಿಗಣಿಸಬೇಕು. ಮುಂದೆ ಇಂತಹ ಘಟನೆಗಳು ಆಗಬಾರದು, ಅಧಿಕಾರಿಗಳಿಗೆ ನಾನು ಏನೂ ಸೂಚನೆ ಕೊಟ್ಟಿಲ್ಲ. ಆದರೆ ಕಮಿಷನರ್ ಕ್ರಮ ತೆಗೆದುಕೊಳ್ತಾರೆ ಎಂದು ಹೇಳಿದರು.

ಇನ್ನು ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಕಾಮೆಂಟ್ ಪ್ರಕರಣ ಸಂಬಂಧ ಅವರು ಬಂದು ನಿನ್ನೆ ಭೇಟಿ ಮಾಡಿದ್ರು. ಒಂದು ಕಂಪ್ಲೇಟ್ ಕೊಟ್ಟಿದ್ದಾರೆ. ಸಿಸಿಬಿಗೆ ಕೇಸ್ ಟ್ರಾನ್ಸ ವರ್ ಮಾಡಿದ್ದೀವಿ ಎಂದರು.
ಈ ಬಗ್ಗೆ ಎಫ್ ಐಆರ್ ಮಾಡಿ ಡಿಸಿಪಿ ಮಟ್ಟದ ಅಧಿಕಾರಿ ತನಿಖೆ ಮಾಡ್ತಾರೇ. ನಿನ್ನೆ ಎಫ್ ಐಆರ್ ದಾಖಲಿಸಿ ತನಿಖೆ ನಡೆಸಲಾಗ್ತಿದೆ. ಓರ್ವ ಎಸಿಪಿ ಅಧಿಕಾರಿ ನೇತೃತ್ವದಲ್ಲಿ ಕೇಸ್ ಮಾನಿಟರ್ ಮಾಡಲಾಗ್ತಿದೆ. ಸಿಸಿಬಿ ಜಂಟಿ ಆಯುಕ್ತರು ಪ್ರಕರಣದ ತನಿಖೆ ನೋಡಿಕೊಳ್ತಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿಕೆ.
ಇದನ್ನೂ ಓದಿ: Puttur: ಪುತ್ತೂರು: ಮದುವೆಯಾಗಿ ನಂಬಿಸಿ ಯುವತಿಗೆ ವಂಚನೆ ಆರೋಪಿ ಮನೆಯಲ್ಲಿ ಪೊಲೀಸ್ ಮಹಜರು!
Comments are closed.