Dharmasthala : ಶವ ಹೂತಿಟ್ಟ ಪ್ರಕರಣ – ಧರ್ಮಸ್ಥಳಕ್ಕೆ ಮುಸುಕುದಾರಿ ಆಗಮನ !! ಆರೋಪಿಗಳಿಗೆ ಖೆಡ್ಡಾ, ಕ್ಷಣಗಣನೆ ಆರಂಭ!

Dharmasthala : ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು ಇದೀಗ ಅನಾಮಿಕ ಸಾಕ್ಷಿ ದೂರುದಾರನನ್ನು ಬೆಳ್ತಂಗಡಿ ಎಸ್ಐಟಿ ಕಚೇರಿಯಿಂದ ಧರ್ಮಸ್ಥಳಕ್ಕೆ ಕರೆತರಲಾಗುತ್ತಿದೆ

ಹೌದು, ಇಂದು ತನಿಖೆಯ ಭಾಗವಾಗಿ ಅನಾಮಿಕ ದೂರುದಾರನನ್ನು ಸ್ಥಳ ಮಹಜರಿಗೆ ಅಧಿಕಾರಿಗಳು ಕರೆದೊಯ್ಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಈ ಬೆನ್ನಲ್ಲೇ ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಸಾಕ್ಷಿದೂರುದಾರನ ಆಗಮನವಾಗಿತ್ತು. ಇದೀಗ ಅಧಿಕಾರಿಗಳು ಈ ದೂರುದಾರನನ್ನು ಧರ್ಮಸ್ಥಳಕ್ಕೆ ಕರೆತರುತ್ತಿದ್ದಾರೆ.
ತಲೆಬುರುಡೆ ಸ್ಥಳ ಮಹಜರು ಪ್ರಕ್ರಿಯೆ ನಡೆಯಲಿದ್ದು, ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಎಸ್ಪಿ ಸೈಮನ್, ಅರಣ್ಯ ಇಲಾಖೆ, ಭೂ ದಾಖಲೆ ವಿಭಾಗದ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಧರ್ಮಸ್ಥಳ ಬುರುಡೆ ತೆಗೆದ ಜಾಗಕ್ಕೆ ತೆರಳಿದ್ದಾರೆ.
Comments are closed.