KRS Dam: ಮತ್ತೊಮ್ಮೆ ತುಂಬಿದ ಕೆಆರ್‌ಎಸ್‌ – ಕಾವೇರಿ ನದಿಗೆ 85 ಸಾವಿರ ಕ್ಯೂಸೆಕ್ ನೀರು ಬಿಡುಗಡೆ – ನದಿಯತ್ತ ಪ್ರವಾಸಿಗರ ದಂಡು

Share the Article

KRS Dam: ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೆಆರ್ಎಸ್ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜಲಾ ಶಯದ ನೀರಿನ ಮಟ್ಟ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಗೆ 85 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕಳೆದ 3-4 ದಿನಗಳಿಂದ ಕೆಆರ್‌ಎಸ್ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಕಾವೇರಿ ನದಿ ಒಡಲು ಸೇರಿ ಭೋರ್ಗರೆಯುತ್ತಿರುವುದರಿಂದ ಪ್ರವಾಸಿಗರು ನದಿ ನೋಡಲು ಮುಗಿ ಬೀಳುತ್ತಿದ್ದಾರೆ.

ಕೊಡಗು ಜಿಲ್ಲೆಯ ಕಾವೇರಿ ನದಿಯ ಉಗಮಸ್ಥಾನ ಭಾಗಮಂಡಲದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಕಾವೇರಿ ನದಿ ಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಇದರಿಂದ ಕೆಆರ್‌ಎಸ್ ಜಲಾಶಯಕ್ಕೆ 52,856 ಕ್ಯೂಸೆಕ್ ನೀರು ಹರಿದು ಬರುತ್ತಿ ರುವುದರಿಂದ ಜಲಾಶಯದಲ್ಲಿ ಗರಿಷ್ಟ ಪ್ರಮಾಣದ ನೀರು ಸಂಗ್ರಹವಾಗಿದೆ. 124.80 ಅಡಿ ಎತ್ತರ ಜಲಾಶಯದಲ್ಲಿ ಜು.26ರಂದು 124.04 ಅಡಿ ನೀರು ಸಂಗ್ರಹವಾಗಿತ್ತು.

ಇದರಿಂದ ಜಲಾಶಯದ ಸುರಕ್ಷತೆಯಿಂದಾಗಿ ಹಾಗೂ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆ ಮನಗಂಡು ಭಾನುವಾರ ಬೆಳಗ್ಗಿನಿಂದಲೇ ಜಲಾಶಯದಿಂದ ಕಾವೇರಿ ನದಿಗೆ 35 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಜಲಾಶಯದ 14 ಗೇಟ್‌ಗಳಿಂದ ನದಿಗೆ ಅಪಾರ ಪ್ರಮಾಣದ ನೀರು ಬಿಡುತ್ತಿರುವುದರಿಂದ ಕೆಆರ್‌ಎಸ್ ಬಳಿ ಉಕ್ಕಿ ಹರಿಯುತ್ತಿರುವ ನದಿಯ ಸೊಬಗು ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಜಲಾಶಯದ ಸಮೀಪ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.

ಅಲ್ಲದೆ, ರಭಸವಾಗಿ ಹರಿಯುವ ನೀರನ್ನು ನೋಡಲು ಅಪಾಯಕಾರಿ ಪ್ರದೇಶದತ್ತ ಸುಳಿಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇದರಿಂದ ಕೆಆರ್‌ಎಸ್‌ನ ಮುಖ್ಯ ರಸ್ತೆಯಿಂದ ಪ್ರವಾಸಿಗರು ಉಕ್ಕಿ ಹರಿಯುತ್ತಿರುವ ನದಿಯನ್ನು ಕಣ್ಣುಂಬಿಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಇಂದು ವಾರಾಂತ್ಯ ರಜೆ ದಿನವಾದ ಹಿನ್ನೆಲೆಯಲ್ಲಿ ಕೆಆರ್ರ.ಎಸ್ ಉದ್ಯಾನವನ ವೀಕ್ಷಣೆಗೆಂದು ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಪ್ರವಾಸಿಗರು ನದಿ ದಡದಲ್ಲಿ ನಿಂತು ಕಾವೇರಿ ನದಿಯ ವೈಯ್ಯಾರವನ್ನು ಆಸ್ವಾದಿಸಲು ಮುಗಿ ಬಿದ್ದರು.

ಎರಡನೇ ಬಾರಿ ಭರ್ತಿಯಾದ ಜಲಾಶಯ:

ಜೂ.29ರಂದು ಜಲಾಶಯದಲ್ಲಿ 124 ಅಡಿ ನೀರು ಸಂಗ್ರಹವಾಗಿ ಜೂ.30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಇನ್ನಿತರರು ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದರು. ಬಳಿಕ ಜು.5ರಿಂದ ಒಳಹರಿವಿನ ಪ್ರಮಾಣಕ್ಕೆ ಅನುಗುಣವಾಗಿ ಜಲಾಶಯದಿಂದ ಕಾವೇರಿ ನದಿ ಹಾಗೂ ಕಾಲುವೆಗೆ ನೀರನ್ನು ಬಿಡಲಾಗುತ್ತಿತ್ತು. ಇದರಿಂದ ಕಳೆದ ವಾರ ಜಲಾಶಯದಲ್ಲಿ 3 ಅಡಿ ನೀರು ಕಡಿಮೆಯಾಗಿ 121 ಅಡಿಗೆ ಕುಸಿದಿತ್ತು. ಆದರೆ, ನಾಲೈದು ದಿನದಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಹೆಚ್ಚಳ ವಾಗಿದೆ. 25 ದಿನದ ಅಂತರದಲ್ಲೇ ಎರಡನೇ ಬಾರಿಗೆ ಜಲಾಶಯ ತುಂಬಿದ್ದು, ಹೆಚ್ಚಿನ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿದೆ.

ಸಂಗೀತ ಕಾರಂಜಿ ಬಂದ್‌: ಜಲಾಶಯದಿಂದ ಭಾರಿ ಪ್ರಮಾಣದ ನೀರು ನದಿಗೆ ಬಿಡುಗಡೆ ಮಾಡುತ್ತಿರುವುದರಿಂದ ಕೆಆ‌ಎಸ್ ಉದ್ಯಾನವನ ಸಂಗೀತ ಕಾರಂಜಿ ಭಾಗಕ್ಕೂ ನೀರು ನುಗ್ಗಿದೆ. ಇದರಿಂದ ಉದ್ಯಾನವನ ಸಂಗೀತ ಕಾರಂಜಿ ಭಾಗಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಅಲ್ಲದೆ, ಸಂಗೀತ ಕಾರಂಜಿ ಪ್ರದರ್ಶನವೂ ರದ್ದು ಮಾಡಲಾಗಿದೆ.

ದೋಣಿ ವಿಹಾರವಿಲ್ಲ: ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲೂ ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದ ರಿಂದ ಪಕ್ಷಿಧಾಮದಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ಆದರೆ, ಪಕ್ಷಿಧಾಮದ ಉದ್ಯಾನ ಪ್ರವೇಶಕ್ಕೆ ಅವಕಾಶವಿದ್ದು, ಪ್ರವಾಸಿ ಗರು ನಿರ್ಬಂಧಿಸಿದ ಪ್ರದೇಶದತ್ತ ಸುಳಿಯ ದಂತೆ ಸೂಚನೆ ನೀಡಲಾಗುತ್ತಿದೆ. ವಾರಾಂತ್ಯ ರಜೆ ದಿನವಾದ ಶನಿವಾರ ಹಾಗೂ ಭಾನು ವಾರ ಒಂದು ಸಾವಿರಕ್ಕೂ ಹೆಚ್ಚು ಪ್ರವಾಸಿ ಗರು ಪಕ್ಷಿಧಾಮಕ್ಕೆ ಭೇಟಿ ನೀಡಿದ್ದಾರೆ.

ನಿಮಿಷಾಂಭದಲ್ಲೂ ನದಿಯ ರಭಸ: ಶ್ರೀರಂಗಪಟ್ಟಣದ ಹಳೆ ಮತ್ತು ಹೊಸ ಸೇತುವೆ ಬಳಿ ಕಾವೇರಿ ನದಿಯನ್ನು ನೋಡಲು ಪ್ರವಾಸಿಗರು ಮುಗಿ ಬೀಳುತ್ತಿದ್ದಾರೆ. ಅದರಲ್ಲೂ ಹೊಸ ಸೇತುವೆ ಮೇಲೆ ವಾಹನ ಸವಾರರು ತುಂಬಿ ಹರಿಯುತ್ತಿರುವ ಕಾವೇರಿಯನ್ನು ಕಣ್ಣುಂಬಿಕೊಂಡು ನಮಿಸುತ್ತಿದ್ದ ದೃಶ್ಯ ಕಂಡು ಬರುತ್ತಿದೆ. ನಿಮಿಷಾಂಭ ಗೋಸಾಯಿಘಾಟ್ ನಲ್ಲೂ ಉಕ್ಕಿ ಹರಿಯುತ್ತಿರುವ ಕಾವೇರಿ ನದಿ ಯನ್ನು ನೋಡಲು ಪ್ರವಾಸಿಗರು ಆಗಮಿಸು ತ್ತಿದ್ದು, ನದಿಗೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತಿದೆ.

ಇದನ್ನೂ ಓದಿ: Dharmasthala : ಶವ ಹೂತಿಟ್ಟ ಕೇಸ್ – ಕ್ಷಿಪ್ರ ವೇಗ ಪಡೆದುಕೊಂಡ ತನಿಖೆ, ಭೀಮನ ಹೆಜ್ಜೆಯೊಂದಿಗೆ ಬೆಳ್ತಂಗಡಿಗೆ ಅಡಿಯಿಟ್ಟ ಮಾಸ್ಕ್ ಒಳಗಿನ ಸಾಕ್ಷಿದಾರ !!

Comments are closed.