D K Shivkumar : ಕೋಡಿ ಶ್ರೀ ಭೇಟಿಯಾಗ ಭವಿಷ್ಯ ಕೇಳಿದ ಡಿಕೆಶಿ – ‘ತಾಳೆಗರಿ’ಯಲ್ಲಿ ಇದ್ದದ್ದೇನು?

D K Shivkumar : ರಾಜಕೀಯ ಭವಿಷ್ಯ ನುಡಿಯುವುದರಲ್ಲಿ ಖ್ಯಾತಿಗಳಿಸಿರುವ ಅರಸೀಕೆರೆ ತಾಲೂಕಿನ ಕೋಡಿ ಮಠದ ಶ್ರೀಗಳ ಸಾನಿಧ್ಯಕ್ಕೆ ಡಿಕೆ ಶಿವಕುಮಾರ್ ಅವರು ಭೇಟಿ ನೀಡಿದ್ದಾರೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಗರಿಗೆದರಿಗೆ. ಕಾರಣ ಡಿಕೆಶಿ ಭೇಟಿ ವೇಳೆ ಕಂಡು ಬಂದ ತಾಳೆಗರಿ ಭವಿಷ್ಯ!!

ಹೌದು, ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿದ ನಂತರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೋಡಿ ಮಠಕ್ಕೆ ಬೇಟಿ ನೀಡಿದರು. ಕೋಡಿ ಮಠದಲ್ಲಿ ನೀಲಮಜ್ಜಯ್ಯ ಹಾಗೂ ಶಿವಲಿಂಗಜ್ಜಯ್ಯರ ಗದ್ದುಗೆಗೆ ನಮಿಸಿದರು. ಈ ವೇಳೆ ಕೋಡಿ ಶ್ರೀಗಳನ್ನು ಭೇಟಿ ಮಾಡಿದ ಡಿಕೆಶಿ ಅವರು ತಾಳೆಗರಿ ಭವಿಷ್ಯವನ್ನು ಕೇಳಿದ್ದಾರೆ ಎನ್ನಲಾಗಿದೆ.
ಅಂದಹಾಗೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಡಿಕೆ ಶಿವಕುಮಾರ್ ತಾಳೆಗರಿ ಭವಿಷ್ಯ ಕೇಳಿದ್ದಾರೆ. ಇನ್ನು ಸ್ವಾಮೀಜಿ ಭೇಟಿಯಾಗಿ ಡಿಕೆ ಶಿವಕುಮಾರ್ ಹೊರ ಬಂದಾಗ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಘೋಷಣೆ ಕೂಗಿದರು.
Comments are closed.