UPI: ಇನ್ಮುಂದೆ ಫೋನ್ ಪೇ, ಗೂಗಲ್ ಪೇನಲ್ಲಿ ಬ್ಯಾಲೆನ್ಸ್ ಚೆಕ್ ಮಾಡುದ್ರೆ ಬೀಳುತ್ತೆ ದಂಡ !! ಈ ದಿನದಿಂದಲೇ ಜಾರಿ

Share the Article

UPI: ಈಗಿನ ಜನ ಫೋನ್ ಪೇ, ಗೂಗಲ್ ಪೇ ಇಲ್ಲದೆ ವ್ಯವಹಾರವನ್ನೇ ನಡೆಸೋದಿಲ್ಲ. ಕ್ಯಾಶ್ ಕೊಡಿ ಅಂದ್ರೆ ಯಾರ ಬಳಿಯೂ ಕ್ಯಾಶ್ ಇಲ್ಲ. ಇಂಟರ್ನೆಟ್ ಅಂತೆ ಇಂದು ಯುಪಿಐ ಪೇಮೆಂಟ್ ಕೂಡ ಜನರಿಗೆ ಬಹು ಮುಖ್ಯವಾಗಿದೆ. ಆದರೆ ಇದೀಗ ಹೊಸ ನಿಯಮ ಒಂದು ಜಾರಿಗೆ ಬರುತ್ತಿದ್ದು ಇನ್ನು ಮುಂದೆ ಫೋನ್ ಪೇ ಹಾಗೂ ಗೂಗಲ್ ಪೇ ಗಳಲ್ಲಿ ಬ್ಯಾಲೆನ್ಸ್ ಚೆಕ್ ಮಾಡಿದರೆ ಫೈನ್ ಬೀಳುತ್ತೆ.

ಹೌದು, ಹೌದು, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪ್ರಕಾರ, ಏಪ್ರಿಲ್ ಮತ್ತು ಮೇ 2025 ರಲ್ಲಿ ಯುಪಿಐನಲ್ಲಿ ಸ್ವಲ್ಪ ಸಮಸ್ಯೆಗಳಾಗಿದ್ದವು. ಜನರು ಪದೇ ಪದೇ ಬ್ಯಾಲೆನ್ಸ್ ಚೆಕ್ ಮಾಡುತ್ತಿದ್ದರು ಮತ್ತು ವಹಿವಾಟಿನ ಸ್ಥಿತಿಯನ್ನು ನೋಡುತ್ತಿದ್ದರು. ಇದರಿಂದ ಸರ್ವರ್ ಮೇಲೆ ಒತ್ತಡ ಹೆಚ್ಚಾಗಿ ವಹಿವಾಟುಗಳು ನಿಧಾನವಾಗುತ್ತಿದ್ದವು ಅಥವಾ ಫೇಲ್ ಆಗುತ್ತಿದ್ದವು. ಹಾಗಾಗಿ, ವ್ಯವಸ್ಥೆಯನ್ನು ಉತ್ತಮಗೊಳಿಸಲು ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತದೆ. ಇದರ ಪ್ರಕಾರ ಆಗಸ್ಟ್ 1 ರಿಂದ ಫೋನ್ ಪೇ, ಗೂಗಲ್ ಪೇನಲ್ಲಿ ಬ್ಯಾಲೆನ್ಸ್ ಚೆಕ್ ಮಾಡುದ್ರೆ ದಂಡ ಬೀಳೋದು ಗ್ಯಾರೆಂಟಿಯಾಗಿದೆ.

ಹೊಸ ನಿಯಮಗಳ ಪ್ರಕಾರ, ಒಂದು ದಿನದಲ್ಲಿ ಗರಿಷ್ಠ 50 ಬಾರಿ ಮಾತ್ರ ಬ್ಯಾಲೆನ್ಸ್ ಚೆಕ್ ಮಾಡಬಹುದು. ಒಂದು ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ಮಾಹಿತಿಯನ್ನು ದಿನಕ್ಕೆ 25 ಬಾರಿ ಮಾತ್ರ ನೋಡಬಹುದು. ಜೊತೆಗೆ, ಪ್ರತಿ 90 ಸೆಕೆಂಡ್‌ಗಳಲ್ಲಿ ಒಂದೇ ವಹಿವಾಟಿನ ಸ್ಥಿತಿಯನ್ನು 3 ಬಾರಿ ಮಾತ್ರ ನೋಡಲು ಸಾಧ್ಯ. Netflix, EMI, ಕರೆಂಟ್ ಬಿಲ್‌ನಂತಹ ಆಟೋ ಡೆಬಿಟ್ ಪಾವತಿಗಳು ಈಗ ಒಂದು ನಿರ್ದಿಷ್ಟ ಸಮಯದಲ್ಲಿ ಮಾತ್ರ ನಡೆಯಲಿವೆ. ಆದರೆ ಇಲ್ಲೊಂದು ಕಂಡೀಷನ್ ಇದೆ.‌ ಪ್ರತಿ ಪರಿಶೀಲನೆ ನಡುವೆ ಕನಿಷ್ಠ 90 ಸೆಕೆಂಡ್ ಗಳ ಅಂತರ ಇರಬೇಕು ಎಂಬುದನ್ನು ಕೂಡ ನೆನಪಿಡಬೇಕು.

Comments are closed.