Karavali: ಕರಾವಳಿ ಭಾಗದ ಕಡಲಿನಲ್ಲಿ ಪ್ರಕ್ಷುಬ್ಧ ಅಲೆಗಳ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

Karavali: ಮುಂದಿನ ಎರಡು ದಿನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಮುದ್ರದ ಅಲೆಗಳು ಪ್ರಕ್ಷುಬ್ಧವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಶನಿವಾರ ಸಂಜೆಯಿಂದ ಕರಾವಳಿ ಭಾಗದಲ್ಲಿ 3.2 ರಿಂದ 4.2 ಮೀ. ಎತ್ತರದ ಅಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಜು. 27 ಭಾನುವಾರದ ತಡರಾತ್ರಿ ವರೆಗೆ ಮೀನುಗಾರರು ಸೇರಿದಂತೆ ಯಾರೇ ಕಡಲ ತೀರ ಕ್ಕೆ ಹೋಗದಂತೆ ಎಚ್ಚರಿಕೆ ನೀಡಿದೆ.
ಕಡಲ ತೀರದ ಜನರು, ಮೀನುಗಾರರು ಕಡಲಿನ ಸಮೀಪದಿಂದ ದೂರ ಇರುವಂತೆಯೂ ಎಚ್ಚರಿಸಲಾಗಿದೆ. ದ.ಕ. ದಲ್ಲಿ ಮತ್ತು ಉತ್ತರ ಕನ್ನಡದಲ್ಲಿ ತೀವ್ರ ಪರಿಣಾಮಗಳಾಗುವ ಸಾಧ್ಯತೆ ಇದ್ದು ಜುಲೈ 28 ರ ವರೆಗೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.
Comments are closed.