Home News Police: ಭೀಕರ ಎನ್ಕೌಂಟರ್; ಪೊಲೀಸರ ಗುಂಡೇಟಿಗೆ ಮೂವರು ನಕ್ಸಲರು ಬಲಿ!

Police: ಭೀಕರ ಎನ್ಕೌಂಟರ್; ಪೊಲೀಸರ ಗುಂಡೇಟಿಗೆ ಮೂವರು ನಕ್ಸಲರು ಬಲಿ!

Hindu neighbor gifts plot of land

Hindu neighbour gifts land to Muslim journalist

Police: ಗುಮ್ಲಾ ಜಿಲ್ಲೆಯ ಘಾಘ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಸೆಹಾಲ್ ಗ್ರಾಮದ ಬಳಿಯ ದಟ್ಟ ಅರಣ್ಯದಲ್ಲಿ ಭೀಕರ ಎನ್ಕೌಂಟರ್ ನಡೆದಿದೆ. ಇಂದು ಶನಿವಾರ ಜಾರ್ಖಂಡ್ ಪೊಲೀಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಕೋಬ್ರಾ ಬೆಟಾಲಿಯನ್‌ನ ಜಂಟಿ ತಂಡದೊಂದಿಗೆ ನಡೆದ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಗುಂಡಿನ ಚಕಮಕಿಯಲ್ಲಿ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ ಎಂಬ ನಕ್ಸಲೀ ಸಂಘಟನೆಯ ಮೂವರು ಉಗ್ರರು ಹತರಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಎರಡು AK-47 ರೈಫಲ್‌ಗಳು ಮತ್ತು ಒಂದು ಇನ್ಸಾಸ್ ರೈಫಲ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಮೊಬೈಲ್ ಫೋನ್‌ಗಳು, ವಾಕಿ-ಟಾಕಿಗಳು, ನಗದು ಮತ್ತು ಇತರ ಉಗ್ರರ ಉಪಕರಣಗಳನ್ನು ವಶಪಡಿಸಿಕೊಂಡಿವೆ.

ಈ ತೀವ್ರ ಗುಂಡಿನ ಚಕಮಕಿಯಲ್ಲಿ ಮೂವರು PLFI ಉಗ್ರರು ಕೊಲ್ಲಲ್ಪಟ್ಟಿದ್ದಾರೆ. ಕಾರ್ಯಾಚರಣೆಯ ನಂತರ, ಪೊಲೀಸರು ಸ್ಥಳದಲ್ಲಿ ವಿವಿಧ ಶಸ್ತ್ರಾಸ್ತ್ರಗಳು ಮತ್ತು ಉಗ್ರರಿಗೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಲ್ಲಲ್ಪಟ್ಟ ಉಗ್ರರ ಪೈಕಿ ಒಬ್ಬರನ್ನು ಸಬ್-ಝೋನಲ್ ಕಮಾಂಡರ್ ದಿಲೀಪ್ ಎಂದು ಗುರುತಿಸಲಾಗಿದ್ದು, ಉಳಿದವರ ಗುರುತನ್ನು ಖಚಿತಪಡಿಸಲು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Charmadi : ಚಾರ್ಮಾಡಿ ಘಾಟಿನ ನಿಷೇಧಿಸ ಪ್ರದೇಶಕ್ಕೆ ಟ್ರಕಿಂಗ್ – 103 ಮಂದಿ ಪೊಲೀಸ್ ವಶಕ್ಕೆ