Charmadi : ಚಾರ್ಮಾಡಿ ಘಾಟಿನ ನಿಷೇಧಿತ ಪ್ರದೇಶಕ್ಕೆ ಟ್ರಕಿಂಗ್ – 103 ಮಂದಿ ಪೊಲೀಸ್ ವಶಕ್ಕೆ

Charmadi : ನಿಷೇಧಿತ ಪ್ರದೇಶದಲ್ಲಿ ಚಾರಣಕ್ಕೆ ತೆರಳಿದ್ದ 103 ಪ್ರವಾಸಿಗರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಚಾರ್ಮಡಿಘಾಟ್ ನ ಬಿದಿರುತಳ ಪ್ರದೇಶದಲ್ಲಿ ನಡೆದಿದೆ.

ಹೌದು, ಚಾರ್ಮಾಡಿ ಘಾಟಿ ಪ್ರದೇಶದ ಬಿದಿರುತಳ (ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿದೆ) ಅರಣ್ಯ ಪ್ರದೇಶಕ್ಕೆ ಟ್ರೆಕ್ಕಿಂಗ್ ನಿಷೇಧ ಇದ್ದು, ಬೆಂಗಳೂರು (Bengaluru) ಮೂಲದ 103 ಜನ ಪ್ರವಾಸಿಗರು ಅಲ್ಲಿಗೆ ತೆರಳಿದ್ದರು. ಇದೀಗ ಟ್ರೆಕ್ಕಿಂಗ್ಗೆ ತೆರಳಿದ 103 ಮಂದಿ ಪ್ರವಾಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಥಳೀಯರು ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಅವರನ್ನೆಲ್ಲ ಬಾಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎರಡು ಬಸ್, ಮೂರು ಪಿಕಪ್ ವಾಹನಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: Bhatkala: ಭಟ್ಕಳ: ವಿದೇಶಿ ನಕಲಿ ಕರೆನ್ಸಿ ಚಲಾವಣೆ ಆರೋಪ: ಮಂಗಳೂರು ಮೂಲದ ಆರೋಪಿಯ ಬಂಧನ!
Comments are closed.