PM Modi: ಭಾರತ – ಮಾಲ್ಡೀವ್ಸ್‌ ಮತ್ತೆ ಭಾಯಿ ಭಾಯಿ – ಮಾಲ್ಡೀವ್ಸ್‌ ಗೆ ಭಾರತದಿಂದ 4,850 ಕೋಟಿ ರೂ. ಸಾಲ ಘೋಷಿಸಿದ ಪ್ರಧಾನಿ ಮೋದಿ!!

Share the Article

PM Modi : ಭಾರತದ ಜತೆ ಪ್ರವಾಸೋದ್ಯಮ ವಿಚಾರದಲ್ಲಿ ಕಾದಾಟಕ್ಕಿಳಿದು ದ್ವಿಪಕ್ಷೀಯ ಸಂಬಂಧ ಕಡಿದುಕೊಳ್ಳಲೂ ಮುಂದಾಗಿದ್ದ ಮಾಲ್ಡೀವ್ಸ್‌ ಈಗ ತಣ್ಣಗಾಗಿದ್ದು, ಇದೀಗ ಭಾರತದೊಂದಿಗೆ ಮತ್ತೆ ಸ್ನೇಹ ಸಂಪಾದಿಸಲು ಮುಂದಾಗಿದೆ. ಸಧ್ಯ ಪ್ರಧಾನಿ ನರೇಂದ್ರ ಮೋದಿ ಅವರು ದ್ವೀಪದೇಶಕ್ಕೆ ನೀಡಿದ ಮೊದಲ ಭೇಟಿ ಯಶಸ್ಸು ಕಂಡಿದ್ದು, ಉಭಯ ದೇಶಗಳ ಮಧ್ಯೆ ಸ್ನೇಹದ ಬೆಸುಗೆ ಏರ್ಪಟ್ಟಿದೆ. ಜೊತೆಗೆ ಮೋದಿ ಅವರು ಮಾಲ್ಡೀವ್ಸ್‌ ಗೆ ಭಾರತದಿಂದ 4,850 ಕೋಟಿ ರೂ. ಸಾಲ ಘೋಷಣೆ ಮಾಡಿದ್ದಾರೆ.

ಹೌದು, ಅಧ್ಯಕ್ಷ ಮುಯಿಜು ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಈ ವರ್ಷ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ 60 ವರ್ಷಗಳು ಪೂರೈಸುತ್ತಿದ್ದರೂ, ನಮ್ಮ ಪರಸ್ಪರ ಸಂಬಂಧಗಳ ಬೇರುಗಳು ಇತಿಹಾಸಕ್ಕಿಂತಲೂ ಹಳೆಯದಾಗಿದ್ದು, ಸಮುದ್ರದಷ್ಟು ಆಳವಾಗಿವೆ. ನಾವು ಶಾಶ್ವತ ನೆರೆಹೊರೆಯವರಾಗಿ ಮಾತ್ರವಲ್ಲ, ಸಹಪ್ರಯಾಣಿಕರಾಗಿ ಕೂಡ ಬೆಸೆದುಕೊಂಡಿದ್ದೇವೆ. ನಮ್ಮ ಅಭಿವೃದ್ಧಿ ಪಾಲುದಾರಿಕೆಗೆ ಹೊಸ ತಿರುವಾಗಿ, ಮಾಲ್ಡೀವ್ಸ್‌ಗೆ 4,850 ಕೋಟಿ ರು. ಸಾಲ ಸಹಾಯವನ್ನು ನೀಡಲು ನಿರ್ಧರಿಸಿದ್ದೇವೆ’ ಎಂದು ಘೋಷಿಸಿದರು.

8 ಒಪ್ಪಂದಗಳಿಗೆ ಸಹಿ:

ಭಾರತ ಮತ್ತು ಮಾಲ್ಡೀವ್ಸ್ ನಡುವೆ ಎರಡು ರಾಷ್ಟ್ರದ ಮುಖ್ಯಸ್ಥರು 8 ಒಪ್ಪಂದಗಳಿಗೆ ಸಹಿ ಹಾಕಿದರು

* ಸಾಲ ಮರುಪಾವತಿಯ ನಿಯಮಗಳನ್ನು ಸಡಿಲಗೊಳಿಸುವ ಪರಿಷ್ಕೃತ ಒಪ್ಪಂದ

* ಭಾರತ-ಮಾಲ್ಡೀವ್ಸ್ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಗಳ ಜಾರಿ

* ಭಾರತದ ಜತೆಗಿನ ಸಂಬಂಧದ 60ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ

* ಮಾಲ್ಡೀವ್ಸ್ ರಾಜತಾಂತ್ರಿಕ ಸಂಬಂಧಗಳು

* ಭಾರತದ ಖರೀದಿದಾರರ ಸಾಲ ಸೌಲಭ್ಯಗಳ ಅಡಿಯಲ್ಲಿ ಹುಲ್ಹುಮಲೆಯಲ್ಲಿ 3,300 ಸಾಮಾಜಿಕ ವಸತಿ ಘಟಕಗಳ ಹಸ್ತಾಂತರ

* ಅಡ್ಡು ನಗರದಲ್ಲಿ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ ಯೋಜನೆಯ ಉದ್ಘಾಟನೆ

* ಮಾಲ್ಡೀವ್ಸ್‌ನಲ್ಲಿ 6 ಸಮುದಾಯ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ

* 72 ವಾಹನಗಳು ಮತ್ತು ಇತರ ಉಪಕರಣಗಳ ಹಸ್ತಾಂತರ

ಇದನ್ನೂ ಓದಿ: Udupi: ಮೀನುಗಾರರಿಗೆ ಅನೇಕ ಸೌಲಭ್ಯ, ಅರ್ಜಿ ಆಹ್ವಾನ!

Comments are closed.