RTO Tax: ಟ್ಯಾಕ್ಸ್ ಕಟ್ಟದೆ ಐಷಾರಾಮಿ ಕಾರಿನಲ್ಲಿ ಶೋಕಿ ಮಾಡ್ತಿದ್ದವರಿಗೆ ಶಾಕ್ – ಬರೋಬ್ಬರಿ ದಂಡ ಹಾಕಿದ ಆರ್‌ಟಿಓ ಅಧಿಕಾರಿಗಳು

Share the Article

RTO Tax: ತೆರಿಗೆ ಕಟ್ಟದೆ ಸರ್ಕಾರದ ಬೊಕ್ಕಸಕ್ಕೆ ಭಾರೀ ವಂಚನೆ ಮಾಡುತಿದ್ದ ಐಷಾರಾಮಿ ಕಾರು ಮಾಲಿಕನಿಗೆ ಆರ್ಟಿಓ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಅವನಿಂದ ಭಾರಿ ಮೊತ್ತದ ದಂಡ ವಸೂಲಿ ಮಾಡುವ ಮೂಲಕ ಅವನ ಶೋಕಿಗೆ ಬ್ರೇಕ್ ಹಾಕಿದ್ದಾರೆ. ಐದು ಕೋಟಿ ಮೌಲ್ಯದ ಫೆರಾರಿ ಹಾಗೂ 2 ಕೋಟಿ ಮೌಲ್ಯದ ಬೆಂಜ್ ಕಾರು ಮಾಲೀಕ ಟ್ಯಾಕ್ಸ್ ಕಟ್ಟದೆ ವಂಚನೆ ಮಾಡಿ ಬೆಂಗಳೂರಿನಲ್ಲಿ ಓಡಾಡುತ್ತಿದ್ದವನಿಗೆ ಆರ್ಟಿಓ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

ಇಂದಿರಾ ನಗರದಲ್ಲಿ ವಾಸವಿರುವ ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಮಾಲಿಕ ರಾಜೀವ್ ವೆಂಕಟಪತಿ, ತನ್ನ ಎರಡು ಐಷಾರಾಮಿ‌‌ ಕಾರಿಗೆ ರಾಜ್ಯದಲ್ಲಿ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡು ರಾಜಧಾನಿಯಲ್ಲಿ ಓಡಾಟ ಮಾಡುತ್ತಿದ್ದ. ಈ ಕಾರು ಶ್ರೀ ದತ್ ಎಸ್ಟೇಟ್ ಎಲ್ ಎಲ್ ಸಿ ಹೆಸರಿನಲ್ಲಿದ್ದು, 1-PY-05-K-6309 ಮರ್ಸಿಡಿಜ್ ಬೆಂಜ್ G-63 2021 ರಲ್ಲಿ ಖರೀದಿ ಮಾಡಲಾಗಿತ್ತು. ಇದರ ಬೆಲೆ- 2.ಕೋಟಿ 47 ಲಕ್ಷ 9 ಸಾವಿರ ರುಪಾಯಿ. ಪಾಂಡಿಚೇರಿಯಲ್ಲಿ ಖರೀದಿ ಮಾಡಿ ಅಲ್ಲಿ ಟ್ಯಾಕ್ಸ್- 12 ಲಕ್ಷ 22 ಸಾವಿರ 515 ರೂ ಟ್ಯಾಕ್ಸ್ ಪಾವತಿ ಮಾಡಲಾಗಿತ್ತು. ಆದರೆ ಕರ್ನಾಟಕದಲ್ಲಿ ಟ್ಯಾಕ್ಸ್ ಕಟ್ಟದೇ 38 ಲಕ್ಷದ 87 ಸಾವಿರ 776 ರುಪಾಯಿ ಬಾಕಿ ಉಳಿಸಿಕೊಂಡಿದ್ದ.

ಇನ್ನೊಂದು ಫೆರಾರಿ-812 ಸೂಪರ್ ಫಾಸ್ಟ್ 2019 ಜನವರಿಯಲ್ಲಿ ಖರೀದಿ ಮಾಡಿದ್ದ. ಈ ಕಾರಿನ ಬೆಲೆ- 4 ಕೋಟಿ 84 ಲಕ್ಷ 35 ಸಾವಿರ 97 ರುಪಾಯಿ. ತೆರಿಗೆ ವಂಚಿಸಲು ಜಾರ್ಖಂಡ್ ನಲ್ಲಿ ಕಾರು ಖರೀದಿಸಿ ರಿಜಿಸ್ಟ್ರೇಷನ್ ಮಾಡಿಸಿದ್ದ. ಜಾರ್ಖಂಡ್ ನಲ್ಲಿ 14 ಲಕ್ಷ 53 ಸಾವಿರ 53 ರುಪಾಯಿ ಟ್ಯಾಕ್ಸ್ ಪಾವತಿ ಮಾಡಿ, ಕರ್ನಾಟಕದಲ್ಲಿ 65 ಲಕ್ಷದ 3 ಸಾವಿರದ 168 ರುಪಾಯಿ ರುಪಾಯಿ ಪಾವತಿ ಮಾಡಬೇಕಿತ್ತು.

ತೆರಿಗೆ ಕಟ್ಟದ ಹಿನ್ನಲೆ 19.03-25 ರಂದು ದೂರು ದಾಖಲಾಗಿದ್ರು ಕ್ಯಾರೆ ಅನ್ನದೆ ಸುಮ್ಮನಿದ್ದ ಮಾಲಿಕನಿಗೆ ಇಂದು ಬೆಳ್ಳಂಬೆಳಗ್ಗೆ ಆರ್ಟಿಓ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಆರ್ಟಿಓ ರೈಡ್ ವಿಚಾರ ತಿಳಿಯುತ್ತಿದ್ದಂತೆ ರಾಜೀವ್ ವೆಂಕಟಪತಿ ಗೌಡ ಫೆರಾರಿ ಕಾರನ್ನು ಬಚ್ಚಿಟ್ಟಿದ್ದಾನೆ ಎಂದು ಮಾಹಿತಿ ಇದೆ. ಆರ್ಟಿಓ ಅಧಿಕಾರಿಗಳು ಬೆನ್ಜ್ ಮತ್ತು ಫೆರಾರಿ ಎರಡು ಕಾರಿನ ಟ್ಯಾಕ್ಸ್ ಕಟ್ಟುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Weather Report: ಕರ್ನಾಟಕದ ಹವಾಮಾನ ಮುನ್ಸೂಚನೆ : ಮುಂಗಾರು ಸ್ವಲ್ಪ ಮಟ್ಟಿಗೆ ದುರ್ಬಲಗೊಳ್ಳುವ ಸಾಧ್ಯತೆ

Comments are closed.