CM-DCM: ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ: ಗದ್ದುಗೆ ಪಡೆಯಲು ಡಿ.ಕೆ.ಶಿವಕುಮಾರ್ ದೆಹಲಿ ಯಾತ್ರೆ – ಪ್ರತ್ಯೇಕವಾಗಿ ರಾಹುಲ್ ಗಾಂಧಿ ಭೇಟಿಗೆ ನಿರ್ಧಾರ

CM-DCM: ಮುಖ್ಯಮಂತ್ರಿಗಾದಿ ಉಳಿಸಿಕೊಳ್ಳಲು ಸಿದ್ದರಾಮಯ್ಯ, ಸಿಎಂ ಕುರ್ಚಿ ಪಡೆಯಲು ಡಿ.ಕೆ.ಶಿವಕುಮಾರ್ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಅಕ್ಟೋಬರ್-ನವೆಂಬರ್ ನಲ್ಲಿ ಅಧಿಕಾರ ಹಸ್ತಾಂತರ ಕುರಿತು ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆ ಸಂದರ್ಭದಲ್ಲೇ ಇಬ್ಬರೂ ನಾಯಕರು ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಭೇಟಿಗೆ ಸಮಯಾವಕಾಶ ಕೋರಿದ್ದಾರೆ.

ಭೇಟಿ ಸಮಯ ನೀಡುವ ಬಗ್ಗೆ ಇದುವರೆಗೂ ಎಐಸಿಸಿಯಿಂದ ಯಾವುದೇ ಮಾಹಿತಿ ಇಲ್ಲ. ಆದರೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಇಬ್ಬರು ನಾಯಕರಿಗೂ ದೆಹಲಿಗೆ ಬರುವಂತೆ ಸೂಚಿಸಿದ್ದರು. ಸುರ್ಜೆವಾಲ ಜೊತೆ ಈ ಮುಖಂಡರು, ಖಾಲಿ ಇರುವ 37 ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಹಾಗೂ 1,200 ನಿರ್ದೇಶಕರ ನೇಮಕ ಕುರಿತಂತೆ ಚರ್ಚಿಸಿ, ಅನುಮೋದನೆ ಪಡೆಯಲಿದ್ದಾರೆ. ಜೊತೆಗೆ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಮಕರಣ ಯಾರದ್ದು ಅಂತಿಮಗೊಳ್ಳಲಿದೆ ಈ ಎರಡೂ ವಿಷಯಗಳಲ್ಲಿ ಹೈಕಮಾಂಡ ಪರವಾಗಿ ಸುರ್ಜೆವಾಲ ಕೈಗೊಳ್ಳುವ ರ್ನೀಯವೇ ಅಂತಿಮ.
ಕೆಪಿಸಿಸಿ ಮಾಡಿದ ಶಿಫಾರಸುಗಳನ್ನು ಸಾರ್ಜೆವಾಲ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ರಾಜ ಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜೊತೆ ಸಮಾ ಲೋಚಿಸಿ ಅನುಮೋದನೆ ಪಡೆದುಕೊಂಡಿದ್ದಾರೆ. ಈ ಪಟ್ಟಿಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಸುರ್ಜೇವಾಲ ಹಸ್ತಾಂತರಿಸಲಿದ್ದಾರೆ. ಸುರ್ಜೇವಾಲ ಭೇಟಿ ನಂತರ ಈ ಇಬ್ಬರೂ ಮುಖಂಡರು ಪಕ್ಷ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಕೆಲವು ಪೂರ್ವ ನಿಯೋಜಿತ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಎರಡು ದಿನಗಳ ದೆಹಲಿ ಪ್ರವಾಸ ಎಂಬುದಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕಚೇರಿ ಅಧಿಕೃತವಾಗಿ ತಿಳಿಸಿದೆಯಾದರೂ, ಇವರುಗಳು ಹಿಂತಿರುಗುವ ನಿರ್ದಿಷ್ಟ ದಿನ ನಿಗದಿಯಾಗಿಲ್ಲ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಪಕ್ಷದ ಅಧಿನಾಯಕರ ಜೊತೆ ಚರ್ಚಿಸಲು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಪ್ರತ್ಯೇಕವಾಗಿ ಸಮಯ ಕೋರಿದ್ದಾರೆ. ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ರಾಹುಲ್ ಗಾಂಧಿ ದೆಹಲಿಯಲ್ಲಿ ಲಭ್ಯರಿರುತ್ತಾರೆ. ಈ ಸಮಯ ಬಳಕೆ ಮಾಡಿಕೊಂಡು, ಅವರ ಭೇಟಿಗೆ ಪ್ರಯತ್ನಿಸಿದ್ದಾರೆ.
ಕಳೆದ ಬಾರಿ ರಾಹುಲ್ ಭೇಟಿಗಾಗಿ ಇಬ್ಬರು ಮುಖಂಡರು ದೆಹಲಿಗೆ ತೆರಳಿದ್ದರಾದರೂ, ಎರಡು-ಮೂರು ದಿನಗಳಾದರೂ ಸಾಧ್ಯವಾಗಿರಲಿಲ್ಲ. ಭೇಟಿಗೂ ಮುನ್ನ ಸಿಎಂ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಸಂದರ್ಶನ ನೀಡಿ, ರಾಜ್ಯ ನಾಯಕತ್ವ ಕುರಿತು ಹೇಳಿಕೆ ನೀಡಿದ್ದೇ, ಭೇಟಿ ಸಾಧ್ಯವಾಗದಿರಲು ಕಾರಣ ಎನ್ನಲಾಗಿದೆ.
Comments are closed.