War: ಆ ಒಂದು ಹಿಂದೂ ದೇಗುಲಕ್ಕಾಗಿ ಥೈಲ್ಯಾಂಡ್- ಕಾಂಬೋಡಿಯಾ ನಡುವೆ ಯುದ್ಧ!! ಅಷ್ಟಕ್ಕೂ ಆಗಿದ್ದೇನು?

War: ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಗಡಿ ವಿವಾದ ಗುರುವಾರ ಉಲ್ಬಣಿಸಿದ್ದು ಕಾಂಬೋಡಿಯಾದ ಮಿಲಿಟರಿ ನೆಲೆಗಳ ಮೇಲೆ ಥೈಲ್ಯಾಂಡ್ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಥೈಲ್ಯಾಂಡ್‍ನ ಮೇಲೆ ಕಾಂಬೋಡಿಯಾ ಕ್ಷಿಪಣಿ ಮತ್ತು ಫಿರಂಗಿ ದಾಳಿ ತೀವ್ರಗೊಳಿಸಿದೆ. ಈ ಸಂಘರ್ಷಕ್ಕೆ ಕಾರಣವಾಗಿದ್ದು, ಥೈಲ್ಯಾಂಡ್ ಹಾಗೂ ಕಾಂಬೋಡಿಯಾ ಗಡಿಯಲ್ಲಿರುವ ಪ್ರಿಯಾ ವಿಹಾರ್ ಹಿಂದೂ ದೇವಾಲಯ!!

ಹೌದು, ಪ್ರಿಯಾ ವಿಹಾರ್ ದೇವಸ್ಥಾನದ ವಿಚಾರವಾಗಿ ಈ ಕಲಹ ನಡೆಯುತ್ತಿದೆ. ಅಷ್ಟೇ ಅಲ್ಲದೆ ಪ್ರಸಾದ್ ತಾ ಮೊಯೆನ್ ಥಾಮ್ ದೇವಾಲಯದ ವಿಚಾರವಾಗಿಯೂ ಭಿನ್ನಾಭಿಪ್ರಾಯವಿದೆ. ಕಾಂಬೋಡಿಯಾದ ಒಡ್ಡರ್ ಮೀನ್ ಚೆಯ್ ಪ್ರಾಂತ್ಯ ಮತ್ತು ಥೈಲ್ಯಾಂಡ್ ಸುರಿನ್ ಪ್ರಾಂತ್ಯದ ಗಡಿಯಲ್ಲಿರುವ ಡಾಂಗ್ರೆಕ್ ಬೆಟ್ಟಗಳಲ್ಲಿ ನಿರ್ಮಿಸಲಾಗಿದೆ. ಈ ಪ್ರದೇಶದ ಗಡಿ ರೇಖೆಯನ್ನು ಇನ್ನೂ ಸ್ಪಷ್ಟವಾಗಿ ನಿರ್ಧರಿಸಲಾಗಿಲ್ಲ, ಈ ಕಾರಣದಿಂದಾಗಿ ಎರಡೂ ದೇಶಗಳು ಇದನ್ನು ತಮ್ಮ ಪ್ರದೇಶವೆಂದು ಹೇಳಿಕೊಳ್ಳುತ್ತವೆ.
ಯುದ್ಧಕ್ಕೆ ಕಾರಣವೇನು?
11 ನೇ ಶತಮಾನದ ಪ್ರಿಯಾ ವಿಹಾರ್ ದೇವಾಲಯವು ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಯುದ್ಧಕ್ಕೆ ಕಾರಣವಾಗಿದೆ. ಈ ದೇವಾಲಯವು ಕಾಂಬೋಡಿಯಾದ ಪ್ರಿಯಾ ವಿಹಾರ್ ಪ್ರಾಂತ್ಯ ಮತ್ತು ಥೈಲ್ಯಾಂಡ್‌ನ ಸಿಸಾಕೆಟ್ ಪ್ರಾಂತ್ಯದ ಗಡಿಯಲ್ಲಿದೆ. 1962 ರಲ್ಲಿ, ಅಂತರರಾಷ್ಟ್ರೀಯ ನ್ಯಾಯಾಲಯ (ICJ) ಈ ದೇವಾಲಯವು ಕಾಂಬೋಡಿಯಾಕ್ಕೆ ಸೇರಿದೆ ಎಂದು ತೀರ್ಪು ನೀಡಿತ್ತು. ಈ ಭೂಮಿ ತನಗೆ ಸೇರಿದೆ ಎಂದು ಥೈಲ್ಯಾಂಡ್ ಹೇಳುತ್ತದೆ.
ಇನ್ನು ಫೆಬ್ರವರಿ 2025 ರಲ್ಲಿ, ಕೆಲವು ಕಾಂಬೋಡಿಯನ್ ಸೈನಿಕರು ದೇವಾಲಯದ ಬಳಿ ತಲುಪಿ ಅಲ್ಲಿ ನಿಂತು ತಮ್ಮ ರಾಷ್ಟ್ರಗೀತೆಯನ್ನು ಹಾಡಲು ಪ್ರಾರಂಭಿಸಿದರು. ಅಲ್ಲಿದ್ದ ಥಾಯ್ ಸೈನಿಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಎರಡೂ ಕಡೆಯವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಥಾಯ್ ಪ್ರಜೆಯೊಬ್ಬರು ಈ ಇಡೀ ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಇದು ವಿಷಯವನ್ನು ಮತ್ತಷ್ಟು ಉಲ್ಬಣಗೊಳಿಸಿತು.
ಅಂದಹಾಗೆ ಈ ದೇವಾಲಯವನ್ನು 11 ನೇ ಶತಮಾನದಲ್ಲಿ ಖಮೇರ್ ಚಕ್ರವರ್ತಿ ಸೂರ್ಯವರ್ಮನ್ ಶಿವನಿಗಾಗಿ ನಿರ್ಮಿಸಿದ್ದಾರೆ .ಕಾಲಾನಂತರದಲ್ಲಿ, ಈ ದೇವಾಲಯವು ಕೇವಲ ನಂಬಿಕೆಯ ಕೇಂದ್ರವಲ್ಲ, ಆದರೆ ರಾಷ್ಟ್ರೀಯತೆ, ರಾಜಕೀಯ ಮತ್ತು ಮಿಲಿಟರಿ ಶಕ್ತಿಯ ಕ್ಷೇತ್ರವಾಗಿದೆ. ಈ ದೇವಾಲಯದಲ್ಲಿ ಇನ್ನೂ ಶಿವಲಿಂಗವಿದೆ.
ಇದನ್ನೂ ಓದಿ: Dasara: ಮೈಸೂರು ದಸರಾಕ್ಕೆ 9 ಆನೆಗಳ ಮೊದಲ ಪಟ್ಟಿ ಬಿಡುಗಡೆ- ಈ ಬಾರಿ ಅಂಬಾರಿ ಹೊರೋದು ಯಾರು?
Comments are closed.