Costliest Fruit: ಪ್ರಪಂಚದ ಅತೀ ದುರ್ನಾತದ ಹಣ್ಣಿದು, ಕೊಳೆತ ಸಾಕ್ಸ್‌ನಂತೆ ವಾಸನೆ- ಆದ್ರೂ ಕೆಜಿಗೆ 40 ಲಕ್ಷ!!

Costliest Fruit: ಆಹಾರ ಪದಾರ್ಥಗಳು ಎಷ್ಟೇ ರುಚಿಯಾಗಿದ್ದರೂ ಕೂಡ ಜನ ಅವುಗಳ ಸುವಾಸನೆಯನ್ನು ಆಸ್ವಾದಿಸುತ್ತಾರೆ. ಸುವಾಸನೆ ಮತ್ತು ರುಚಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಿದರು ತಪ್ಪಾಗಲಾರದು. ಆದರೆ ಇಲ್ಲೊಂದು ಹಣ್ಣು ಅತಿ ದುರ್ನಾಥ ಬೀರುವಂತದ್ದು. ಅದರ ವಾಸನೆ ಸೇವಿಸಿದರೆ ಹತ್ತಿರಕ್ಕೂ ಸುಳಿಯಲು ಆಗದು. ಆದರೆ ಅದರ ಬೆಲೆಯನ್ನು ಕೇಳಿದರೆ ತಲೆ ತಿರುಗಿ ಬೀಳುತ್ತೀರಿ

ಹೌದು, ವಿಶ್ವದ ಅತ್ಯಂತ ವಾಸನೆಯುಳ್ಳ ಹಣ್ಣು ಎಂದು ಪರಿಗಣಿಸಲಾದ ಹಣ್ಣನ್ನು ದುರಿಯನ್ ಅಥವಾ ಡುರಿಯನ್. ಭಾರತದ ಉನ್ನತ ದರ್ಜೆಯ ಮಾರುಕಟ್ಟೆಗಳಲ್ಲಿ ಮಾತ್ರ ಕಾಣಬಹುದಾದ ವಿಲಕ್ಷಣ ಹಣ್ಣುಗಳಲ್ಲಿ ದುರಿಯನ್ ಕೂಡ ಒಂದು. ಇದು ಹಲಸಿನ ಹಣ್ಣಿನಂತೆ ಕಾಣುತ್ತದೆ. ಸಾಮಾನ್ಯವಾಗಿ ಇದು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ. ಈ ಹಣ್ಣಿನ ಒಳಭಾಗ ಹಳದಿ ಬಣ್ಣದ್ದಾಗಿದ್ದು, ಮೇಲ್ಭಾಗದ ಸಿಪ್ಪೆ ಮುಳ್ಳಿನಿಂದ ಕೂಡಿದೆ. ಇದು ಎಷ್ಟು ತೀಕ್ಷ್ಣವಾಗಿದೆಯೆಂದರೆ ಬರಿಗೈನಿಂದ ಮುಟ್ಟಿದರೆ ರಕ್ತ ಬರಬಹುದು. ಈ ಹಣ್ಣಿನ ವಾಸನೆ ಕೊಳಕು ಸಾಕ್ಸ್‌ನಂತಿದೆ. ಈ ಹಣ್ಣಿನ ವಾಸನೆ ತುಂಬಾ ಬಲವಾದ ಮತ್ತು ಕೆಟ್ಟದಾಗಿದ್ದು, ಇದನ್ನು ಹೆಚ್ಚಾಗಿ ಅಂಗಡಿಗಳಲ್ಲಿ ಗಾಜಿನ ಪೆಟ್ಟಿಗೆಗಳಲ್ಲಿ ಇಡಲಾಗುತ್ತದೆ. ಆದರೆ, ಈ ಹಣ್ಣನ್ನು ಅದರ ವಿಶಿಷ್ಟ ರುಚಿ ಮತ್ತು ಪೋಷಕಾಂಶಗಳಿಗಾಗಿ ಹೆಚ್ಚಾಗಿ ತಿನ್ನಲಾಗುತ್ತದೆ.
ಕೆಟ್ಟ ವಾಸನೆ ಬರಲು ಕಾರಣ?
ಸಂಶೋಧನೆಯ ಪ್ರಕಾರ, ಈ ಹಣ್ಣಿನಲ್ಲಿ 44 ವಿವಿಧ ರೀತಿಯ ರಾಸಾಯನಿಕ ಸಂಯುಕ್ತಗಳಿವೆ. ಇವು ಒಟ್ಟಾಗಿ ಈ ರೀತಿಯ ವಾಸನೆಯನ್ನು ಉಂಟುಮಾಡುತ್ತವೆ. ವಿಜ್ಞಾನಿಗಳ ಪ್ರಕಾರ, ಹಣ್ಣಿನಿಂದ ಬರುವ ವಾಸನೆಯು ಯಾವುದೇ ಒಂದು ಸಂಯುಕ್ತದಿಂದಲ್ಲ, ಎಲ್ಲಾ ಸಂಯುಕ್ತಗಳ ಮಿಶ್ರಣವಾಗಿದೆ. ಈ ಹಣ್ಣಿನಲ್ಲಿ ಜೇನುತುಪ್ಪ, ಗಂಧಕ, ಕ್ಯಾರಮೆಲ್, ಸೂಪ್, ಕೊಳೆತ ಮೊಟ್ಟೆಗಳು, ಕೊಳೆತ ಎಲೆಕೋಸು, ಹುರಿದ ಈರುಳ್ಳಿ ಮತ್ತು ಕೊಳೆತ ಹಣ್ಣುಗಳ ಮಿಶ್ರ ವಾಸನೆ ಇರುತ್ತದೆ. ಇದು ಇಷ್ಟೊಂದು ವಾಸನೆಯಿಂದ ಕೂಡಿರಲು ಇದೇ ಕಾರಣ.
ಭಾರತದಲ್ಲಿ, ಉತ್ತಮ ಗುಣಮಟ್ಟದ ದುರಿಯನ್‌ನ ಬೆಲೆ ಪ್ರತಿ ಕೆಜಿಗೆ 4500 ರಿಂದ 8500 ಆಗಿದೆ. ಆದರೆ, ಇಲ್ಲಿಯವರೆಗಿನ ಅತ್ಯಂತ ದುಬಾರಿ ದುರಿಯನ್ ಅನ್ನು 2019 ರಲ್ಲಿ 48 ಸಾವಿರ ಡಾಲರ್‌ಗಳಿಗೆ, ಅಂದರೆ ಸುಮಾರು 40 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಯಿತು ಎಂದ್ರೆ ನಿಜಕ್ಕೂ ಅಚ್ಚರಿ ಅಲ್ವೇ?
Comments are closed.