Bengaluru : ರಾಮೇಶ್ವರಂ ಕೆಫೆ ತಿಂಡಿಯಲ್ಲಿ ಜಿರಳೆ ಸಿಕ್ಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಗ್ರಾಹಕರೇ ಹುಳ ಹಾಕಿ ₹25 ಲಕ್ಷ ಹಣಕ್ಕಾಗಿಬ್ಲ್ಯಾಕ್ಮೇಲ್ !!

Bengaluru : ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ತನ್ನ ಹೋಟೆಲ್ನಲ್ಲಿ ಆಹಾರ ಕಲುಷಿತಗೊಂಡಿದೆ ಎಂಬ ಸುಳ್ಳು ಘಟನೆಯನ್ನು ಸೃಷ್ಟಿಸಿ, ಬ್ರ್ಯಾಂಡ್ಗೆ ಮಸಿ ಬಳಿಯಲು ಮತ್ತು ಹಣ ಸುಲಿಗೆ ಮಾಡಲು ಯತ್ನಿಸಿದ ಜನರ ಗುಂಪಿನ ವಿರುದ್ಧ ದಕ್ಷಿಣ ಭಾರತದ ಜನಪ್ರಿಯ ರೆಸ್ಟೋರೆಂಟ್ ಬ್ರ್ಯಾಂಡ್ ರಾಮೇಶ್ವರ ಕೆಫೆ ಪೊಲೀಸ್ ದೂರು ದಾಖಲಿಸಿದೆ.

ಹೌದು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆಯ ಔಟ್ಲೆಟ್ನಲ್ಲಿ ನೀಡಲಾದ ಆಹಾರದಲ್ಲಿ ಹುಳುವೊಂದು ಪತ್ತೆಯಾಗಿದೆ ಎಂಬ ಸುದ್ದಿ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಆದರೀಗ ಅದು ಸುಳ್ಳು ಆರೋಪ ಎಂಬುದುದು ಗೊತ್ತಾಗಿದೆ. ಇದೀಗ ಆರೋಪ ಹೊರಿಸಿ, ಹಣ ಸುಲಿಗೆಗೆ ಯತ್ನಿಸಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಶಾಖೆಯ ಮುಖ್ಯಸ್ಥ ಸುಮಂತ್ ಅವರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ.
ಅಂದಹಾಗೆ ಸುಮಾರು 5-7 ವ್ಯಕ್ತಿಗಳ ಗುಂಪು ಸಾರ್ವಜನಿಕ ಗೊಂದಲವನ್ನು ಸೃಷ್ಟಿಸಿದ್ದರು. ನಾವು ಬಡಿಸಿದ ಆಹಾರದಲ್ಲಿ ಕೀಟವಿದೆ ಎಂದು ಸುಳ್ಳು ಆರೋಪ ಹೊರಿಸಿದ್ದಾರೆ. ನಂತರ ವ್ಯಕ್ತಿಗಳು ಪರಿಹಾರ ನೀಡದಿದ್ದರೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸ್ವಲ್ಪ ಸಮಯದ ನಂತರ, ಅನಾಮಧೇಯ ನಂಬರ್ನಿಂದ ಫೋನ್ ಕರೆ ಬಂದಿದ್ದು, ₹25 ಲಕ್ಷ ನಗದು ನೀಡುವಂತೆ ಒತ್ತಡ ಹೇರಿದ್ದಾರೆ. ಹಣಕ್ಕೆ ಬೇಡಿಕೆಯೊಡ್ಡಿ ಕರೆ ಮಾಡಿದ ವ್ಯಕ್ತಿಯ ಬಗ್ಗೆ ರಾಮೇಶ್ವರಂ ಕೆಫೆ ಬಳಿ ಫೋನ್ ಕರೆ ದಾಖಲೆಗಳು, ಸಂದೇಶ ಸ್ಕ್ರೀನ್ಶಾಟ್ಗಳು ಮತ್ತು ಇತರ ದಾಖಲೆಗಳನ್ನು ಪೊಲೀಸರಿಗೆ ಸಲ್ಲಿಕೆ ಮಾಡಲಾಗಿದೆ. ಇನ್ನು ಹಣಕ್ಕೆ ಬ್ಲ್ಯಾಕ್ಮೇಲ್ ಮಾಡಿದ ಪ್ರಯತ್ನದ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
ಗ್ರಾಹಕರು ಆಹಾರ ಮಾಲಿನ್ಯದ ಬಗ್ಗೆ ಸುಳ್ಳು ಆರೋಪ ಹೊರಿಸುತ್ತಿದ್ದು, ಈ ಮೂಲಕ ಬ್ರ್ಯಾಂಡ್ಮೇಲ್ಗೆ ಹಾನಿ ಮಾಡಲು ಹೊರಟಿದ್ದಾರೆ. ಜೊತೆಗೆ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ಆರೋಪಿಸಿದೆ. ಈ ಸಂಬಂಧ ಗ್ರಾಹಕನ ವಿರುದ್ಧ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ದಿ ರಾಮೇಶ್ವರ ಕೆಫೆಯ ಸಂಸ್ಥಾಪಕಿ ದಿವ್ಯಾ ರಾಘವ್ ಅವರು ಘಟನೆಯ ಸಂಬಂಧ ಮಾಹಿತಿ ನೀಡಿದ್ದು, ‘ಆಹಾರ ತಯಾರಿಕೆಯ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಹೆಚ್ಚಿನ ಗಮನ ವಹಿಸುತ್ತೇವೆ. ವಿಶೇಷವಾಗಿ ವಿಮಾನ ನಿಲ್ದಾಣಗಳಂತಹ ಸೂಕ್ಷ್ಮ ಸ್ಥಳಗಳಲ್ಲಿ ನೈರ್ಮಲ್ಯ ತಪಾಸಣೆಗಳು ಕಡ್ಡಾಯವಾಗಿರುತ್ತವೆ. ಹಣವನ್ನು ಸುಲಿಗೆ ಮಾಡಲು ಮತ್ತು ನಮ್ಮ ಬ್ರ್ಯಾಂಡ್ಗೆ ಕಳಂಕ ತರುವ ಉದ್ದೇಶದಿಂದ ಕಿಡಿಗೇಡಿಗಳು ಈ ಪ್ರಯತ್ನ ನಡೆಸಿದ್ದಾರೆ. ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ’ ಎಂದು ಹೇಳಿದರು.
Comments are closed.