Murder: ಎಮ್ಮೆಮಾಡುವಿನಲ್ಲಿ ನೇಣು ಬಿಗಿದು ಶಿಕ್ಷಕಿ ಆತ್ಮಹತ್ಯೆ – ಕೊ*ಲೆ ಶಂಕೆ – ಕುಟುಂಬಸ್ಥರಿಂದ ದೂರು

Share the Article

Murder: ವಿರಾಜಪೇಟೆ ತಾಲ್ಲೂಕಿನ ನಾಪೋಕ್ಲು ಪೊಲೀಸ್ ಠಾಣಾವ್ಯಾಪ್ತಿಯ ಎಮ್ಮೆಮಾಡುವಿನಲ್ಲಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ನಿವಾಸಿ ನಜೀರ್ ಎಂಬುವವರ ಪತ್ನಿ ಸಫ್ರೀನಾ ಶೇಕ್ (32)ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ. ಮೃತ ಸಫ್ರೀನ ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಬುಧವಾರ ರಾತ್ರಿ ಎಮ್ಮೆ ಮಾಡುವಿನ ಮನೆಯಲ್ಲಿ ಸಫ್ರೀನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ, ನೇಣಿನ ಕುಣಿಕೆಯಿಂದ ಬಿಡಿಸಿ ಸ್ವತಃ ಪತಿ ನಜೀರ್ ಸಫ್ರೀನಾಳನ್ನು ನಾಪೋಕ್ಲು ವಿನ ಖಾಸಗಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿರುವ ಬಗ್ಗೆ ವೈದ್ಯರು ಪರೀಕ್ಷಿಸಿ ದೃಢಪಡಿಸಿದ್ದಾರೆ. ಕಳೆದ ಎರಡು ದಿನಗಳಿಂದ ಪತಿ ನಜೀರ್ ಹಾಗೂ ಸಫ್ರೀನ ನಡುವೆ ಮನೆಯಲ್ಲಿ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು ಮೃತ ಸಫ್ರೀನ ದೇಹದಲ್ಲಿ ಗಾಯಗಳ ಗುರುತು ಇದ್ದು ಪತಿ ನಜೀರ್ ಕೊಲೆ ಮಾಡಿ ನೇಣು ಹಾಕಿದ್ದಾನೆ ಎಂದು ಸಫ್ರಿನ ಸಹೋದರ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.

ಸಫ್ರೀನ ಸಹೋದರ ರುವೈಸ್ ನಾಪೋಕ್ಲು ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ: Forest Dept: ‘ಕಾಡುಗಳಲ್ಲಿ ಜಾನುವಾರು ಮೇಯಿಸುವಂತಿಲ್ಲ’ ಆದೇಶ- ಸ್ಥಳೀಯರಿಗೆ ಬೇಡ ಆತಂಕ, ಹೊರ ರಾಜ್ಯದ ದನಕರುಗಳಿಗೆ ಮಾತ್ರ ನಿಷೇಧ ಎಂದ ಸಚಿವ ಈಶ್ವರ್ ಖಂಡ್ರೆ!!

Comments are closed.