Bengaluru: RCB ಕಾಲ್ತುಳಿತ ದುರಂತದಲ್ಲಿ ಬಲಿಯಾದ ಮಗಳ ಕಿವಿಯೋಲೆ ಕಳುವು- ದಿವ್ಯಾಂಶಿ ತಾಯಿಯಿಂದ ದೂರು

Share the Article

Bengaluru : ಆರ್ ಸಿಬಿ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ಸಂಭವಿಸಿ 11 ಜನರು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ಮೃತಪಟ್ಟಿದ್ದ ದಿವ್ಯಾಂಶಿ ಎಂಬುವರ ಕಿವಿಯೋಲೆ ಕಳುವಾಗಿದೆ ಎಂದು ದಿವ್ಯಾಂಶಿ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಹೌದು, ನೆಚ್ಚಿನ ತಂಡದ ಗೆಲುವನ್ನು ಸಂಭ್ರಮಿಸಲ ಬಂದಿದ ದಿವ್ಯಾಂಶಿ ಕಾಲ್ತುಳಿತಕ್ಕೆ ಬಲಿಯಾಗಿದ್ದಳು. ಇದೀಗ ದಿವ್ಯಾಂಶಿ ತಾಯಿ ಮಾಧ್ಯಮದ ಮುಂದೆ ಬಂದು ತನ್ನ ಮಗಳ ಕಿವಿಯಲ್ಲಿದ್ದ ಓಲೆ ಕಳುವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಅಂದಹಾಗೆ ದಿವ್ಯಾಂಶಿ ಮರಣೋತ್ತರ ಪರೀಕ್ಷೆ ಬೌರಿಂಗ್‌ ಆಸ್ಪತ್ರೆಯಲ್ಲಿ ನಡೆದಿದ್ದು, ಮಗಳ ಮೃತದೇಹವನ್ನು ಒಳಗೆ ತೆಗೆದುಕೊಂಡು ಹೋಗಬೇಕಾದರೆ ಓಲೆ ಇತ್ತು, ಆದರೆ ಮೃತದೇಹ ಹಸ್ತಾಂತರಿಸಿದಾಗ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಹೀಗಾಗಿ ಬೌರಿಂಗ್‌ ಆಸ್ಪತ್ರೆ ವಿರುದ್ಧ ದೂರು ನೀಡಿದ್ದಾಗಿ ಹೇಳಿದ್ದಾರೆ.

ದೂರು ನೀಡಿದ ಬಳಿಕ ಮಾತನಾಡಿದ ದಿವ್ಯಾಂಶಿ ತಾಯಿ ಅಶ್ವಿನಿ, ದಿವ್ಯಾಂಶಿ ಹುಟ್ಟುಹಬ್ಬದ ವೇಳೆ ಆಕೆಯ ಮಾವ ಓಲೆಯನ್ನು ಉಡುಗೊರೆಯಾಗಿ ನಿದಿದ್ದರು. ಆ ಓಲೆ ಮೇಲೆ ಆಕೆಗೆ ತುಂಬಾ ಅಟ್ಯಾಚ್ ಮೆಂಟ್ ಇತ್ತು. ಹಾಗಾಗಿ ಆ ಓಲೆ ಬೇಕು ಎಂದು ಕೇಳಿದ್ದೇನೆ. ಮಗಳು ತುಂಬಾ ಆಸೆ ಪಟ್ಟು ಅದನ್ನು ಹಾಕಿಕೊಂಡಿದ್ದಳು. ಒಂದೂವರೆ ವರ್ಷದಿಂದ ಕಿವಿಯೋಲೆ ಬಿಚ್ಚಿರಲಿಲ್ಲ. ಮಗಳ ಮರಣೋತ್ತರ ಪರೀಕ್ಷೆ ಬಳಿಕ ಕಿವಿಯೋಲೆ ಕಾಣೆಯಾಗಿದೆ. ಹಾಗಾಗಿ ಬೌರಿಂಗ್ ಆಸ್ಪತ್ರೆ ವಿರುದ್ಧ ದೂರು ನೀಡಿದ್ದೇನೆ. ಆಸ್ಪತ್ರೆಗೆ ಹೋಗಿ ವಿಚಾರಿಸಿದರೆ ಯಾರೂ ಸರಿಯಾಗಿ ಸ್ಪಂದಿಸಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ISKCON ರೆಸ್ಟೋರೆಂಟ್ ಒಳಗೆ ಚಿಕನ್ ತಿಂದ ಪ್ರಕರಣ- ISKCON ರಿವೇಂಜ್‌ ಗೆ ನೆಟ್ಟಿಗರು ಫಿದಾ!

Comments are closed.