ISKCON ರೆಸ್ಟೋರೆಂಟ್ ಒಳಗೆ ಚಿಕನ್ ತಿಂದ ಪ್ರಕರಣ- ISKCON ರಿವೇಂಜ್ ಗೆ ನೆಟ್ಟಿಗರು ಫಿದಾ!

ISKCON: ಇತ್ತೀಚಿಗೆ ಲಂಡನ್ ನ ಇಸ್ಕಾನ್ ದೇಗುಲದ ಗೋವಿಂದಾ ರೆಸ್ಟೋರೆಂಟ್ ಒಳಗೆ ಯುವಕನೋರ್ವ ಚಿಕನ್ ತಿಂದು ಭಕ್ತರ ನಂಬಿಕೆಗಳಿಗೆ ಘಾಸಿ ಮಾಡುವ ಪ್ರಯತ್ನ ಮಾಡಿದ್ದ..ಆದರೆ ಇದೀಗ ಇದಕ್ಕೆ ಇಸ್ಕಾನ್ ಭಕ್ತರು ನೀಡಿರುವ ಪ್ರತಿಕ್ರಿಯೆಗೆ ನೆಟ್ಟಿಗರೇ ಫಿದಾ ಆಗಿದ್ದಾರೆ.

ಹೌದು, ಲಂಡನ್‍ನಲ್ಲಿ ಇಸ್ಕಾನ್ (ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್) ನಡೆಸುತ್ತಿರುವ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಗೋವಿಂದಾಸ್ ನಲ್ಲಿ ಇತ್ತೀಚೆಗೆ ಆಫ್ರಿಕನ್ ಮೂಲದ ಯುವಕನೊಬ್ಬ ಕೋಳಿ ಮಾಂಸ ತಿನ್ನುತ್ತಿರುವ ವಿಡಿಯೊ ಭಾರಿ ವೈರಲ್ ಆಗಿತ್ತು.ಇದೀಗ ಇಸ್ಕಾನ್ ಭಕ್ತರು ಕೆಎಫ್‍ಸಿ ಮೇಲೆ ಶಾಂತ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ.
ಅದೇನೆಂದರೆ ಇಬ್ಬರು ಇಸ್ಕಾನ್ ಸಂತರು ಕೆಎಫ್‌ಸಿ ಔಟ್‌ಲೆಟ್‌ನ ಹೊರಗೆ ನಿಂತು ಹರೇ ರಾಮ ಹರೇ ಕೃಷ್ಣ ಎಂದು ಜಪಿಸಿದ್ದಾರೆ. ಇದರ ವಿಡಿಯೊ ವೈರಲ್ ಆಗಿದ್ದು, ಇದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಅತ್ಯಂತ ಶಾಂತ ರೀತಿಯ ಪ್ರತೀಕಾರ ಎಂದು ಕರೆದಿದ್ದಾರೆ.
ನೆಟ್ಟಿಗರು ಫಿದಾ
ಇಸ್ಕಾನ್ ಸಿಬ್ಬಂದಿಗಳ ಈ ವಿಶೇಷ ರೀತಿಯ ಪ್ರತಿಭಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಆರ್ಭಟವಿಲ್ಲದೇ, ಆಕ್ರೋಶವಿಲ್ಲದೇ ಧಾರ್ಮಿಕತೆಯ ಕುರಿತು ಅರಿವು ಮೂಡಿಸುವ ಪ್ರತಿಭಟನೆ ನಡೆಸಿದ್ದಾರೆ ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
They come to our restaurants to harass us, & we come to uplift their consciousness. Hare Kṛṣṇa pic.twitter.com/7dQm5D42qx
— Senāpati Bhakta (@bhaktSenapati) July 22, 2025
Comments are closed.