Bike: ಕೇವಲ 73 ಸಾವಿರ ರೂ ಗೆ ಹೀರೋ ಹೆಎಫ್ ಡಿಲಕ್ಸ್ ಪ್ರೋ ಬೈಕ್ !

Share the Article

Bike: ಹೀರೋ ಡಿಲಕ್ಸ್ ಬೈಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಹೀರೋ ಇದೀಗ ಹೆಎಫ್ ಡಿಲಕ್ಸ್ ಪ್ರೋ ಬೈಕ್ ಬಿಡುಗಡೆ ಮಾಡಿದೆ. ಇದರ ಬೆಲೆ 73,550 ರೂಪಾಯಿ (ಎಕ್ಸ್ ಶೋ ರೂಂ).

i3S (Idle Stop-Start System), ಕಡಿಮೆ-ಘರ್ಷಣೆಯ ಇಂಜಿನ್, ವಿಶೇಷವಾಗಿ ಇಂಜಿನಿಯರ್ ಮಾಡಲಾಗಿರುವ ಟೈರ್ಗಳು ಮುಂತಾದ ಅತ್ಯಾಧುನಿಕ ತಂತ್ರಜ್ಞಾನಗಳ ಶಕ್ತಿ ಹೊಂದಿರುವ ಅದು ವರ್ಗದಲ್ಲೇ ಅತ್ಯುತ್ತಮವಾದ ಮೈಲೇಜ್ ಒದಗಿಸುತ್ತದೆ. ಅನಾಯಾಸ ದಿನನಿತ್ಯದ ರೈಡ್‌ಗಳು ಮತ್ತು ಸರಿಸಾಟಿಯಿಲ್ಲದ ಮೌಲ್ಯಕ್ಕಾಗಿಯೇ HF Deluxe Pro ನಿರ್ಮಾಣ ಮಾಡಲಾಗಿದೆ.

ಟ್ಯೂಬ್‌ಲೆಸ್ ಟೈರ್ ಇರುವ ದೊಡ್ಡ 18” ವ್ಯಾಸದ ಮುಂಬದಿ ಮತ್ತು ಹಿಂಬದಿ ಚಕ್ರಗಳನ್ನು ಹೊಂದಿದೆ. 130mm ವ್ಯಾಸದ ಹಿಂಬದಿಯ ಬ್ರೇಕ್ ಡ್ರಮ್ ಹೆಚ್ಚು ಪ್ರಬಲವಾದ ಬ್ರೇಕಿಂಗ್ ಕಾರ್ಯಕ್ಷಮತೆ ಮತ್ತು ಇನ್ನೂ ಉತ್ತಮವಾದ ನಿಯಂತ್ರಣ ಖಾತರಿಪಡಿಸುತ್ತದೆ.

HF Deluxe Pro, 7.9 bhp at 8000 RPM ಔಟ್‌ಪುಟ್ ಮತ್ತು 6000 RPM ನಲ್ಲಿ 8.05 Nm ಟಾರ್ಕ್‌ನ ಬಲಿಷ್ಟ ಕಾರ್ಯಕ್ಷತೆ ಒದಗಿಸುವ ವಿಶ್ವಸನೀಯ 97.2cc ಇಂಜಿನ್‌ನ ಶಕ್ತಿ ಹೊಂದಿದೆ i3S (Idle Stop-Start System), ತಂತ್ರಜ್ಞಾನ, ಲೋ-ಫ್ರಿಕ್ಷನ್ ಇಂಜಿನ್ ಮತ್ತು ಲೋ ರೋಲಿಂಗ್ ರೆಸಿಸ್ಟೆನ್ಸ್ ಟೈರ್ಗಳೊಂದಿಗೆ ಅದು ಸಲಿಲವಾದ ವೇಗವರ್ಧನೆ ಖಾತರಿಪಡಿಸುವ ಸಮಯದಲ್ಲೇ ಅತ್ಯುತ್ಕೃಷ್ಟ ಮೈಲೇಜ್ ಸಾಧಿಸುತ್ತದೆ.

ಇದನ್ನೂ ಓದಿ: Mangaluru: ಜೈಲಿನಲ್ಲಿ ಖೈದಿಗಳ ದಾಳಿ ಪ್ರಕರಣ: ಬರ್ಕೆ ಠಾಣೆಯಲ್ಲಿ (KCOCA) ಕಾಯ್ದೆಯಡಿ ಪ್ರಕರಣ ದಾಖಲು!

Comments are closed.