HK Patil: ರಾಜ್ಯದ ಎಲ್ಲ ಬಹುಮಹಡಿ, ಎತ್ತರದ ಕಟ್ಟಡಗಳಿಗೆ ಶೇ.1ರಷ್ಟು ಸೆಸ್: ಹೆಚ್.ಕೆ ಪಾಟೀಲ್

Share the Article

HK Patil: ರಾಜ್ಯದ ಬಹುಮಹಡಿ ಹಾಗೂ ಎತ್ತರವಾದ ಕಟ್ಟಡಗಳಿಗೆ ಶೇ.1ರಷ್ಟು ಸೆಸ್ (Cess) ವಿಧಿಸಲು ಸರ್ಕಾರ (Government) ನಿರ್ಧರಿಸಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ (HK Patil) ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ (Cabinet Meeting) ಸರ್ಕಾರಿ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಸಂಪುಟ ಮಹತ್ವದ ಒಪ್ಪಿಗೆ ನೀಡಿದೆ ಹಾಗೂ ಒಳಾಡಳಿತ ಇಲಾಖೆಗೆ ಸೂಚನೆ ನೀಡಲು ತೀರ್ಮಾನ ಮಾಡಲಾಗಿದೆ. ಸಚಿವ ಸಂಪುಟ ಸಭೆಯ ಮಾಧ್ಯಮಗಳ ಬಳಿಕ ಜೊತೆ ಮಾತನಾಡಿದ ಅವರು, ಅಗ್ನಿಶಾಮಕ ದಳದ ಕಾಯ್ದೆ ಅನ್ವಯ ಆಗುವ ವಾಣಿಜ್ಯ ಕಟ್ಟಡಗಳು, ಕೈಗಾರಿಕಾಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ ಕಟ್ಟಡಗಳು, ಅಪಾರ್ಟ್ ಮೆಂಟ್ ಗಳು ಸೇರಿ ಎತ್ತರದ ಬಹುಮಹಡಿ ಕಟ್ಟಡಗಳಿಗೆ 1% ಸೆಸ್ ಹಾಕಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Death: 12ನೇ ಮಹಡಿಯಿಂದ ಬಿದ್ದು 3 ವರ್ಷದ ಬಾಲಕಿ ಮೃತ್ಯು

Comments are closed.