Hyderabad: ಫ್ರಿಡ್ಜ್‌ನಲ್ಲಿಟ್ಟ ಚಿಕನ್‌, ಮಟನ್‌, ಬೋಟಿ ಬಿಸಿ ಮಾಡಿ ತಿಂದು ಓರ್ವ ಸಾವು, ಮೂವರು ಗಂಭೀರ

Share the Article

Hyderabad: ಹಬ್ಬದ ಪ್ರಯುಕ್ತ ಚಿಕನ್‌, ಮಟನ್‌ ಮತ್ತು ಬೋಟಿ ಮಾಡಲಾಗಿದ್ದು, ಉಳಿದ ಪದಾರ್ಥವನ್ನು ಪ್ರಿಡ್ಜ್‌ನಲ್ಲಿಟ್ಟಿದ್ದು, ಇದನ್ನು ಮರುದಿನ ಸೇವನೆ ಮಾಡಿದ ನಾಲ್ವರಲ್ಲಿ ಓರ್ವ ಮೃತ ಪಟ್ಟಿದ್ದು, ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ಒಟ್ಟು 9 ಜನರಲ್ಲಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಫುಡ್‌ ಪಾಯ್ಸನ್‌ ಸಾವಿಗೆ ಕಾರಣ ಶಂಕೆ ವ್ಯಕ್ತವಾಗಿದೆ.

46 ವರ್ಷದ ಶ್ರೀನಿವಾಸ್‌ ಯಾದವ್‌ ಅವರ ವನಸ್ಥಳಿಪುರದ ಮನೆಯಲ್ಲಿ ಹಬ್ಬ ಇದ್ದು, ಹೀಗಾಗಿ ಚಿಕನ್‌, ಮಟನ್‌ ಮತ್ತು ಬೋಟಿ ಮಾಡಲಾಗಿತ್ತು. ಉಳಿದ ಮಾಂಸ ಪದಾರ್ಥವನ್ನು ಫ್ರಿಡ್ಜ್‌ನಲ್ಲಿಟ್ಟು, ಮರುದಿನ ಬಿಸಿ ಮಾಡಿ ತಿಂದಿದ್ದಾರೆ. ಸ್ವಲ್ಪ ಸಮಯದಲ್ಲಿಯೇ ಕುಟುಂಬದ 9 ಜನರಿಗೆ ವಾಂತಿ ಮತ್ತು ಭೇದಿ ಕಾಣಿಸಿದ್ದು, ಕೂಡಲೇ ಎಲ್ಲರನ್ನು ಹತ್ತಿರದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಶ್ರೀನಿವಾಸ್ ಅವರ ಪತ್ನಿ ರಜಿತಾ, ಮಕ್ಕಳಾದ ಲಹರಿ, ಜಾಸ್ಮಿತಾ, ತಾಯಿ ಗೌರಮ್ಮ, ರಜಿತಾ ಅವರ ಸಹೋದರ ಸಂತೋಷ್ ಕುಮಾರ್, ಪತ್ನಿ ರಾಧಿಕಾ ಮತ್ತು ಅವರ ಹೆಣ್ಣುಮಕ್ಕಳಾದ ಪೂರ್ವಿಕಾ, ಕೃತಜ್ಞ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಶ್ರೀನಿವಾಸ್‌ ಅವರು ಮೃತಪಟ್ಟಿದ್ದಾರೆ.

ಫುಡ್‌ ಪಾಯಿಸನ್‌ನಿಂದ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದ್ದು, ಪೋಸ್ಟ್‌ಮಾರ್ಟಮ್‌ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲು ಸಾಧ್ಯ ಎಂದು ವನಸ್ಥಳಿಪುರ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: World News: 50 ಜನರನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ವಿಮಾನ ಪತನ, ನಾಪತ್ತೆ ನಂತರ ಅವಶೇಷಗಳು ಪತ್ತೆ

Comments are closed.