Araga Jnanedra: ಧರ್ಮಸ್ಥಳ ನಮ್ಮೆಲ್ಲರ ಶ್ರದ್ಧಾ ಕೇಂದ್ರ: ಕೇರಳ ಸರಕಾರದ ಮಧ್ಯಪ್ರವೇಶ ಸಲ್ಲದು- ಅರಗ ಜ್ಞಾನೇಂದ್ರ

Share the Article

Araga Jnanedra: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಪಟ್ಟಂತೆ ತನಿಖೆ ಮಾಡಲು ರಾಜ್ಯ ಸರಕಾರ ಎಸ್‌ಐಟಿ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಇದೀಗ ಈ ಆರೋಪದ ತನಿಖೆ ಪ್ರಕರಣದಲ್ಲಿ ಕೇರಳ ಸರಕಾರ ಮಧ್ಯೆ ಪ್ರವೇಶ ಮಾಡುತ್ತಿದೆ. ಈ ಭಾಗವಹಿಸುವಿಕೆ ತನಿಖೆಗೆ ತೊಂದರೆಯಾಗಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದ ಕುರಿತಾಗಿ ರಾಜ್ಯ ಸರ್ಕಾರ ತನಿಖೆ ಮಾಡಿರುವುದಕ್ಕೆ ಸ್ವತಂತ್ರ ತನಿಖಾ ತಂಡ (SIT) ರಚನೆ ಮಾಡಿರುವುದನ್ನು ನಾವು ಸ್ವಾಗತ ಮಾಡುತ್ತೇವೆ. ಆದರೆ, ನ್ಯಾಯಸಮ್ಮತವಾದ ತನಿಖೆ ಮಾಡಿ, ವರದಿ ಸಲ್ಲಿಕೆ ಮಾಡಬೇಕು. ಆದರೆ, ಅನೇಕರು ಇದರ ಹಿಂದೆ ಕೆಲಸ ಮಾಡುವುದು ಸರಿಯಲ್ಲ. ಎಸ್‌ಐಟಿ ತಂಡದವರೇ ತನಿಖೆಮಾಡಿ, ಅವರೇ ವರದಿ ಕೊಡುತ್ತಾರೆ‌. ಧರ್ಮಸ್ಥಳ ನಮ್ಮೆಲ್ಲರ ಶ್ರದ್ಧಾ ಕೇಂದ್ರವಾಗಿದೆ. ಅದಕ್ಕೆ ಮಸಿ ಬಳಿಯುವ ಕೆಲಸ ಆಗುತ್ತಿದೆ. ಕೇರಳ ಸರ್ಕಾರ ಮಧ್ಯಪ್ರವೇಶ ಮಾಡುತ್ತಿದ್ದಾರೆ. ನಗರ ನಕ್ಸಲರು ಪ್ರಕರಣದಲ್ಲಿ ಎಂಟ್ರಿ ಆಗುತ್ತಿದ್ದಾರೆ. ಅವರ ಪ್ರವೇಶದಿಂದ ತನಿಖೆಯಲ್ಲಿ ತೊಡಕು ಆಗುವುದಕ್ಕೆ ಕಾರಣವಾಗಲಿದೆ. ಪೊಲೀಸರು ಪಾರದರ್ಶಕ ತನಿಖೆ ಮಾಡಲಿ ಎಂದು ಆಗ್ರಹಿಸಿದರು.

Comments are closed.