Home News Supreme Court: ‘ಧರ್ಮಸ್ಥಳದ ಬಗ್ಗೆ ಸುದ್ದಿ ಪ್ರಕಟಿಸಲು ಅನುಮತಿ ನೀಡಿ’ ಎಂದು ಅರ್ಜಿ – ‘ಮೊದಲು...

Supreme Court: ‘ಧರ್ಮಸ್ಥಳದ ಬಗ್ಗೆ ಸುದ್ದಿ ಪ್ರಕಟಿಸಲು ಅನುಮತಿ ನೀಡಿ’ ಎಂದು ಅರ್ಜಿ – ‘ಮೊದಲು ಹೈಕೋರ್ಟ್ ನಲ್ಲಿ ಅರ್ಜಿ ಹಾಕಿ’ ಎಂದ ಸುಪ್ರೀಂ ಕೋರ್ಟ್ !!

Hindu neighbor gifts plot of land

Hindu neighbour gifts land to Muslim journalist

Supreme Court: ಧರ್ಮಸ್ಥಳ ಅಪರಾಧ ಕೃತ್ಯಗಳ ಕುರಿತು ಹಾಗೂ ಧರ್ಮಸ್ಥಳಕ್ಕೆ ಸಂಬಂಧಪಟ್ಟವರ ಕುರಿತು ಮಾನನಷ್ಟಕರ ವಿಷಯವನ್ನು ಪ್ರಕಟಿಸುವುದನ್ನು ತಡೆಯುವ ಬೆಂಗಳೂರು ನ್ಯಾಯಾಲಯದ ಆದೇಶದ ವಿರುದ್ಧ ಯೂಟ್ಯೂಬ್ ಚಾನೆಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಇದೀಗ ಈ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಹೌದು, ಧರ್ಮಸ್ಥಳ ಸರಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಷೇಂದ್ರ ಕುಮಾರ್ ಡಿ (ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯ ಸಹೋದರ) ವಿರುದ್ಧ ಯಾವುದೇ ಅಪವಾದಾತ್ಮಕ ಸುದ್ದಿ ಹಾಗೂ ವಿಡಿಯೊವನ್ನು ಮಾಡುವುದನ್ನು ನಿರ್ಬಂಧಿಸುವ ಬೆಂಗಳೂರು ನಗರ ನಾಗರಿಕ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶಕ್ಕೆ ಎದುರಾಗಿ ‘ಥರ್ಡ್ ಐ ಕನ್ನಡ’ ಯೂಟ್ಯೂಬ್ ಚಾನೆಲ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದೀಗ ಈ ಅರ್ಜಿಯನ್ನು ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಹೈ ಕೋರ್ಟ್ ನಲ್ಲಿ ನೀವೇಕೆ ಅರ್ಜಿ ಸಲ್ಲಿಸಲಿಲ್ಲ, ಮೊದಲು ಹೈಕೋರ್ಟ್ ಅನ್ನು ಸಂಪರ್ಕಿಸ ಬೇಕಲ್ಲವೇ? ನೇರವಾಗಿ ಇಲ್ಲಿಗೆ ಬಂದದ್ದೇಕೆ? ಮೊದಲು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಎಂದು ಅರ್ಜಿದಾರರಿಗೆ ತಿಳಿಸಿದೆ.

ಅಂದಹಾಗೆ ಪ್ರಕರಣವನ್ನು ವಿಚಾರಣೆಗೊಳಪಡಿಸಿದ ನ್ಯಾಯಾಲಯ ಮುಖ್ಯ ನ್ಯಾಯಮೂರ್ಗಿಗಳಾದ ಬಿ.ಆರ್‌.ಗವಾಯಿ ಮತ್ತು ವಿನೋದ್‌ ಚಂದ್ರನ್‌, ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಈ ವಿಷಯದಲ್ಲಿ ಕರ್ನಾಟಕ ಹೈಕೋರ್ಟ್‌ ಅನ್ನು ಮೊದಲು ಸಂಪರ್ಕಿಸಿ . ಬಳಿಕ ನಮ್ಮ ಬಳಿಗೆ ಬನ್ನಿ. ನಮ್ಮದೇ ದೇಶದ ಹೈಕೋರ್ಟ್‌ ಗಳ ಆಜ್ಞೆಯನ್ನು ನಾವು ತೆಗೆದುಹಾಕಲು ಸಾಧ್ಯವಿಲ್ಲ. ಹೀಗಾಗಿ ನೀವು ಮೊದಲು ಹೈಕೋರ್ಟ್‌ ನಲ್ಲಿ ನಿಮ್ಮ ಅರ್ಜಿ ಸಲ್ಲಿಸಿ. ಅಲ್ಲಿಯೂ ನ್ಯಾಯ ದೊರಕದೆಂದು ನೀವು ಭಾವಿಸಿದರೆ ಇಲ್ಲಿಗೆ ಬರಬಹುದು ಎಂದು ನ್ಯಾಯಾಧೀಶರು ಅರ್ಜಿದಾರರ ಪರ ವಕೀಲರಿಗೆ ಹೇಳಿದರು.

ಇದನ್ನೂ ಓದಿ: Vice President : ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ – ಇನ್ಮುಂದೆ ಜಗದೀಪ್ ಧಂಖರ್ ಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳೇನು?