Vice President : ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ – ಇನ್ಮುಂದೆ ಜಗದೀಪ್ ಧಂಖರ್ ಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳೇನು?

Vice President : ಉಪ ರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧಂಖರ್ ಅವರು ದಿಢೀರ್ ರಾಜೀನಾಮೆ ನೀಡಿದ್ದು ಅವರ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗಳು ಅಂಗೀಕರಿಸಿ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿ ಆಗಿದೆ. ಹಾಗಿದ್ದರೆ ಇನ್ನು ಮುಂದೆ ಜಗದೀಪ್ ಧನಕರ್ ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ನೋಡಿ

ಧಂಖರ್‌ಗೆ ಸಿಬ್ಬಂದಿಯೊಂದಿಗೆ ಟೈಪ್ 8 ಬಂಗಲೆಯನ್ನು ನೀಡಲಾಗುವುದು. ಅವರಿಗೆ Z+ ಭದ್ರತೆಯೂ ಸಹ ಸಿಗುತ್ತದೆ. ಅವರು ತಿಂಗಳಿಗೆ 1, 25,000 ರೂಪಾಯಿ ಪಿಂಚಣಿ, ಸರ್ಕಾರಿ ಕಾರು, ಚಾಲಕ, ವೈದ್ಯಕೀಯ ಸೌಲಭ್ಯಗಳು ಮತ್ತು ಪ್ರಯಾಣ ಭತ್ಯೆಗಳನ್ನು ಇತರ ಪ್ರಯೋಜನಗಳ ಜೊತೆಗೆ ಪಡೆಯುತ್ತಾರೆ.
ಇನ್ನು ಈ ಹಿಂದೆ, ಎಲ್ಲಾ ಉಪ ರಾಷ್ಟ್ರಪತಿಗಳು ಮೌಲಾನಾ ಆಜಾದ್ ರಸ್ತೆಯಲ್ಲಿರುವ ಉಪ ರಾಷ್ಟ್ರಪತಿಗಳ ನಿವಾಸದಲ್ಲಿ ವಾಸಿಸುತ್ತಿದ್ದರು. ಆದರೆ ದೆಹಲಿಯಲ್ಲಿ ಹೊಸದಾಗಿ ನಿರ್ಮಿಸಲಾದ ವೈಸ್ ಪ್ರೆಸಿಡೆಂಟ್ ಎನ್ಕ್ಲೇವ್‌ನಲ್ಲಿ ವಾಸಿಸಿದ ಮೊದಲ ಉಪ ರಾಷ್ಟ್ರಪತಿಗಳು ಜಗದೀಪ್ ಧಂಖರ್ ಆಗಿದ್ರು. ಸುಮಾರು 15 ಎಕರೆಗಳಷ್ಟು ವಿಸ್ತಾರವಾದ ಸಂಕೀರ್ಣದಲ್ಲಿ ಅವರು ಸುಮಾರು ಒಂದೂವರೆ ವರ್ಷಗಳ ಕಾಲ ವಾಸಿಸುತ್ತಿದ್ದರು. ಈ ಎನ್ಕ್ಲೇವ್‌ನಲ್ಲಿ ಉಪ ರಾಷ್ಟ್ರಪತಿಗಳ ನಿವಾಸ(ಕಟ್ಟಡ + ನೆಲಮಾಳಿಗೆ), ಪ್ರತ್ಯೇಕ ಸಚಿವಾಲಯ ಕಟ್ಟಡ, ಅತಿಥಿ ಗೃಹ, ಸಿಬ್ಬಂದಿ ವಸತಿಗೃಹಗಳು, ಕ್ರೀಡಾ ಸೌಲಭ್ಯಗಳು ಮತ್ತು ಈಜುಕೊಳಗಳು ಇವೆ.
Comments are closed.