Jagadeep Dhankar ರಾಜೀನಾಮೆಗೆ ಕಾರಣವಯ್ತಾ ಬಿಹಾರ ಚುನಾವಣೆ? ವರದಿ

Jagadeep Dhankar : ಉಪ ರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧಂಖರ್ ಅವರು ದಿಢೀರ್ ರಾಜೀನಾಮೆ ನೀಡಿದ್ದು ಅವರ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗಳು ಅಂಗೀಕರಿಸಿ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿ ಆಗಿದೆ. ಆದರೆ ಧನಕರ್ ಅವರ ರಾಜೀನಾಮೆ ಕುರಿತು ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದೆ.

ಜಗದೀಪ್ ಧಂಖರ್ ಅವರು ಅನಾರೋಗ್ಯದ ಕಾರಣ ತಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಷ್ಟ್ರಪತಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಆದರೆ ಪಕ್ಷಗಳು ಉಪರಾಷ್ಟ್ರಪತಿಗಳ ರಾಜೀನಾಮೆಗೆ ಅನಾರೋಗ್ಯ ಕಾರಣವಲ್ಲ, ಇದರ ಹಿಂದೆ ಬೇರೆಯೇ ಕಾರಣವಿದೆ ಎಂದು ಆರೋಪಿಸಿದ್ದವು. ಜೊತೆಗೆ ಜಗದೀಪ್ ದಂಕರ್ ಅವರು ವಿದಾಯ ಭಾಷಣ ಮಾಡದೆ ಇದ್ದದ್ದು, ಅವರ ರಾಜೀನಾಮೆ ಕುರಿತು ಯಾವೊಬ್ಬ ನಾಯಕರು ಕೂಡ ಪ್ರತಿಕ್ರಿಯೆಸದೆ ಇದ್ದದ್ದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಆದರೆ ಇದೀಗ ಉಪರಾಷ್ಟ್ರಪತಿಗಳ ರಾಜೀನಾಮೆಗೆ ಬಿಹಾರ ಚುನಾವಣೆಯ ಕಾರಣ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಹೌದು, ವರ್ಷಾಂತ್ಯದಲ್ಲಿ ಬಿಹಾರದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ತನ್ನ ನೆಲೆಯನ್ನು ಭದ್ರವಾಗಿಸಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ, ಎನ್‌ಡಿಎ ಕೂಟದ ಭಾಗವಾಗಿರುವ ಜೆಡಿಯು ಬೆಂಬಲ ಉಳಿಸಿಕೊಳ್ಳಲು ಮುಂದಾಗಿದೆ. ಇದರ ಭಾಗವಾಗಿ, ಸಿಎಂ ನಿತೀಶ್ ಕುಮಾರ್ ಅವರನ್ನು ಅವರ ಬಿಹಾರ ಮೂಲದ ಯಾವುದಾದರೂ ಹಿರಿಯ ರಾಜಕೀಯ ನಾಯಕನನ್ನು ಉಪರಾಷ್ಟ್ರಪತಿ ಮಾಡಲು, ಧನಕರ್ ಅವರನ್ನು ಆ ಸ್ಥಾನದಿಂದ ಇಳಿಸಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ, ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್, ‘ನಿತೀಶ್‌ರನ್ನು ವಿಪಿ ಮಾಡಿದರೆ ಬಿಹಾರಕ್ಕೆ ಒಳ್ಳೆಯದು’ ಎಂದು ಹೇಳಿದ್ದಾರೆ.
Comments are closed.