Health Tips: ನೆಲದ ಮೇಲೆ ಕುಳಿತು ಊಟ ಮಾಡಿದರೆ ಏನಾಗುತ್ತದೆ? ಪ್ರಯೋಜನಗಳನ್ನು ಓದಿದರೆ ಊಟದ ಮೇಜನ್ನು ಬಿಡುತ್ತೀರಿ!

Share the Article

Health Tips: ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಸಾಕಷ್ಟು ಬದಲಾಗಿದೆ. ಹಳೆಯ ಒಳ್ಳೆಯ ವಿಷಯಗಳು ಮತ್ತು ಅಭ್ಯಾಸಗಳು ದೂರವಾಗುತ್ತಿವೆ.ಕೆಲ ವರ್ಷಗಳ ಹಿಂದಿನವರೆಗೂ ಮನೆಯವರೆಲ್ಲ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದರು ಎಂಬುದು ನಿಮಗೆ ನೆನಪಿರಬಹುದು. ಆದರೆ, ಈಗ ಜನರ ಮನೆಯಲ್ಲಿ ಡೈನಿಂಗ್ ಟೇಬಲ್ ಬಂದಿದೆ. ಜನರು ಸೋಫಾದಲ್ಲಿ, ಹಾಸಿಗೆಯಲ್ಲಿ, ನಿಂತುಕೊಂಡು (ಬಫೆ ಹಾಗೂ ರೆಸ್ಟೋರೆಂಟ್/ಬೀದಿಗಳಲ್ಲಿ… ಎಲ್ಲೆಂದರಲ್ಲಿ ತಿನ್ನುತ್ತಾರೆ. ಆದರೆ, ಊಟದ ಕೋಣೆಯಲ್ಲಿ ನೆಲಕ್ಕೆ ಕೂತು ಊಟ ಮಾಡುವುದರಿಂದ ಆಗುವ ಪ್ರಯೋಜನಗಳು ಅವರಿಗೆ ಗೊತ್ತಿಲ್ಲ. ಅದನ್ನೇ ನಾವು ಇಂದು ಹೇಳಲು ಹೊರಟಿದ್ದೇವೆ.

ಕುಳಿತುಕೊಂಡು ಆಹಾರ ಸೇವಿಸುವ ಪದ್ಧತಿಯು ನಿಮಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಮುಖ್ಯವಾದ ವಿಷಯವೆಂದರೆ, ಆಯುರ್ವೇದದ ಅನುಸಾರವೂ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಕುಳಿತು ಊಟ ಮಾಡುವುದರಿಂದ ಆಗುವ ಪ್ರಯೋಜನಗಳು ಏನು ಅನ್ನೋದನ್ನು ಓದಿ.

ದೇಹದ ಚಲನೆಯನ್ನು ಹೆಚ್ಚಿಸುತ್ತದೆ:

ನೆಲದ ಮೇಲೆ ಕುಳಿತು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಪ್ರಮುಖ ಪ್ರಯೋಜನವೆಂದರೆ ಅದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನೆಲವು ಸಮತಟ್ಟಾಗಿರುವುದರಿಂದ, ತುತ್ತುಗಳನ್ನು ಬಾಯಿಗೆ ಹಾಕುವಾಗ ನಾವು ಅನೇಕ ಬಾರಿ ಬಾಗಬೇಕು. ಈ ಕಾರಣದಿಂದಾಗಿ, ದೇಹವು ಚಲಿಸುತ್ತದೆ ಮತ್ತು ಆಹಾರವು ಸರಿಯಾಗಿ ಜೀರ್ಣವಾಗುತ್ತದೆ. ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ತೂಕ ಇಳಿಕೆಯಾಗುತ್ತದೆ. ಅಲ್ಲದೆ ಹೊಟ್ಟೆ ಬೊಜ್ಜು ಬೆಳೆಯುವುದಿಲ್ಲ. ಅಜೀರ್ಣ, ಉರಿ ಮುಂತಾದ ಹೊಟ್ಟೆ ಈ ಅಸ್ವಸ್ಥತೆಗಳು ಸಂಭವಿಸುವುದಿಲ್ಲ.

ನರಗಳು ವಿಶ್ರಾಂತಿ ಪಡೆಯುತ್ತವೆ:

ಊಟ ಮಾಡುವಾಗ ಕಾಲು ಮಡಚಿ ಕುಳಿತುಕೊಳ್ಳುವುದರಿಂದ ದೇಹದ ನರಗಳು ವಿಶ್ರಾಂತಿ ಪಡೆಯುತ್ತವೆ. ಡೈನಿಂಗ್ ಟೇಬಲ್ ಮೇಲೆ ಕುಳಿತುಕೊಳ್ಳುವ ಬದಲು ನೆಲದ ಮೇಲೆ ಕುಳಿತುಕೊಳ್ಳುವುದರಿಂದ ದೇಹದಲ್ಲಿ ರಕ್ತದ ಹರಿವು ಸುಧಾರಿಸುತ್ತದೆ. ದೇಹದ ನಮ್ಯತೆಯನ್ನು ಹೆಚ್ಚಿಸುತ್ತದೆ. ನಾವು ನೆಲದ ಮೇಲೆ ಕುಳಿತು ಊಟ ಮಾಡುವಾಗ ಬೆನ್ನುಮೂಳೆಗಳಿಗೆ ಮತ್ತು ಸ್ನಾಯುಗಳಿಗೆ ವ್ಯಾಯಾಮವಾಗುತ್ತದೆ. ಅಲ್ಲದೆ, ಹೊಟ್ಟೆ, ಬೆನ್ನು ಮತ್ತು ಆಹಾರವು ನಿರಂತರವಾಗಿ ಚಲಿಸುತ್ತಲೇ ಇರುತ್ತದೆ.

ಸರಿಯಾದ ಆಹಾರದ ಪ್ರಮಾಣ:

ಸುಖಾಸನದಲ್ಲಿ ನೆಲದ ಮೇಲೆ ಕುಳಿತು ತಿನ್ನುವುದರಿಂದ ಸರಿಯಾದ ಪ್ರಮಾಣದಲ್ಲಿ ಆಹಾರವನ್ನು ತಿನ್ನಲು ಸಹಾಯ ಮಾಡುತ್ತದೆ. ನಿಂತು ಅಥವಾ ಕುರ್ಚಿಯ ಮೇಲೆ ಕುಳಿತು ತಿನ್ನುವುದರಿಂದ ನಿಮ್ಮ ಜಠರದ ಆಕಾರ ಮತ್ತು ಆಹಾರದ ಪ್ರಮಾಣದಲ್ಲಿ ಅನುಪಾತ ತಪ್ಪುತ್ತದೆ. ನೆಲದ ಮೇಲೆ ಕುಳಿತು ತಿನ್ನುವುದರಿಂದ ಈ ಅನುಪಾತವನ್ನು ಕಾಯ್ದುಕೊಳ್ಳಬಹುದು.

ತೂಕ ನಷ್ಟ:

ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಇದು ಉತ್ತಮ ಪರಿಹಾರವೆಂದು ಪರಿಗಣಿಸಲಾಗಿದೆ. ಕೆಳಗೆ ಊಟಕ್ಕೆ ಕುಳಿತರೆ ನಮಗೆ ಬೇಕಾದಷ್ಟು ಆಹಾರವನ್ನು ಮಾತ್ರ ಸೇವಿಸುತ್ತೇವೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಗಮವಾಗಿರಿಸುತ್ತದೆ ಮತ್ತು ಹೆಚ್ಚು ಉಷ್ಣಾಂಕ (ಕ್ಯಾಲೋರೀಸ್) ಸುಡುವಲ್ಲಿ ಸಹಾಯ ಮಾಡುತ್ತದೆ. ಇದರಿಂದಾಗಿ, ವ್ಯಕ್ತಿಯ ತೂಕ ನಿಯಂತ್ರಣದಲ್ಲಿರುತ್ತದೆ.

ಬೆನ್ನುಮೂಳೆಯು ಬಲವರ್ಧನೆ:

ಬೆನ್ನುಮೂಳೆಯು ಗಟ್ಟಿಯಾಗುತ್ತದೆ ಮತ್ತು ಬಲಗೊಳ್ಳುತ್ತದೆ ಮತ್ತು ಬೆನ್ನಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅಲ್ಲದೆ, ಕುಳಿತು ತಿನ್ನುವುದರಿಂದ ಆಹಾರದ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತದೆ. ಮೆದುಳು ಶಾಂತವಾಗಿ ಉಳಿಯುತ್ತದೆ. ನಿಮ್ಮ ಹೊಟ್ಟೆ ತುಂಬಿದೆ ಎಂದು ಮೆದುಳಿಗೆ ಬೇಗನೆ ತಿಳಿಯುತ್ತದೆ. ಕುರ್ಚಿಯಲ್ಲಿ ಕುಳಿತಾಗ ಅಥವಾ ನಿಂತಿರುವಾಗ, ರಕ್ತ ಪೂರೈಕೆಯು ಕಾಲುಗಳಿಗೆ ಹೋಗುತ್ತದೆ. ಆದ್ದರಿಂದ, ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದು ಅಜೀರ್ಣ, ಆಮ್ಲೀಯತೆ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಉಷ್ಣಾಂಕಗಳು ಕಡಿಮೆಯಾಗುತ್ತವೆ:

ನೆಲದ ಮೇಲೆ ಕುಳಿತು ನಿಧಾನವಾಗಿ ಊಟ ಮಾಡಬಹುದು. ಈ ಕಾರಣದಿಂದಾಗಿ, ನಾವು ಕಡಿಮೆ ತಿನ್ನುತ್ತೇವೆ. ಇದು ದೇಹಕ್ಕೆ ಒಳ್ಳೆಯದು. ಇದರಿಂದ ಹೆಚ್ಚಿನ ಕ್ಯಾಲೋರಿಗಳು ಸೇವಿಸಲ್ಪಡುವುದಿಲ್ಲ. ಮಂಡಿ ನೋವಿನ ಸಮಸ್ಯೆ ನಿವಾರಣೆಯಾಗುತ್ತದ.

ದೇಹಕ್ಕೆ ವ್ಯಾಯಾಮ:

ನೆಲದ ಮೇಲೆ ಕುಳಿತು ತಿನ್ನುವುದರಿಂದ ಸೊಂಟದ ಕೀಲುಗಳು, ಮೊಣಕಾಲುಗಳು ಮತ್ತು ಕಣಕಾಲುಗಳು ಹೊಂದಿಕೊಳ್ಳುತ್ತವೆ. ಈ ನಮ್ಯತೆ ಇಂದಾಗಿ ಎದ್ದು ಕುಳಿತುಕೊಳ್ಳಲು ಕಷ್ಟವಾಗುವುದಿಲ್ಲ. ಮೂಳೆ ರೋಗಗಳು, ಸಮಸ್ಯೆಗಳು ದೂರವಾಗುತ್ತವೆ. ಹೃದಯ ಆರೋಗ್ಯಕರವಾಗಿರುತ್ತದೆ ಕಾಲಿಗೆ ಅಡ್ಡವಾಗಿ ಕುಳಿತುಕೊಳ್ಳುವುದು ಯೋಗದ ವಿವಿಧ ಭಂಗಿಗಳಲ್ಲಿ ಒಂದಾಗಿದೆ. ಈ ಆಸನದಲ್ಲಿ, ದೇಹವು ಶಾಂತ ಸ್ಥಿತಿಯಲ್ಲಿದೆ ಮತ್ತು ಒತ್ತಡವನ್ನು ತೆಗೆದುಹಾಕಲಾಗುತ್ತದೆ. ಹೃದಯವೂ ಆರೋಗ್ಯವಾಗಿರುತ್ತದೆ. ಕುಳಿತುಕೊಂಡು ತಿನ್ನುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ನೆಲದ ಮೇಲೆ ಕುಳಿತುಕೊಳ್ಳುವುದು ಮತ್ತೆ ಊಟದ ನಂತರ ಏಳುವುದು, ಈ ಎರಡು ಕ್ರಿಯೆಗಳಲ್ಲಿ ದೇಹಕ್ಕೆ ಉತ್ತಮ ವ್ಯಾಯಾಮ ಒದಗುತ್ತದೆ. ಹೀಗಾಗಿ, ದೇಹವು ಬಲವಾಗಿ ಮತ್ತು ಹೊಂದಿಕೊಳ್ಳುವಂತೆ ಮಾಡುತ್ತದೆ.

ಸಂಗ್ರಹ – ಡಾ. ಪ್ರ. ಅ. ಕುಲಕರ್ಣಿ

ಇದನ್ನೂ ಓದಿ: Borewell Fee: ರಾಜ್ಯದ ಜನತೆಗೆ ಶಾಕ್ – ಇನ್ಮುಂದೆ ಬೋರ್ವೇಲ್ ನೀರು ಬಳಕೆಗೂ ಶುಲ್ಕ!! ಸರ್ಕಾರದಿಂದ ಮಹತ್ವದ ನಿರ್ಧಾರ

Comments are closed.