Crime: ಕೋರ್ಟ್ ಆವರಣದಲ್ಲಿ ಮಚ್ಚಿನಿಂದ ಕಡಿದು ಮಾರಣಾಂತಿಕ ಹಲ್ಲೆ!

Share the Article

Crime: ಕೋರ್ಟ್ ಆವರಣದಲ್ಲಿ ಪತ್ನಿ, ಅತ್ತೆ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ನಡೆದಿದೆ.

ಸವದತ್ತಿ ತಾಲೂಕಿನ ನಿವಾಸಿ ಐಶ್ವರ್ಯ ಆರೋಪಿ ಬೈಲಹೊಂಗಲ ತಾಲೂಕಿನ ನಿವಾಸಿ ಮುತ್ತಪ್ಪ ಗಣಾಚಾರಿಯನ್ನು ಮದುವೆಯಾಗಿದ್ದು ಕೇಸ್ ಇದ್ದ ಕಾರಣ ಇಂದು ಐಶ್ವರ್ಯ ತನ್ನ ತಾಯಿ ಅನುಸೂಯ ಜೊತೆ ಕೋರ್ಟ್ಗೆ ಬಂದಿದ್ದರು. ಈ ವೇಳೆ ಆರೋಪಿ ಕೋರ್ಟ್ ಆವರಣದಲ್ಲಿ ಪತ್ನಿಯನ್ನು ಕಂಡಕೂಡಲೇ ವಾಗ್ವಾದ ನಡೆಸಿದ್ದಾನೆ ಬಳಿಕ ಆರೋಪಿ ಪತ್ನಿ ಹಾಗೂ ಅತ್ತೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆ ವೇಳೆ ಸ್ಥಳದಲ್ಲಿ ಪೊಲೀಸರು ಇದ್ದಿದ್ದು ಆರೋಪಿಯನ್ನು ತಕ್ಷಣವೇ ಹಿಡಿದು ವಶಕ್ಕೆ ಪಡೆದುಕೊಂಡಿದ್ದಾರೆ. ಗಂಭೀರ ಗಾಯಗೊಂಡ ಪತ್ನಿ ಐಶ್ವರ್ಯ, ಅತ್ತೆ ಅನುಸೋಯಾಳನ್ನ ಧಾರವಾಡ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ:Belthangady: ಬೆಳ್ತಂಗಡಿ: ನಕ್ಸಲ್ ನಾಯಕ ರೂಪೇಶ್ 3 ದಿನ ಪೊಲೀಸ್‌ ಕಸ್ಟಡಿಗೆ!

Comments are closed.