Vice President : ಜಗದೀಪ್ ಧನಕರ್‌ ರಾಜೀನಾಮೆ – ಯಾರಾಗ್ತಾರೆ ಮುಂದಿನ ಉಪರಾಷ್ಟ್ರಪತಿ ?

Share the Article

Vice President : ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಆರೋಗ್ಯ ಸಮಸ್ಯೆಯ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಮುಂದಿನ ಉಪರಾಷ್ಟ್ರಪತಿ ಯಾರಾಗುತ್ತಾರೆ ಎಂಬ ಕುತೂಹಲ ಹುಟ್ಟಿಕೊಂಡಿದೆ. ಯಾಕೆಂದರೆ ಸತ್ಯ ದೇಶದಲ್ಲಿ ಆಡಳಿತ ನಡೆಸುತ್ತಿರುವುದು ಮೈತ್ರಿ ಸರ್ಕಾರ. ಹೀಗಾಗಿ ಯಾವ ಪಕ್ಷದ ನಾಯಕನಿಗೆ ಈ ಪಟ್ಟ ದೊರೆಯಲಿದೆ ಎಂಬ ತವಕ ಹೆಚ್ಚಾಗಿದೆ.

ರಾಜ್ಯಸಭಾ ಉಪ ಸಭಾಪತಿಯೂ ಆದ ಜನತಾದಳ (ಯುನೈಟೆಡ್‌) ಸಂಸದ ಹರಿವಂಶ್‌ ಅವರು 2020ರಿಂದ ಉಪ ಸಭಾಪತಿ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ವಿಶ್ವಾಸವನ್ನು ಗಳಿಸಿದ್ದಾರೆ. ಹೀಗಾಗಿ ಇವರನ್ನೇ ಸರ್ಕಾರವು ಉಪರಾಷ್ಟ್ರಪತಿಯನ್ನಾಗಿ ನೇಮಿಸಬಹುದು ಎಂಬ ಸುದ್ದಿ ಕೇಳಿ ಬರುತ್ತಿದೆ.

ಇನ್ನು ಹರಿವಂಶ್ ಅವರು ರಾಜ್ಯಸಭೆಗೆ ಏಪ್ರಿಲ್ 2014 ರಲ್ಲಿ ಆಯ್ಕೆಯಾದರು. ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಅವರು ಹಲವು ವರ್ಷಗಳ ಕಾಲ ಪತ್ರಕರ್ತರಾಗಿದ್ದರು. ಬ್ಯಾಂಕ್ ಅಧಿಕಾರಿಯಾಗಿ ಸರ್ಕಾರಿ ಕೆಲಸ ಪಡೆದರೂ, ಅವರು ಪತ್ರಕರ್ತರಾಗಿ ಕೆಲಸ ಮಾಡಲು ಬಯಸಿದ್ದರು. ಅವರು ‘ಧರ್ಮಯುಗ್’ನಲ್ಲಿ ಉಪಸಂಪಾದಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ರವಿವರ್ ಮತ್ತು ಪ್ರಭಾತ್ ಖಬರ್ನಂತಹ ಪ್ರಕಾಶನ ಸಂಸ್ಥೆಗಳಲ್ಲಿ ಕೆಲಸ ಮಾಡಿದರು. ನಂತರ, ಅವರು ಪ್ರಭಾತ್ ಖಬರ್ನ ಮುಖ್ಯ ಸಂಪಾದಕರಾದರು. ಹರಿವಂಶ್ ಅವರು ನಿತೀಶ್ ಕುಮಾರ್ ನೇತೃತ್ವದ ಜೆಡಿ (ಯು) ನಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಸಲಹೆಗಾರರಾಗಿ ಸ್ವಲ್ಪ ಸಮಯದವರೆಗೆ ಕೆಲಸ ಮಾಡಿದ ನಂತರ, ಆ ಸರ್ಕಾರದ ಪತನದ ನಂತರ ಅವರು ಪತ್ರಿಕೋದ್ಯಮಕ್ಕೆ ಮರಳಿದರು.

ಇದನ್ನೂ ಓದಿ: Internal reservation: ಒಳ ಮೀಸಲಾತಿ ನೀಡಿ – ಇಲ್ಲವಾದಲ್ಲಿ ಆ.16ರಿಂದ ತಾಲೂಕು, ಜಿಲ್ಲಾ ಕಚೇರಿಗೆ ಬೀಗ ಹಾಕಿ ಹೋರಾಟ – ಸರ್ಕಾರಕ್ಕೆ ಬಿಜೆಪಿ ಎಚ್ಚರಿಕೆ

Comments are closed.