Internal reservation: ಒಳ ಮೀಸಲಾತಿ ನೀಡಿ – ಇಲ್ಲವಾದಲ್ಲಿ ಆ.16ರಿಂದ ತಾಲೂಕು, ಜಿಲ್ಲಾ ಕಚೇರಿಗೆ ಬೀಗ ಹಾಕಿ ಹೋರಾಟ – ಸರ್ಕಾರಕ್ಕೆ ಬಿಜೆಪಿ ಎಚ್ಚರಿಕೆ

Share the Article

Internal reservation: ಒಳ ಮೀಸಲಾತಿ ನೀಡಲು ಮೀನಾಮೇಷ ಎಣಿಸುತ್ತಿರುವ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿರುವ ಬಿಜೆಪಿ ನಾಯಕರು ಇಂದು ಗೋವಿಂದ ಕಾರಜೋಳ ಮತ್ತು ಮಾಜಿ ಸಚಿವ ಆನೇಕಲ್ ನಾರಾಯಣ್ ಸ್ವಾಮಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿದೆರು. ಒಳ ಮೀಸಲಾತಿ ನೀಡಲು ಅವಕಾಶ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದ ಮೇಲೂ ಕರ್ನಾಟಕ ಸರ್ಕಾರ ಇನ್ನೂ ಜಾರಿ ಮಾಡಿಲ್ಲ. ಈ ಸರ್ಕಾರ ಆಗಸ್ಟ್ ಒಂದನೇ ತಾರೀಖು ಒಳಗೆ ಜಾರಿ ಮಾಡಬೇಕು. ಮಾಡಿಲ್ಲ ಎಂದರೆ ಆಗಸ್ಟ್ 16 ರಿಂದ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ನಾಯಕ ಗೋವಿಂದ ಕಾರಜೋಳ ಎಚ್ಚರಿಎಕ ನೀಡಿದ್ದಾರೆ.

ಎಲ್ಲಾ ತಾಲೂಕು ಕಚೇರಿ ಜಿಲ್ಲಾ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡುತ್ತೇವೆ. ಒಳ ಮೀಸಲಾತಿ ಜಾರಿ ಮಾಡದೇ ಹೋದರೆ ನಾವು ಅಸಹಕಾರ ಚಳುವಳಿ ಮಾಡುತ್ತೇವೆ. ಈ ಅಧಿವೇಶನ ಮೊದಲು ನಿರ್ಣಯ ಮಾಡಬೇಕು. ಆಗಸ್ಟ್ ಒಂದರಿಂದ ಜಾರಿ ಬರುವಂತೆ ಮಾಡಬೇಕು. ನುಡಿದಂತೆ ನಡೆದ ಸರ್ಕಾರ ಎನ್ನುತ್ತಾರೆ. ಇದೇ ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ ಮತ್ತು ಸಿದ್ದರಾಮಯ್ಯ 2023ರ ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯನ್ನು ಇನ್ನೊಮ್ಮೆ ಓದಬೇಕು. ನಾವು ಬಂದ ಮೊದಲ ಸಂಪುಟ ಸಭೆಯಲ್ಲೇ ಜಾರಿ ಮಾಡುತ್ತೇವೆ ಎಂದಿದ್ರು. ಆದರೆ ಈ ವರೆಗೆ ಈ ಬಗ್ಗೆ ಯಾವುದೇ ಸುಳಿವಿಲ್ಲ ಎಂದರು.

ನಾಗಮೋಹನ್ ದಾಸ್ ಕಮಿಟಿ 40 ದಿನದಲ್ಲಿ ವರದಿ ನೀಡಲು ಹೇಳಿ ಆರು ತಿಂಗಳು ಆದ್ರೂ ಆಗಲಿಲ್ಲ. ನಾವು ನಮ್ಮ ಪ್ರಾಣ ಒತ್ತೆಯಿಟ್ಟಾದರೂ ಒಳ ಮೀಸಲಾತಿ ಪಡೆಯುತ್ತೇವೆ ಎಂದು ಸರ್ಕಾರಕ್ಕೆ ಗೋವಿಂದ ಕಾರಜೋಳ ಎಚ್ಚರಿಸಿದ್ದಾರೆ. ….

ಇನ್ನು ಸಚಿವ ಆನೇಕಲ್ ನಾರಾಯಣ ಸ್ವಾಮಿ ಮಾತನಾಡಿ, ಒಳಮೀಸಲಾತಿ ಜಾರಿ ಮಾಡಬೇಕು. ಸರ್ಕಾರದ ಗಮನ ಸೆಳೆಯಲು ಆಗಸ್ಟ್ ೧ ರಂದು ಎಲ್ಲಾ ತಾಲೂಕು ಕೇಂದ್ರದಲ್ಲಿ ಹೋರಾಟ ಮಾಡಲಿದ್ದೇವೆ. ಆಗಸ್ಟ್ 11ಕ್ಕೆ ಸದನ ಇದೆ. ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ಜಾರಿಗೆ ತರಬೇಕು. ಇಲ್ಲವಾದರೆ ಕರ್ನಾಟ ಬಂದ್ ಗೆ ಕರೆ ನೀಡುತ್ತೇವೆ. ಹೇಳಿಕೆ ನೀಡಿದ್ದಾರೆ.

ಒಳ ಮೀಸಲಾತಿಗಾಗಿ ಮೂರುವರೆ ದಶಕಗಳ ಹೋರಾಟ. ಒಳ ಮೀಸಲಾತಿ ಅಗತ್ಯವಿಲ್ಲ ಎಂದು ಹಿಂದೆ ಕಾಂಗ್ರೆಸ್ ಹೇಳಿತ್ತು. ಸುಪ್ರೀಂ ಕೋರ್ಟ್, ಒಳಮೀಸಲಾತಿ ಅಗತ್ಯವಿದೆ ಎಂಬ ಅಭಿಪ್ರಾಯ ಹೇಳಿತು. ಕಾಂಗ್ರೆಸ್ – ಬಿಜೆಪಿ ಸಹ ಒಳಮೀಸಲಾತಿ ಕೊಡೋದಾಗಿ ಹೇಳಿ ಮಾತು ತಪ್ಪಿವೆ. ಮಲ್ಲಿಕಾರ್ಜುನ್ ಖರ್ಗೆ, ಎಲ್ಲ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರ ಸಭೆ ಕರೆದಿದ್ರು. ಒಳಮೀಸಲಾತಿ ನಾನು ಹೇಳುವವರೆಗೆ ಜಾರಿ ಮಾಡಬಾರದು ಎಂದಿದ್ದಾರೆ. ಜ. ನಾಗಮೋಹನ್ ದಾಸ್ ಅವರಿಗೆ ರಾಜ್ಯ ಸರ್ಕಾರ ಸಹಕಾರ ನೀಡಿಲ್ಲ. ಯಾವ ಜಾತಿ ಅಧಿಕಾರದಿಂದ ವಂಚಿತವಾಗಿವೆ ಎಂಬ ಮಾಹಿತಿ ನೀಡಿಲ್ಲ ಎಂದರು.

ಸಿಎಂ, ಒಳಮೀಸಲಾತಿ ಜಾರಿ ಮಾಡ್ತಾರೆ ಎಂದು ನಂಬಿದ್ವಿ, ಹೈಕಮಾಂಡ್ ಮಾತಿಗೆ ಅವರು ತಲೆ ಬಾಗಿದ್ರು, ಸಿಎಂ ಮೇಲೆ‌ ನಂಬಿಕೆ ಹೋಗಿದೆ. ಸದನದಲ್ಲಿ ಒಳಮೀಸಲಾತಿ ಮಂಡಿಸಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಆಡಳಿತ ನಡೆಸಲು ಬಿಡಲ್ಲ ಎಂಬ ಎಚ್ಚರಿಕೆಯನ್ನು ನಾರಾಯಣ ಸ್ವಾಮಿ ಸರ್ಕಾರಕ್ಕೆ ನೀಡಿದ್ದಾರೆ.

ಇದನ್ನೂ ಓದಿ: Dakshina Kannada: ದಕ್ಷಿಣ ಕನ್ನಡದಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೊಂಡಿರುವ 11 ಶಾಲೆಗಳ ದುರಸ್ತಿಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ!

Comments are closed.