MRI scan: ಆಭರಣ ಧರಿಸಿ ಸ್ಕ್ಯಾನಿಂಗ್‌: ಎಂಆರ್ಐ ಯಂತ್ರದೊಳಗೆ ಸಿಲುಕಿ ವ್ಯಕ್ತಿ ಸಾವು!

Share the Article

MRI scan: ಎಂಆರ್ಐ ಯಂತ್ರದೊಳಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದಿದೆ.

ಕೀತ್ ಎಂಬ ವ್ಯಕ್ತಿ ಪತ್ನಿಗೆ ಮೊಣಕಾಲಿನ ಸ್ಕ್ಯಾನ್ ಮಾಡಿಸಲು ಆಸ್ಪತ್ರೆಗೆ ಕರೆತಂದಿದ್ದರು. ಅವರನ್ನು ಕೂಡ ಅದೇ ಕೋಣೆಯಲ್ಲಿ ಕೂರಿಸಿದ್ದರು. ಇನ್ನೇನು ಪತ್ನಿ ಯಂತ್ರದಿಂದ ಹೊರಬರಬೇಕು ಎನ್ನುವ ಸಮಯದಲ್ಲಿ ಅವರಿಗೆ ಸಹಾಯ ಮಾಡಲೆಂದು ಪತಿಯನ್ನು ಯಂತ್ರದ ಬಳಿ ಕರೆದಿದ್ದರು. ಕೂಡಲೇ ಇದ್ದಕ್ಕಿದ್ದಂತೆ ಯಂತ್ರ ಕೀತ್ ಅವರನ್ನು ಒಳಗೆ ಎಳೆದುಕೊಂಡಿತ್ತು. ಅದಕ್ಕೆ ಮುಖ್ಯ ಕಾರಣವೆಂದರೆ ಅವರ ಕುತ್ತಿಗೆಯಲ್ಲಿದ್ದ 9 ಕೆಜಿ ತೂಕದ ಚೈನ್!

ಸಾಮಾನ್ಯವಾಗಿ ಎಂಆರ್ಐ ಸ್ ಸ್ಕ್ಯಾನ್ ಮಾಡುವಾಗ ಯಾವುದೇ ಬಗೆಯ ಆಭರಣಗಳನ್ನು ಧರಿಸಬೇಡಿ ಎಂಬುದು ಇದೇ ಕಾರಣಕ್ಕೆ. ಯಂತ್ರದಲ್ಲಿರುವ ಮ್ಯಾಗ್ನೆಟ್ ಈ ವ್ಯಕ್ತಿಯನ್ನು ಎಳೆದಿದೆ. ಅಲ್ಲಿದ್ದವರು ಎಷ್ಟೆ ಪ್ರಯತ್ನಿಸಿದರೂ ಏನೂ ಮಾಡಲು ಸಾಧ್ಯವಾಗಲಿಲ್ಲ.

ಇದೀಗ ಮೃತರ ಪತ್ನಿ, ತಂತ್ರಜ್ಞರು ತಮ್ಮ ಪತಿಯ ಕುತ್ತಿಗೆಯಲ್ಲಿ ಚೈನ್ ನೋಡಿಯೂ ಕೋಣೆಗೆ ಪ್ರವೇಶಿಸಲು ಹೇಗೆ ಅವಕಾಶ ಕೊಟ್ಟರು ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Accident: ನಿಯಂತ್ರಣ ಕಳೆದುಕೊಂಡು ಬರೆಗೆ ಒರಗುತ್ತಿದೆ ಕೆಎಸ್ಆರ್ಟಿಸಿ ಬಸ್‌ಗಳು – ವಾಹನ ಚಾಲಕರು ಜಾಗರೂಕತೆಯಿಂದ ವಾಹನ ಚಲಾಯಿಸಿ

Comments are closed.