ED Summons: ಪ್ರಕಾಶ್ ರಾಜ್, ದೇವರಕೊಂಡ ಸೇರಿ 4 ಜನಕ್ಕೆ ಇಡಿ ಸಮನ್ಸ್

ED Summons: ಆಪ್‌ಗಳ ಮೂಲಕ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜು ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ನಟರಾದ ಪ್ರಕಾಶ್ ರಾಜ್, ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಲಕ್ಷ್ಮಿ ಮಂಚು ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

ಜಂಗ್ಲಿ, ರಮ್ಮಿ, ಜೀತ್‌ವಿನ್‌ಗಳಂತಹ ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳನ್ನು ಪ್ರಚಾರ ಮಾಡಿರುವ ಕಾರಣ ಒಟ್ಟು 21 ಜನರ ವಿರುದ್ಧ ಇತ್ತೀಚೆಗೆ ಜಾರಿ ನಿರ್ದೇಶನಾಲಯ ಆರೋಪ ಪಟ್ಟಿ ದಾಖಲು ಮಾಡಿತ್ತು. ಇದರ ಬೆನ್ನಲ್ಲೇ ನಾಲ್ವರಿಗೂ ಬೇರೆ ಬೇರೆ ದಿನ ವಿಚಾರಣೆಗೆ ಬರಲು ಸೂಚನೆ ನೀಡಿದೆ. ನಟರ ಹೇಳಿಕೆಗಳನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ದಾಖಲು ಮಾಡಲಾಗುವುದು.
Comments are closed.