Puttur: ಪುತ್ತೂರು: ಆನೆ ದಾಳಿಯಿಂದ ಮಹಿಳೆ ಮೃತಪಟ್ಟ ಪ್ರಕರಣ: ಅರಣ್ಯ ಇಲಾಖೆಯಿಂದ 20 ಲಕ್ಷ ರೂ. ಪರಿಹಾರ!

Share the Article

Puttur: ಎ.29 ರಂದು ಕೊಳ್ತಿಗೆ ಗ್ರಾಮದ ಕಣಿಯಾರ್ ಎಂಬಲ್ಲಿ ಆನೆ ದಾಳಿಯಿಂದ ಮೃತಪಟ್ಟಿದ್ದ ಕಾರ್ಮಿಕೆ ಸೆಲ್ಲಮ್ಮ ಅವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 20 ಲಕ್ಷ ಪರಿಹಾರ ಮಂಜೂರಾಗಿದೆ.

ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ವೇಳೆ ದಿಡೀರನೆ ಕಾಡಿನ ಕಡೆಯಿಂದ ಬಂದ ಆನೆ ಸೆಲ್ಲಮ್ಮ ಅವರ ಮೇಲೆ ದಾಳಿ ನಡೆಸಿ ಅವರನ್ನು ಕೊಂದು ಹಾಕಿತ್ತು. ಇದೀಗ ಮೃತ ಸೆಲ್ಲಮ್ಮ ಅವರ ಕುಟುಂಬಕ್ಕೆ ಶಾಸಕ ಅಶೋಕ್‌ ರೈ ಅವರ ಶಿಫಾರಸ್ಸಿನಂತೆ 20 ಲಕ್ಷ ಪರಿಹಾರ ಮಂಜೂರಾಗಿದೆ. ಮಂಜೂರಾತಿ ಪತ್ರವನ್ನು ಅವರ ಪುತ್ರ ಯೋಗೀಶ್ವರ ಅವರಿಗೆ ಶಾಸಕರು ಹಸ್ತಾಂತರಿಸಿದರು. ಈ ವೇಳೆ ವಲಯ ಅರಣ್ಯಾಧಿಕಾರಿ ಕಿರಣ್‌ ಬಿ ಎಂ ಉಪಸ್ಥಿತರಿದ್ದರು.

ಇದನ್ನೂ ಓದಿ: Drink Water: ಹೆಚ್ಚು ನೀರು ಕುಡಿಯುವುದು ಅಪಾಯಕಾರಿ! ಯಾಕೆ ಗೊತ್ತಾ?

Comments are closed.