MP: ‘ನೇಹಾ’ ಆದವಳು ‘ಅಬ್ದುಲ್’ ಆದ – 8 ವರ್ಷ ಮಂಗಳಮುಖಿಯಾಗಿದ್ದು, ಈಗ ಪುರುಷನಾದ ಬಾಂಗ್ಲಾ ಪ್ರಜೆ ಅರೆಸ್ಟ್!!

Share the Article

MP: ದೇಶದಲ್ಲಿ ಅಕ್ರಮ ವಲಸಿಗರನ್ನು ಹೊರ ಹಾಕಲು ಹಲವು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು ಈ ವೇಳೆ ಒಂದು ಆಘಾತಕಾರಿ ವಿಚಾರ ಬಹಿರಂಗವಾಗಿದೆ. ಅದೇನೆಂದರೆ ಭೋಪಾಲ್ ಪೊಲೀಸರ ಕಾರ್ಯಾಚರಣೆ ವೇಳೆ ಎಂಟು ವರ್ಷಗಳಿಂದ ‘ನೇಹಾ’ ಎಂಬ ನಕಲಿ ಗುರುತಿನಡಿ ನಗರದಲ್ಲಿ ವಾಸಿಸುತ್ತಿದ್ದ ಬಾಂಗ್ಲಾ ಪ್ರಜೆ ಅಬ್ದುಲ್ ಕಲಾಂ ಎಂಬವರನ್ನು ಬಂಧಿಸಿದ್ದಾರೆ.

ಹೌದು, ಬಾಂಗ್ಲಾದೇಶಿ ಪ್ರಜೆ ಅಬ್ದುಲ್ ಕಲಾಂ ಎಂಬಾತ ಕಳೆದ ಎಂಟು ವರ್ಷಗಳಿಂದ ನೇಹಾ ಎಂಬ ಸುಳ್ಳು ಗುರುತಿನ ಹೆಸರಿನಲ್ಲಿ ಭೋಪಾಲ್‌ನ ಬುಧ್ವಾರಾ ಪ್ರದೇಶದಲ್ಲಿ ವಾಸಿಸುತ್ತಿದ್ದ. ಸದ್ಯ ಪೊಲೀಸರು ಆತನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ತನ್ನ 10ನೇ ವಯಸ್ಸಿನಲ್ಲಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಅಬ್ದುಲ್, ಭೋಪಾಲ್‌ನ ಬುಧ್ವಾರಾ ಪ್ರದೇಶದಲ್ಲಿ ನೆಲೆಸುವ ಮೊದಲು ಮುಂಬೈನಲ್ಲಿ ಎರಡು ದಶಕಗಳನ್ನು ಕಳೆದಿದ್ದ. ಟ್ರಾನ್ಸ್‌ಜೆಂಡರ್ ಗುರುತನ್ನು ಪಡೆದುಕೊಂಡು ಸ್ಥಳೀಯ ಹಿಜ್ರಾ ಸಮುದಾಯದ ಸಕ್ರಿಯ ಸದಸ್ಯನಾಗಿದ್ದ ಎಂದು ಆರೋಪಿಸಲಾಗಿದೆ.

ಸ್ಥಳೀಯ ಏಜೆಂಟರ ಸಹಾಯದಿಂದ ನಕಲಿ ದಾಖಲೆಗಳನ್ನು ಬಳಸಿಕೊಂಡು ಅವರು ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಪಾಸ್‌ಪೋರ್ಟ್ ಸೇರಿದಂತೆ ನಿರ್ಣಾಯಕ ದಾಖಲೆಗಳನ್ನು ಪಡೆದಿದ್ದ. ಬುಧ್ವಾರಾ ಪ್ರದೇಶದಲ್ಲಿ ಹಲವು ಬಾರಿ ಮನೆಗಳನ್ನು ಬದಲಾಯಿಸಿದ್ದು, ಎಲ್ಲರಿಗೂ “ನೇಹಾ” ಎಂದು ಪರಿಚಿತರಾಗಿದ್ದ. ಜೈವಿಕವಾಗಿ ಟ್ರಾನ್ಸ್‌ಜೆಂಡರ್ ಆಗಿದ್ದಾನೇಯೇ ಅಥವಾ ಗುರುತು ಪತ್ತೆಹಚ್ಚುವಿಕೆಯನ್ನು ತಪ್ಪಿಸಲು ಆ ಮಾರ್ಗ ಬಳಸಿದ್ದಾನೆಯೇ ಎಂದು ನಿರ್ಧರಿಸಲು ಲಿಂಗವನ್ನು ವೈದ್ಯಕೀಯವಾಗಿ ಪರಿಶೀಲಿಸಲಾಗುತ್ತಿದೆ.

‘ನಕಲಿ ಗುರುತಿನ ಚೀಟಿಯನ್ನು ಬಳಸಿಕೊಂಡು ಭಾರತದಲ್ಲಿ ನೆಲೆಸಿದ್ದಲ್ಲದೇ, ನಕಲಿ ಪಾಸ್‌ಪೋರ್ಟ್‌ ಅನ್ನು ಬಳಸಿಕೊಂಡು ವಿದೇಶಕ್ಕೂ ಪ್ರಯಾಣ ಮಾಡಿದ್ದಾರೆ. ಬುಧ್ವಾರಾದಲ್ಲಿ ಹಲವು ಮನೆಗಳನ್ನು ಬದಲಾಯಿಸಿರುವ ಈತ, ನೇಹಾ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದನು. ಗುರುತನ್ನು ಮರೆಮಾಚಲು ಮಂಗಳಮುಖಿಯಾಗಿ ವೇಷ ಮರೆಸಿಕೊಂಡಿದ್ದಾನಾ? ಅಥವಾ ಜೈವಿಕವಾಗಿ ಲಿಂಗತ್ವ ಅಲ್ಪಸಂಖ್ಯಾತನಾ? ಎಂಬ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ತಿಳಿಸಿದ್ದಾರೆ.

ಇದನ್ನೂ ಓದಿ: Dharmasthala case: ನನಗೆ ಒಂದು ಅನುಮಾನ – ಒಬ್ಬ ಮುಸ್ಲಿಂ ಹುಡುಗ ಪ್ರತಿದಿನ ಧರ್ಮಸ್ಥಳ ಬಗ್ಗೆ ಅಪ್ಲೋಡ್ ಮಾಡ್ತಿದ್ದಾನೆ – ಈ ವಿಚಾರದಲ್ಲಿ ಕೇರಳಕ್ಕೆ ಯಾಕೆ ಇಷ್ಟೊಂದು ಮುತುವರ್ಜಿ – ಆರ್ ಅಶೋಕ್

Comments are closed.