Reels: ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಸ್ಪರ್ಧೆ: ರೀಲ್ಸ್ ಮಾಡಿ 15,000 ರೂ ಬಹುಮಾನ ಗೆಲ್ಲಿ!

Share the Article

Reels: ಡಿಜಿಟಲ್ ಇಂಡಿಯಾ 10 ವರ್ಷ ಪೂರ್ತಿಯಾಗೋ ಸಂಭ್ರಮದಲ್ಲಿ ಸರ್ಕಾರ ‘ರೀಲ್ ಸ್ಪರ್ಧೆ ಘೋಷಿಸಿದೆ. ಬರೋಬ್ಬರಿ 15,000 ರೂಪಾಯಿ ನಗದು ಬಹುಮಾನ ಘೋಷಿಸಲಾಗಿದೆ.

ಜುಲೈ 1 ರಿಂದ ಆಗಸ್ಟ್ 1 ರವರೆಗೆ ಸ್ಪರ್ಧೆ ನಡೆಯಲಿದೆ. ನಿಮ್ಮ ಡಿಜಿಟಲ್ ಅನುಭವಗಳನ್ನ ವೀಡಿಯೋ ಮಾಡಿ ಹಂಚಿಕೊಳ್ಳಿ, ಬಹುಮಾನ ಗೆಲ್ಲಿ.

ಕಾಂಟೆಸ್ಟ್‌ನಲ್ಲಿ ಭಾಗವಹಿಸಲು ಒಂದು ನಿಮಿಷದ ರೀಲ್ ಮಾಡಿ https://innovateindia.mygov.in ಅಲ್ಲಿ ಅಪ್ಲೋಡ್ ಮಾಡಿ. MP4, ಪೋರ್ಟ್ರೇಟ್ ಮೋಡ್‌ನಲ್ಲಿರಬೇಕು. ಹೊಸದಾಗಿ ಮಾಡಿದ ರೀಲ್ ಆಗಿರಬೇಕು. ಕೆಲ ಮಾರ್ಗಸೂಚಿಗಳನ್ನು ಪಾಲಿಸಬೇಕು.

ಡಿಜಿಟಲ್ ಇಂಡಿಯಾ ನಿಮ್ಮ ಮೇಲೆ ಯಾವ ರೀತಿ ಪ್ರಭಾವ ಬೀರಿದೆ, BHIM UPI, UMANG, DigiLocker, eHospital ಬಳಕೆ ಹೇಗೆ ಮಾಡಿದ್ರಿ ಅಂತ ರೀಲ್ ಮಾಡಿ. ವಿಷಯ ಹಾಗೂ ಅದಕ್ಕೆ ತಕ್ಕ ರೀಲ್ಸ್ ಆಗಿರಬೇಕು. ಇದರಲ್ಲಿ ಉತ್ತಮ ರೀಲ್ಸ್‌ಗೆ ಬಹುಮಾನ ಘೋಷಿಸಲಾಗುತ್ತೆದೆ.

ಮೊದಲ ಬಹುಮಾನ 15,000 ರೂಪಾಯಿ ಅಂದರ ಒಬ್ಬರಿಗಲ್ಲ, ಟಾಪ್ 10 ಜನಕ್ಕೆ 15,000 ರೂ., ಮುಂದಿನ 25 ಜನಕ್ಕೆ 10,000 ರೂ., 50 ಜನಕ್ಕೆ 5,000 ರೂ. ಬಹುಮಾನ ನೀಡಲಾಗುತ್ತೆ.

ಆಗಸ್ಟ್ 1, 2025 ಕೊನೆಯ ದಿನಾಂಕ. ಬೇಗ ರೀಲ್ ಮಾಡಿ ಅಪ್ಲೋಡ್ ಮಾಡಿ.ಗ್ರಾಮೀಣ ಶುಚಿತ್ವದ ಬಗ್ಗೆ ರೀಲ್ ಮಾಡಿ https://www.mygov.in/ ಅಲ್ಲಿ ಅಪ್ಲೋಡ್ ಮಾಡಿ. ಜುಲೈ 31, 2025 ಕೊನೆಯ ದಿನಾಂಕ.

Comments are closed.