Dharmasthla Burials Case: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್ ಪ್ರಕರಣ: ಪರಮೇಶ್ವರ್ ಹೇಳಿದ್ದೇನು?

Dharmasthala Burials Case: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಮಾತ್ರ ವಿಶೇಷ ತನಿಖಾ ತಂಡ ತನಿಖೆ ಮಾಡುತ್ತದೆ. ಸೌಜನ್ಯ ಪ್ರಕರಣದ ತನಿಖೆ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸುದ್ದಿಗಾರರೊಂದಿಗೆ ಹೇಳಿದ್ದಾರೆ.

ಎಸ್‌ಐಟಿ ಅವರು ಕೆಲಸ ಪ್ರಾರಂಭ ಮಾಡ್ತಾರೆ. ಒತ್ತಡದ ಪ್ರಶ್ನೆ ಇಲ್ಲ. ಒತ್ತಡಕ್ಕೆ ಮಣಿದು ಮಾಡುವ ಕೆಲಸ ಅಲ್ಲ. ಅಲ್ಲಿನ ಸಾಧಕ ಬಾಧಕ ವಸ್ತು ಸ್ಥಿತಿ ನೋಡಿ ತೀರ್ಮಾನ ಮಾಡಬೇಕಾಗುತ್ತದೆ. ನಾವು ಪ್ರಾಥಮಿಕವಾಗಿ ತನಿಖೆ ಮಾಡಿ ಸ್ಟೇಷನ್ ಮಟ್ಟದಲ್ಲಿ ಅಂತ ಅವರಿಗೆ ಹೇಳಿದ್ದೆವು. ಜೊತೆಗೆ ಇನ್ನೂ ಹೆಚ್ಚಿನ ರೀತಿಯ ತನಿಖೆ ಆಗಬೇಕು ಎಂಬುದು ಹೆಚ್ಚಿನ ರೀತಿಯ ಅಭಿಪ್ರಾಯಗಳು ಸರ್ಕಾರ ಇದರಲ್ಲಿ ಮುಚ್ಚಿ ಇಡುವಂತದ್ದು ಏನೂ ಇಲ್ಲ ಎಂದಿದ್ದಾರೆ.
ಸ್ವಲ್ಪ ಯೋಚನೆ ಮಾಡಿ ನಾವು ತೀರ್ಮಾನ ಕೈಗೊಂಡಿದ್ದೇವೆ. ತನಿಖೆಯಲ್ಲಿ ಏನು ಬರುತ್ತದೆ ಅದನ್ನು ಕಾದು ನೋಡೋಣ. ಇದು ಸಣ್ಣ ವಿಚಾರ ಅಂತ ನಾವು ಪರಿಗಣಿಸಿಲ್ಲ ಸ್ಟೇಷನ್ ಮಟ್ಟದಲ್ಲಿ ಅವರು ಕಂಪ್ಲೆಂಟ್ ಕೊಟ್ಟಾಗ ಎಫ್‌ಐಆರ್ ಹಾಕಿ ಅವರು ತನಿಖೆ ಮಾಡ್ತಾರೆ. ಅದು ಹೆಚ್ಚು ಹೆಚ್ಚು ಬೆಳೆದಾಗ ತನಿಖೆ ತೀವ್ರತೆಯನ್ನು ಪಡೆಯುತ್ತೆ. ಹಾಗಾಗಿ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಎಸ್‌ಐಟಿ ರಚನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
Comments are closed.