Home News SIT: ಧರ್ಮಸ್ಥಳ ಅಪರಾಧ ಕೃತ್ಯಗಳ ತನಿಖೆಗೆ SIT ರಚಿಸಿ ಸರ್ಕಾರ ಆದೇಶ – ಹೋರಾಟಗಾರರ ಬೇಡಿಕೆಯಂತೆ...

SIT: ಧರ್ಮಸ್ಥಳ ಅಪರಾಧ ಕೃತ್ಯಗಳ ತನಿಖೆಗೆ SIT ರಚಿಸಿ ಸರ್ಕಾರ ಆದೇಶ – ಹೋರಾಟಗಾರರ ಬೇಡಿಕೆಯಂತೆ ರಚನೆಯಾದ ತಂಡ!!

Hindu neighbor gifts plot of land

Hindu neighbour gifts land to Muslim journalist

SIT: ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳ ಅಪರಾಧ ಪ್ರಕರಣಗಳ ಕುರಿತು ತನಿಖೆ ನಡೆಸಲು ಕೊನೆಗೂ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿ ಆದೇಶ ಹೊರಡಿಸಿದೆ.

ಹೌದು, ಐಪಿಎಸ್ ಆಫೀಸರ್ ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರವು ಎಸ್ಐಟಿ ರಚನೆ ಮಾಡಿದೆ. ಜೊತೆಗೆ ಅಧಿಕಾರಿಗಳಾದ ಅನುಚೇತ್, ಸೌಮ್ಯಲತ, ಚಿತೆಂದ್ರಕುಮರ್ ಅವರನ್ನು ಒಳಗೊಂಡ ನಾಲ್ಕು ಜನರ ತಂಡ ಇದಾಗಿದೆ.  ಹೋರಾಟಗಾರರ ಬೇಡಿಕೆಯಂತೆಯೇ, ಅವರು ಸೂಚಿಸಿದ ಅಧಿಕಾರಿಯ ನೇತೃತ್ವದಲ್ಲಿಯೇ ಈ ತಂಡವನ್ನು ಸರ್ಕಾರ ರಚಿಸಿದೆ ಎನ್ನಲಾಗಿದೆ.

ಅಂದಹಾಗೆ ಕೆಲವು ದಿನಗಳ ಹಿಂದೆ ವಕೀಲರ ನಿಯೋಗ ಸಿಎಂ ನಿವಾಸ ‘ಕಾವೇರಿ’ಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗವು ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಅತ್ಯಾಚಾರ ಮತ್ತು ಕೊಲೆಗಳಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ತನಿಖೆ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಯಬೇಕು. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹಲವು ಅತ್ಯಾಚಾರ, ಕೊಲೆ,ಶವಗಳನ್ನು ಹೂತಿಟ್ಟ ಆರೋಪಗಳು ಕೇಳಿಬರುತ್ತಿರುವ ಪ್ರಕರಣಗಳಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ತ್ವರಿತ ತನಿಖೆಯನ್ನು ನಡೆಸಬೇಕಾಗಿ,ಆ ಮೂಲಕ ಈ ಎಲ್ಲಾ ಆರೋಪಗಳ ಅಸಲಿಯತ್ತು,ಸತ್ಯಾಸತ್ಯತೆ ಏನು ಎಂಬುದನ್ನು ರಾಜ್ಯದ ಜನರ ಮುಂದಿಡಬೇಕಾಗಿ ಮನವಿ ಮಾಡಿತ್ತು. ಈ ಮನವಿಯನ್ನು ಪುರಸ್ಕರಿಸಿರುವ ಸರ್ಕಾರ ಇದೀಗ ಎಸ್ಐಟಿ ರಚನೆ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ದ.ಕ ಜಿಲ್ಲಾ‌ ಎಸ್.ಪಿ, ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಿ ರಾಜ್ಯ ಸರ್ಕಾರವು ಅದೇಶಿಸಿರುತ್ತದೆ. ಶೀಘ್ರದಲ್ಲೇ ವಿಶೇಷ ತನಿಖಾ ತಂಡವು ಪ್ರಕರಣವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.