Home News Hotel Menu: ಇದೆಂಥ ಹೋಟೆಲ್ ಮೆನು ಮಾರಾಯ್ರೆ? ಕನ್ನಡದೋರು ಹೋದ್ರೆ ತಿನ್ಬೇಕೋ, ಬೇಡ್ವೋ !?

Hotel Menu: ಇದೆಂಥ ಹೋಟೆಲ್ ಮೆನು ಮಾರಾಯ್ರೆ? ಕನ್ನಡದೋರು ಹೋದ್ರೆ ತಿನ್ಬೇಕೋ, ಬೇಡ್ವೋ !?

Hindu neighbor gifts plot of land

Hindu neighbour gifts land to Muslim journalist

Hotel Menu: ಹೋಟೆಲ್ ಗೆ ಹೋದ ತಕ್ಷಣ ಎಲ್ಲರೂ ಇಂದು ನೋಡುವುದೇ ಅಲ್ಲಿ ಟೇಬಲ್ ಮೇಲೆ ಇರುವ ಮೆನು. ಅದರಲ್ಲಿರುವ ಬಗೆ ಬಗೆಯ ಪಕ್ಷಗಳನ್ನು ಕಂಡಾಗ ಯಾವುದನ್ನು ತಿನ್ನಬೇಕು ಯಾವುದನ್ನು ಬಿಡಬೇಕು ಎಂದು ತಿಳಿಯದು. ಆದರೆ ಇಲ್ಲೊಂದು ಹೋಟೆಲ್ ಮೆನು ನೋಡಿದ್ರೆ, ಅದರಲ್ಲೂ ಕನ್ನಡಿಗರು ಈ ಹೋಟೆಲ್ ಗೆ ಹೋದ್ರೆ ತಿನ್ಬೇಕೋ, ಬೇಡ್ವೋ ಎಂದು ಯೋಚಿಸಿ ಕೂರಬೇಕಾಗುತ್ತದೆ.

ಯಾಕೆಂದ್ರೆ ಇತ್ತೀಚೆಗೆ ಒಂದು ಹೋಟೆಲ್‌ನ ಮೆನು ಬೋರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಮೆನು ವಿಶೇಷವಾಗಿರುವುದು ಆಹಾರಕ್ಕಾಗಿ ಅಲ್ಲ, ಬದಲಾಗಿ ಉಪಯೋಗಿಸಿದ ತಪ್ಪು ಕನ್ನಡ ಪದಗಳಿಂದ. ಒಂದಲ್ಲ, ಎರಡಲ್ಲ, ಅಲ್ಲಿರುವ ಎಲ್ಲಾ ಪದಗಳನ್ನು ತಪ್ಪಾಗಿ ಉಚ್ಛರಿಸಿದ್ದು, ಕನ್ನಡ ಬರೆಯುವ ವಿಧಾನದಲ್ಲೂ ಅಪಾರ ದೋಷಗಳು ಕಂಡುಬಂದಿವೆ. ಅದನ್ನು ನೋಡಿದ ನಂತ್ರ ನೀವು ತಿನ್ನಬೇಕೋ ಬೇಡ್ವೋ ಎಂದು ಸಾವಿರ ಬಾರಿ ಯೋಚಿಸುತ್ತೀರಿ.

ಮೆನುವಿನಲ್ಲಿ ಏನೆಲ್ಲ ಬರೆಯಲಾಗಿದೆ?
ಕುಚ್ಚಾ, ಪನೀರ್‌ ತಿಕಾ, ಹಣಬೆ ತಿಕಾ, ತಂದೂರಿ ಚಕ್ಕನ್‌, ಫಿಶ್‌ ತಿಕಾ, ದೌಲಾ ಮಕ್ಕನಿ, ಬಟರೌ ಚಿಕ್ಕನ್, ಮಟನ್, ಕೂಲಾ ಡಿಕ್ಸ್‌, ಹಲವ ಎಂದು ಕನ್ನಡದಲ್ಲಿ ಬರೆಯಲಾಗಿದೆ.

ಸದ್ಯ ವೈರಲ್‌ ಆಗುತ್ತಿರುವ ಈ ಪೋಸ್ಟ್‌ಗೆ Eat well and Drink well! Stay ಹೆಲ್thy ಎಂಬ ಶೀರ್ಷಿಕೆ ಕೊಡಲಾಗಿದ್ದು, ಬೋರ್ಡ್ ನೋಡಿದ ನಂತರ ನಿಮಗೆ ನಗಬೇಕೋ ಅಥವಾ ಈತನಿಗೆ ಕನ್ನಡ ಬರುತ್ತೋ ಅಥವಾ ಕಲಿಸಬೇಕೋ ಎಂದು ಗೊಂದಲವುಂಟಾಗುವುದು ಗ್ಯಾರಂಟಿ.