Raichur: ಸೇತುವೆಯಿಂದ ಪತಿ ನದಿಗೆ ತಳ್ಳಿ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್: ಪತ್ನಿ ಅಪ್ರಾಪ್ತೆ, ಕೇಸು ದಾಖಲಿಸಲು ಸಿದ್ಧತೆ

Raichur: ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಸೇತುವೆ ಮೇಲಿಂದ ಪತಿಯನ್ನು ನದಿಗೆ ತಳ್ಳಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೊಸ ಮಾಹಿತಿಯೊಂದು ವರದಿಯಾಗಿದೆ.

ಗಂಡ ತಾತಪ್ಪ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿರುವುದು ಬೆಳಕಿಗೆ ಬಂದಿದೆ. ಪತ್ನಿ ವಯಸ್ಸಿನ ದಾಖಲಾತಿ ನೀಡುವಂತೆ ಪತಿ ತಾತಪ್ಪ ಅವರಿಗೆ ಡೆಡ್ಲೈನ್ ನೀಡಿದೆ. ಇಲ್ಲದಿದ್ದರೆ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪತಿ ತಾತಪ್ಪ ಮತ್ತು ಅವರ ಮದುವೆ ಸಮಾರಂಭದಲ್ಲಿ ಭಾಗಿಯಾಗಿರುವ ಪ್ರಮುಖರ ವಿರುದ್ಧ ಕೇಸು ದಾಖಲು ಮಾಡಲಾಗುವುದು.
ಶಾಲಾ ದಾಖಲಾತಿಯ ಪ್ರಕಾರ ತಾತಪ್ಪನ ಪತ್ನಿ ಅಪ್ರಾಪ್ತೆ ಎನ್ನುವುದು ದೃಢಪಟ್ಟಿದೆ. 15 ವರ್ಷ 8 ತಿಂಗಳ ವಯಸ್ಸಿನ ಅಪ್ರಾಪ್ತ ಬಾಲಕಿ ಎನ್ನುವುದು ತಿಳಿದು ಬಂದಿದೆ. ಯಾದಗಿರಿ ಜಿಲ್ಲಾ ಮಹಿಳಾ ರಕ್ಷಣಾಧಿಕಾರಿಗಳ ತಂಡದಿಂದ ಇದನ್ನು ಪತ್ತೆ ಮಾಡಲಾಗಿದೆ. ಹಾಗೂ ಈ ಕುರಿತು ಕ್ರಮ ಕೈಗೊಳ್ಳಲು ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಪತ್ರ ಬರೆಯಲಾಗಿದೆ.
ಪತ್ರ ಬರುತ್ತಿದ್ದಂತೆ ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ರಾಯಚೂರು ತಾಲೂಕಿನ ದೇವಸೂಗೂರು ನಿವಾಸಿಯಾಗಿರುವ ಪತಿ ತಾತಪ್ಪ ಮನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿರುವ ಕುರಿತು ವರದಿಯಾಗಿದೆ.
ತಾತಪ್ಪ ಕುಟುಂಬದ ಪ್ರಮುಖರಿಂದ ಮಾಹಿತಿ ಸಂಗ್ರಹ ಮಾಡಲಾಗಿದ್ದು, ಈ ಕುರಿತು ಯಾವುದೇ ದಾಖಲೆ ನೀಡದೆ ಮೌಖಿಕ ಮಾಹಿತಿ ನೀಡಲಾಗಿದೆ. ದಾಖಲೆ ನೀಡಲು ತಾತಪ್ಪ ಕುಟುಂಬದವರು ಎರಡು ದಿನ ಕಾಲಾವಕಾಶ ಕೇಳಿಕೊಂಡಿದ್ದಾರೆ.
Comments are closed.