Tiger Combing: ಹುಲಿ ದಾಳಿಗೆ ಬೇಸತ್ತ ಗ್ರಾಮಸ್ಥರು – ವ್ಯಾಘ್ರನ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ಆರಂಭ

Share the Article

Tiger Combing: ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಜಾನುವಾರ ಹಂತಕ ಹುಲಿಯ ಸೆರೆಗೆ ಬೆಳ್ಳೂರು ಪ್ರಾಥಮಿಕ ಶಾಲಾ ಆವರಣದಿಂದ ಕೂಂಬಿಂಗ್ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಮತ್ತಿಗೂಡು ಹಾಗೂ ಬೆಳ್ಳ ಆನೆ ಶಿಬಿರದ ಮಹಿಂದ್ರ ಹಾಗೂ ಭೀಮ ಆನೆ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ. ಕಾರ್ಯಾಚರಣೆಗೂ ಮುನ್ನ ತಂಡ ಆನೆಗಳಿಗೆ ಪೂಜೆ ಸಲ್ಲಿಸಿ ಕಾರ್ಯದ ಯಶಸ್ಸಿಗೆ ಪ್ರಾರ್ಥಿಸಿದರು.

ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಜಗನಾಥ್ ಅವರು ಮಾತನಾಡಿ, ಹುಲಿ ಸೆರೆ ಕಾರ್ಯಾಚರಣೆಗೆ 2 ಆನೆಗಳ ಸಹಿತ ನುರಿತ ಅರಣ್ಯ ಇಲಾಖೆ ಸಿಬ್ಬಂದಿಗಳ ತಂಡ ಸನ್ನದ್ಧವಾಗಿದೆ. ಹಲವಾರು ದಿನಗಳಿಂದ ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಹುಲಿಯನ್ನು ನ್ಯಾಷನಲ್ ಟೈಗರ್ ಕನ್ಸರ್ವೇಷನ್ ಅಥಾರಿಟಿ ಪ್ರಕಾರ ಗುರುತಿಸಲಾಗಿದೆ. ಮಾವುತರು, ಕಾವಾಡಿಗರು ಮತ್ತು ಈ ಭಾಗದ ಪ್ರತಿಯೊಂದು ಸ್ಥಳದ ಬಗ್ಗೆ ಅರಿವಿರುವ ಅರಣ್ಯ ಸಿಬ್ಬಂದಿ, ವಲಯ ಅರಣ್ಯ ಅಧಿಕಾರಿಗಳು, ಸಹಾಯಕ ಸಂರಕ್ಷಣಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ತಂಡದಲ್ಲಿ ಪಶು ವೈದ್ಯಾಧಿಕಾರಿ ಡಾಕ್ಟರ್ ರಮೇಶ್ ಮತ್ತು ಮಾದಪ್ಪ ಹಾಗೂ ಶಾರ್ಪ್ ಶೂಟರ್ ರಂಜನ್ ಸೇರಿದಂತೆ 75 ಮಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಗನಾಥ್ ಮಾಹಿತಿ ನೀಡಿದರು. ಸುತ್ತಮುತ್ತಲಿನ ನಾಗರೀಕರು ಹುಲಿ ಕಂಡು ಬಂದಲ್ಲಿ ಈ ಬಗ್ಗೆ ಮಾಹಿತಿಯನ್ನು ತಂಡದೊಂದಿಗೆ ಹಂಚಿಕೊಳ್ಳಿ. ಆ ಮೂಲಕ ಹುಲಿಯನ್ನು ಆದಷ್ಟು ಬೇಗ ಸೆರೆ ಹಿಡಿದು ಸ್ಥಳಾಂತರಿಸಲು ಸಹಾಯವಾಘುತ್ತದೆ ಎಂದು ಅವರು ಮನವಿ ಮಾಡಿದರು.

ಇತ್ತೀಚಿಗೆ ಹುದಿಕೇರಿ ಹರಿಹರ,ಶೆಟ್ಟಿಗೇರಿ ಬೆಳ್ಳೂರು ಭಾಗದಲ್ಲಿ ಹುಲಿಯ ಉಪಟಳ ಹೆಚ್ಚಾಗಿದ್ದು ಇದರ ಸೆರೆಗಾಗಿ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ, ಡಿ ಸಿ ಎಫ್ ಜಗನ್ನಾಥ್, ಎ ಸಿ ಎಫ್ ಗೋಪಾಲ್, ಪೊನ್ನಂ ಪೇಟೆ ಅರಣ್ಯ ವಲಯ ಅಧಿಕಾರಿ ಬಿ.ಎಂ. ಶಂಕರ್, ರಂಜನ್, ಅರವಳಿಕೆ ತಜ್ಞರಾದ ರಮೇಶ್, ಮಾದಪ್ಪ, ಮಾವುತರಾದ ಗುಂಡಣ್ಣ ಮಲ್ಲಿಕಾರ್ಜುನ. ಚೆಕ್ಕೇರ ತಿಮ್ಮಯ್ಯ, ಉಪ ಅರಣ್ಯ ಪಾಲಕರಾದ ದಿವಾಕರ್,ನಾಗೇಶ್, ಶ್ರೀಧರ್ ಮತಿತರು ಹಾಗೂ ಇ ಟಿ ಎಫ್ ಎಸ್ ಟಿ ಎಫ್, ಆರ್ ಆರ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Anushree: ಅನುಶ್ರೀ ಮದುವೆಯಾಗುವ ಹುಡುಗ ಯಾರು? ಇವರ ಪರಿಚಯಕ್ಕೆ ಕಾರಣ ಪುನೀತ್

Comments are closed.