Elephant: ದೇವಾಲಯದ ಅಂಗಳಕ್ಕೆ ಕಾಡಾನೆ ಪ್ರವೇಶ – ಪಾಡಿ ಇಗ್ಗುತಪ್ಪ ಸನ್ನಿಧಿಯಲ್ಲಿ ಕಾಣಿಸಿಕೊಂಡ ಕಾಡಾನೆ

Share the Article

Elephant: ಕೊಡಗಿನಲ್ಲಿ ಕಳೆದ ಎರಡು ದಶಕಗಳಿಂದ ಕಾಡಾನೆಗಳನ್ನು ನೋಡಲು ಕಾಡಿಗೆ ಹೋಗುವ ಅವಶ್ಯಕತೆ ಇಲ್ಲ. ಕೊಡಗಿನ ಮೂಲೆ ಮೂಲೆಯಲ್ಲೂ ಕೂಡ ಕಾಫಿ ತೋಟಗಳಲ್ಲಿ, ಪಟ್ಟಣ ಪ್ರದೇಶದ ಸಮೀಪದ ಗದ್ದೆಯಲ್ಲಿ ಹೀಗೆ ಎಲ್ಲೆಂದರಲ್ಲಿ ಕಾಡಾನೆಗಳ ಹಿಂಡು ನಾಡಿನಲ್ಲಿ ಬೀಡುಬಿಟ್ಟಿವೆ. ರಾತ್ರಿ ಹೊತ್ತು ಮನೆಯ ಅಂಗಳದಲ್ಲೂ ಕೂಡ ಕೆಲವಡೆ ಕಾಣಸಿಗುತ್ತದೆ. ಇದೀಗ ಕಾಡಾನೆ ದೇವಾಲಯ ಅಂಗಳಕ್ಕೂ ಕೂಡ ಕಾಲಿಟ್ಟಿದೆ.

ಪಾಡಿ ಇಗ್ಗುತ್ತಪ್ಪ ಸನ್ನಿಧಿಗೆ ಆಗಮಿಸಿದ ಗಜರಾಜ

ಕೊಡಗಿನ ಕುಲದೈವ ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ರಾತ್ರಿ ವೇಳೆ ಒಂಟಿ ಸಲಗ ಕಾಣಿಸಿಕೊಂಡಿದೆ. ನಾಪೋಕ್ಲುವಿನ ಕಕ್ಕಬೆ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ, ಈ ನಡುವೆ ಆಹಾರ ಅರಸಿ ಬಂದ ಒಂಟಿ ಸಲಗ ದೇವಾಲಯದ ಮುಖ್ಯ ದ್ವಾರದ ಬಳಿ ಇರುವ ದೇವರಕಟ್ಟೆಯಲ್ಲಿನ ಹಲಸಿನ ಮರದಿಂದ ಕಾಯಿ ಬಿಳಿಸುವ ಯತ್ನ ನಡೆಸಿದ್ದು, ಈ ದೃಶ್ಯ ದೇವಾಲಯದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Weather Report: ಕರ್ನಾಟಕದ ಹವಾಮಾನ ವರದಿ: ಇಂದು ಕೂಡ ಮುಂದುವರೆದ ಮುಂಗಾರು ಆರ್ಭಟ – ಕೊಡಗು, ಕೇರಳದಲ್ಲಿ ಭಾರಿ ಮಳೆಯ ಮುನ್ಸೂಚನೆ

Comments are closed.