Instagram: ಇನ್ಸ್ಟಾ ರೀಲ್ಸ್ ನೋಡಲು ಪದೇ ಪದೇ ಸ್ವೈಪ್ ಮಾಡಬೇಕಿಲ್ಲ ಇನ್ಮುಂದೆ ಹೊಸ ಆಟೋ ಸ್ಕ್ರಾಲ್ ಫೀಚರ್ ಲಭ್ಯ!

Instagram: ಇನ್ಸ್ಟಾಗ್ರಾಂ (Instagram) ರೀಲ್ಸ್ ನೋಡುವಾಗ ಕೈಬೆರಳು ಪದೇ ಪದೇ ಸ್ವೈಪ್ ಮಾಡುತ್ತಲೇ ಇರಬೇಕು. ಮುಂದಿನ ರೀಲ್ಸ್ ನೋಡಲು ಸ್ವೈಪ್ ಮಾಡಲೇಬೇಕು. ಆದರೆ ಇನ್ಸ್ಟಾಗ್ರಾಂ ಇದೀಗ ಹೊಸ ಫೀಚರ್ಸ್ ಜಾರಿಗೆ ತರಲು ಮುಂದಾಗಿದೆ.

ಇನ್ಸ್ಟಾಗ್ರಾಂನಲ್ಲಿ ಎಷ್ಟು ರೀಲ್ಸ್ ನೋಡುತ್ತೀರೋ, ಅಷ್ಟು ಬಾರಿ ಸ್ವೈಪ್ ಮಾಡಬೇಕು. ಆದರೆ ಇನ್ಸ್ಟಾಗ್ರಾಂ ಶೀಘ್ರದಲ್ಲೇ ಆಟೋ ಸ್ಕ್ರಾಲ್ ಫೀಚರ್ ಜಾರಿಗೊಳಿಸುತ್ತಿದೆ. ಈ ಆಯ್ಕೆ ಕ್ಲಿಕ್ ಮಾಡಿದರೆ ಸಾಕು, ಮತ್ತೆ ರೀಲ್ಸ್ ನೋಡಲು ಪದೇ ಪದೇ ಸ್ವೈಪ್ ಮಾಡುವ ಅಗತ್ಯವಿಲ್ಲ. ಒಂದು ರೀಲ್ಸ್ ಪ್ಲೇ ಆದ ಬಳಿಕ ತನ್ನಷ್ಟಕ್ಕೆ ಮತ್ತೊಂದು ರೀಲ್ಸ್ ಪ್ಲೇ ಆಗಲಿದೆ. ಇದರಿಂದ ವೀಕ್ಷರು ಮೊಬೈಲ್ ಕೈಯಲ್ಲಿ ಹಿಡಿದುಕೊಳ್ಳಬೇಕಿಲ್ಲ.
Comments are closed.