Telugu Actor Fish Venkat: ತೆಲುಗು ಹಾಸ್ಯ ನಟ ಫಿಶ್‌ ವೆಂಕಟ್‌ ನಿಧನ

Share the Article

Telugu Actor Fish Venkat: ತೆಲುಗು ನಟ ಫಿಶ್ ವೆಂಕಟ್ ಮೂತ್ರಪಿಂಡ ಮತ್ತು ಯಕೃತ್ತು ವೈಫಲ್ಯದಿಂದ ಇಂದು ನಿಧನ ಹೊಂದಿದ್ದಾರೆ. ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು ಹೀಗಾಗಿ ಅವರನ್ನು ವೆಂಟಿಲೇಟರ್‌ನಲ್ಲಿ ಇಡಸಲಾಗಿತ್ತು. ಅವರ ನಿಧನದ ಸುದ್ದಿಯನ್ನು ಇಂದು ಸಂಜೆ ಸ್ಥಳೀಯ ತೆಲುಗು ಮಾಧ್ಯಮಗಳು ದೃಢಪಡಿಸಿವೆ. ವೆಂಕಟ್ ರಾಜ್ ಎಂಬ ಹೆಸರಿನಿಂದ ಕರೆಯಲ್ಪಡುವ ಫಿಶ್ ವೆಂಕಟ್ ಅವರ ಪತ್ನಿ ಮತ್ತು ಮೂವರು ಮಕ್ಕಳು ಅಗಲಿದ್ದಾರೆ.

1971 ರಲ್ಲಿ ಜನಿಸಿದ ಫಿಶ್ ವೆಂಕಟ್ ತಮ್ಮ ಹಾಸ್ಯ ಪಾತ್ರಗಳಿಗೆ ಜನಪ್ರಿಯರಾಗಿದ್ದರು. ಬನ್ನಿ, ಅಧರ್ಸ್ ಮತ್ತು ಧೀ ಮುಂತಾದ ಚಿತ್ರಗಳ ಮೂಲಕ ತೆಲುಗು ಚಲನಚಿತ್ರೋದ್ಯಮದಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿಕೊಂಡರು. ಈ ನಟ ಇತ್ತೀಚೆಗೆ ಕಾಫಿ ವಿತ್ ಎ ಕಿಲ್ಲರ್ ಎಂಬ ಥ್ರಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಂಡರು. ಕೊರೊನ ಸಮಯದಲ್ಲಿ, ಅವರು ಸಿದ್ಧು ಜೊನ್ನಲಗಡ್ಡ ಅವರೊಂದಿಗೆ ಮಾ ವಿಂತ ಗಾಧ ವಿನುಮಾ ಮತ್ತು ಡಿಜೆ ಟಿಲ್ಲು ಚಿತ್ರಗಳಲ್ಲಿ ನಟಿಸಿದರು.

Comments are closed.