Bengaluru. ರಾಜ್ಯ ಪ್ರತಿನಿಧಿಸುವ ಅಥ್ಲೀಟ್‌ಗಳ ಪ್ರವೇಶಕ್ಕೂ ಕಂಠೀರವ ಸ್ಟೇಡಿಯಂ ನಲ್ಲಿ ಶುಲ್ಕ!

Share the Article

Bengaluru: ಬೆಂಗಳೂರಿನಲ್ಲಿ (Bengaluru) ಅಥ್ಲೀಟ್‌ಗಳಿಗೆ ಎಲ್ಲಾ ಸೌಕರ್ಯ ಇರುವ ಏಕೈಕ ಸ್ಟೇಡಿಯಂ ಎಂದರೆ ಅದು ಕಂಠೀರವ ಸ್ಟೇಡಿಯಂ. ಆದರೆ, ಈಗ ಕಂಠೀರವ ಸ್ಟೇಡಿಯಂನಲ್ಲಿ ಅಥ್ಲೀಟ್‌ಗಳು ಅಭ್ಯಾಸ ಮಾಡಲು ಕೂಡ ಶುಲ್ಕ ಪಾವತಿ ಮಾಡಬೇಕಿದೆ. ಕೆಲ ವಾರಗಳ ಹಿಂದೆ ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ ಕಂಠೀರವ ಸ್ಟೇಡಿಯಂನಲ್ಲಿ ನೀರಜ್‌ ಚೋಪ್ರಾ ಕ್ಲಾಸಿಕ್‌ಅಲ್ಲಿ ಭಾಗವಹಿಸಿದ್ದರು. ಇದರಿಂದ ಹಲವು ಅಥ್ಲೀಟ್‌ಗಳು ಸ್ಪೂರ್ತಿಯಾಗಿದ್ದರು.

ಆದರೆ, ಶ್ರೀ ಕಂಠೀರವ ಕ್ರೀಡಾಂಗಣವು ಮತ್ತೆ ಹೈಲೈಟ್‌ ಆಗಿದೆ. ಕ್ರೀಡಾಪಟುಗಳು ಮತ್ತು ತರಬೇತುದಾರರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (DYES) ಪ್ರವೇಶ ಶುಲ್ಕವನ್ನು ಸಂಗ್ರಹಿಸುವ ನಿರ್ಧಾರಕ್ಕೆ ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಇಲ್ಲಿಯವರೆಗೆ ತರಬೇತಿ ಅವಧಿಗಳಿಗಾಗಿ ಸೌಲಭ್ಯವನ್ನು ಉಚಿತವಾಗಿ ಬಳಸುತ್ತಿದ್ದರು.

“ರಾಜ್ಯಕ್ಕಾಗಿ ಪ್ರಶಸ್ತಿಗಳನ್ನು ಗೆಲ್ಲಲು ಕಠಿಣ ತರಬೇತಿ ಪಡೆಯುವ ಯುವಕರನ್ನು ಉತ್ತೇಜಿಸುವ ಬದಲು, ಸರ್ಕಾರವು ಅವರಿಗೆ ಕಷ್ಟವಾಗುವಂತೆ ಮಾಡಲು ಪ್ರಯತ್ನಿಸುತ್ತಿದೆ. ಕಂಠೀರವ ಕ್ರೀಡಾಂಗಣವು ಸರ್ಕಾರಿ ಸೌಲಭ್ಯವಾಗಿದ್ದು, ರಾಜ್ಯ ಅಥವಾ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಅಲ್ಲಿ ತರಬೇತಿ ಪಡೆಯಲು ತಿಂಗಳಿಗೆ 300 ರೂ. ಅಥವಾ ವರ್ಷಕ್ಕೆ 3,000 ರೂ. ಪಾವತಿಸಬೇಕೆಂದು ಕೇಳುವುದು ಅನ್ಯಾಯ” ಎಂದು ಸ್ಥಳದಲ್ಲಿ ತರಬೇತಿ ಅವಧಿಗಳನ್ನು ನಡೆಸುವ ತರಬೇತುದಾರರೊಬ್ಬರು ತಿಳಿಸಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: Sangli: ಸಾಂಗ್ಲಿಯ `ಇಸ್ಲಾಮ್‌ಪುರ’ ಈಗ `ಈಶ್ವರಪುರ’: ಮರುನಾಮಕರಣಕ್ಕೆ ಸರ್ಕಾರ ನಿರ್ಧಾರ

Comments are closed.