Gokarna: ವಿದೇಶಿಗರಿಗೆ ಗುಹೆಗಳು ಇಷ್ಟವೇಕೆ ?

Gokarna: ಉತ್ತರ ಕನ್ನಡದ ಗೋಕರ್ಣದ ಕಾಡಿನ ಗುಹೆಯೊಂದರಲ್ಲಿ ರಷ್ಯನ್ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಇರುವುದು ಇತ್ತೀಚೆಗೆ ಪತ್ತೆಯಾಗಿತ್ತು. ಬಳಿಕ ಈಕೆಯನ್ನು ರಕ್ಷಣೆ ಕೂಡ ಮಾಡಲಾಗಿದೆ. ಈ ಬೆನ್ನಲ್ಲೇ ಪ್ರವಾಸಿ ತಾಣದ ಗುಹೆಗಳನ್ನು ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ. ಅದರಲ್ಲೂ ವಿದೇಶಿಗರಿಗೆ ಗುಹೆಗಳು ಇಷ್ಟವಾಗುವುದು ಏಕೆ? ಎಂಬ ಕುತೂಹಲ ಕೂಡ ಕಾಡುತ್ತಿದೆ.

ಗೋಕರ್ಣದ ಕಾಡಲ್ಲಿ ರಷ್ಯನ್ ಮಹಿಳೆ ಪತ್ತೆಯಾದ ಬಳಿಕ ಕೆಲವೊಂದು ವಿಚಾರಗಳು ಬಹಿರಂಗವಾಗಿವೆ. ವಿದೇಶಗರು ಗುಹೆಗಳಲ್ಲಿ ಏನು ಮಾಡುತ್ತಾರೆ ಎಂಬುದರ ಕುರಿತು ಸ್ಥಳೀಯರು ಒಬ್ಬರು ಮಾಹಿತಿ ನೀಡಿದ್ದು ಮಳೆಗಾಲದ ಬಳಿಕ ಗೋಕರ್ಣಕ್ಕೆ ಬರುವ ವಿದೇಶಿ ಪ್ರವಾಸಿಗರು ನಾಲ್ಕೈದು ತಿಂಗಳು ತಂಗುತ್ತಾರೆ. ಬೇಸಿಗೆಯಲ್ಲಿ ತಮ್ಮೂರಿಗೆ ಮರಳುತ್ತಾರೆ. ಇಲ್ಲಿದ್ದಷ್ಟು ದಿನ ಗುಹೆಗಳಲ್ಲಿ ಮೋಜು ಮಾಡುತ್ತಾರೆ. ಕೆಲವರು ಮಾತ್ರ ಧ್ಯಾನ, ಏಕಾಂತ ಬಯಸಿ ಗುಹೆಯಲ್ಲಿ ಇರುತ್ತಾರೆ’ ಎಂದು ತಿಳಿಸಿದರು.
ಅಲ್ಲದೆ ‘ಗೋಕರ್ಣದಲ್ಲಿ ಗುಡ್ಡದ ಮೇಲಿರುವ ಗುಹೆಗಳಿಗೆ ಸಾಗಲು ಹಲವು ದೂರ ಕಾಲ್ನಡಿಗೆ ಅನಿವಾರ್ಯ. ಕಡಿದಾದ ದಾರಿ ಕುರುಚಲು ಪೊದೆಗಳನ್ನು ದಾಟಿ ಸಾಗಬೇಕು.. ಪೊಲೀಸರು ಇಂತಹ ಸ್ಥಳಗಳಿಗೆ ಬರುವುದು ವಿರಳ. ಇದೇ ಕಾರಣಕ್ಕೆ ಗುಹೆ ಗುಡ್ಡದ ಪ್ರದೇಶದಲ್ಲಿ ಮಾದಕ ವ್ಯಸನ ಚಟುವಟಿಕೆಗಳು ನಡೆಯುವುದು ಹೆಚ್ಚು. ಪೊಲೀಸರು ಭೇಟಿ ನೀಡಿದಾಗ ಧ್ಯಾನಸ್ಥರಾಗಿ ಕೂತಂತೆ ನಟಿಸುತ್ತಾರೆ’ ಎಂದು ಹೋಟೆಲ್ ಉದ್ಯಮಿಯೊಬ್ಬರು ಹೇಳಿದರು.
ಇನ್ನು ‘2018ರಲ್ಲಿ ರಷ್ಯನ್ ಪ್ರವಾಸಿಗನೊಬ್ಬ, ವೀಸಾ ಅವಧಿ ಮುಗಿದರೂ ಇಲ್ಲಿ ವಾಸವಿದ್ದ. ರಾಮತೀರ್ಥ ಗುಹೆಯಲ್ಲೇ ಸಿಕ್ಕಿಬಿದ್ದಿದ್ದ. ವೀಸಾ ಅವಧಿ ಮೀರಿದ ನಂತರವೂ ಉಳಿಯುವ ಪ್ರವಾಸಿಗರು ಹೋಮ್ ಸ್ಟೇ, ರೆಸಾರ್ಟ್ಗಳಲ್ಲಿ ತಂಗಲು ಹಿಂಜರಿಯುತ್ತಾರೆ. ಅಲ್ಲಿ ವಿದೇಶಿಗರು ಸಿ-ಫಾರಂ (ದೃಢೀಕರಣ ಪತ್ರ) ಭರ್ತಿ ಮಾಡಬೇಕು. ಇದೇ ಕಾರಣಕ್ಕೆ ಗುಹೆ, ಜನ ಸಂಚಾರ ಇಲ್ಲದ ಗುಡ್ಡ, ಕಡಲತೀರದ ಪ್ರದೇಶಗಳನ್ನು ಆಯ್ದು ಅಲ್ಲಿಯೇ ತಿಂಗಳುಗಟ್ಟಲೆ ವಾಸ್ತವ್ಯ ಹೂಡುತ್ತಾರೆ’ ಎಂದು ಸ್ಥಳೀಯ ನಿವಾಸಿ ಮಾಣಿ ಗೌಡ ಹೇಳಿದರು.
Comments are closed.