Mangalore: ಮಂಗಳೂರಿನ ನೂತನ ಡಿಸಿಪಿಯಾಗಿ ಆಯ್ಕೆಯಾದ ಮಿಥುನ್‌ ಎಚ್.ಎನ್!

Share the Article

Mangalore: ಮಂಗಳೂರು (Mangalore) ಕಮಿಷನರೇಟ್ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಡಿಸಿಪಿಯಾಗಿ ಮಿಥುನ್ ಎಚ್‌.ಎನ್‌ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶವನ್ನು ನೀಡಿದೆ. ಇವರು ಈ ಮೊದಲು ಉಡುಪಿ ಕರಾವಳಿ ಕಾವಲು ಪಡೆಯ ಎಸ್ಪಿಯಾಗಿದ್ದರು.

ಇದೇ ಜು.14ರಂದು ನಕ್ಸಲ್ ನಿಗ್ರಹ ಪಡೆಯ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಈ ಆದೇಶ ರದ್ದುಗೊಳಿಸಿ ಅದೇ ಹುದ್ದೆಯಲ್ಲಿ ಮುಂದುವರೆಸಿದೆ.

ಈ ಹಿಂದೆ ಡಿಸಿಪಿಯಾಗಿದ್ದ ಸಿದ್ಧಾರ್ಥ ಗೋಯಲ್ ಅವರನ್ನು ಬಾಗಲಕೋಟೆ ಎಸ್ಪಿಯಾಗಿ ನಿಯುಕ್ತಿಗೊಳಿಸಲಾಗಿದೆ.

ಇದನ್ನೂ ಓದಿ: Ujire : ಎಸ್.ಡಿ.ಎಂ ಪದವಿಪೂರ್ವ ಕಾಲೇಜಿನ ಕಬಡ್ಡಿ ಆಟಗಾರ ಆಶಿಶ್ ರವರಿಗೆ ರಾಷ್ಟ್ರಮಟ್ಟದಲ್ಲಿ ಕಂಚು!

Comments are closed.